
ಬೆಂಗಳೂರು, ಡಿಸೆಂಬರ್ 12: ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ ಬೆಲೆ ಬಾಳುವ ಫಾರಿನ್ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ (electric shock) ಹೊಡೆದು ಯುವಕನೋರ್ವ ಸಾವನ್ನಪ್ಪಿರುವಂತಹ (death) ಘಟನೆ ಗಿರಿನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅರುಣ್ ಕುಮಾರ್ (32) ಮೃತ ದುರ್ದೈವಿ. ಸದ್ಯ ಗಿರಿನಗರ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ.
ಗಿಳಿಯೊಂದು ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ ಒಳಭಾಗದಲ್ಲಿರುವ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಅರುಣ್ ಕುಮಾರ್, ಈ ವೇಳೆ ಗಿಳಿ ರಕ್ಷಣೆಗೆ ಮುಂದಾಗಿದ್ದಾರೆ. ಅಪಾರ್ಟ್‌ಮೆಂಟ್ ಕಾಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಲ್ಲಿ ಭಾರೀ ವಂಚನೆ: ಅಮೆರಿಕ, ಬ್ರಿಟನ್ ಪ್ರಜೆಗಳ ಕೋಟ್ಯಂತರ ರೂ. ದೋಚಿದ ಬೆಂಗಳೂರು ಗ್ಯಾಂಗ್!
ಅರುಣ್ ಕುಮಾರ್ ಅವರ ಉದ್ದೇಶ ಸರಿಯಾಗಿದ್ದರೂ ವಿಧಿಯಾಟ ಬೇರೆಯೇ ಇತ್ತು. ಈ ವೇಳೆ 66 ಸಾವಿರ ಕೆವಿ ವಿದ್ಯುತ್ ವೈರ್ನಿಂದ ಹೊಡೆದ ಶಾಕ್ಗೆ ಅರುಣ್ ಕಾಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಇನ್ನು ಸ್ಥಳಕ್ಕೆ ಬೆಸ್ಕಾಂ ಮತ್ತು ಕೆಇಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಅಪಾರ್ಟ್‌ಮೆಂಟ್ ಒಳಗೆ 65 ಸಾವಿರ ಕೆವಿ ಸಾಮರ್ಥ್ಯದ ವೈರ್ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಹೃದಯಾಘಾತದಿಂದ ಕೆಡಿಎಂ ಕಿಂಗ್-108 ಹೆಸರಿನ ಕೊಬ್ಬರಿ ಹೋರಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸದ್ಯ ಹಿಂದೂ ಸಂಪ್ರದಾಯದ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ.
ಇದನ್ನೂ ಓದಿ: ಇಡೀ ರಾಜ್ಯದಲ್ಲಿ ಹಬ್ಬಿದ್ದ ನಕಲಿ ಲೈಂಗಿಕ ಔಷಧಿ ಜಾಲ; ಗುಜರಾತ್ ಮೂಲದ ಆರೋಪಿ ಮನೋಜ್ ಅಂದರ್
ಸುಮಾರು 12 ವರ್ಷ ವಿವಿಧ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಬಹುಮಾನ ಗೆದ್ದಿತ್ತು. ಮಸಣದ ದೊರೆ, ಕಿಲ್ಲಿಂಗ್ ಸ್ಟಾರ್, ಮಲೆನಾಡ ಜನರ ಜೀವಾ, ಕಾಂತೇಶನ ವರಪ್ರಸಾದ ಎಂದು ಕೊಬ್ಬರಿ ಹೋರಿ ಬಿರುದು ಪಡೆದಿತ್ತು. ಮನೆ ಮುಂಭಾಗ ಹೋರಿಯ ದೇವಸ್ಥಾನ ಕಟ್ಟಿಸಲು ಮಾಲೀಕ ಕಾಂತೇಶ ನಾಯಕ್ ನಿರ್ಧರಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:19 pm, Fri, 12 December 25