Bannerghatta National Park: ಕೊರೊನಾ ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ

|

Updated on: Apr 05, 2023 | 2:25 PM

ಮಹಾಮಾರಿ ಕೊರೊನಾದಿಂದ ನಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಪಾರ್ಕ್​ಗೆ 2022-23‌ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಕೋಟ್ಯಾಂತರ ಆದಾಯ ಹರಿದು ಬಂದಿದೆ.

Bannerghatta National Park: ಕೊರೊನಾ ನಂತರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆ ಪ್ರಮಾಣದಲ್ಲಿ ಆದಾಯ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
Follow us on

ಆನೇಕಲ್: ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(Bannerghatta National Park and Zoo) ದಾಖಲೆ ಆದಾಯ ಗಳಿಸಿದೆ. ಮಹಾಮಾರಿ ಕೊರೊನಾದಿಂದ(Coronavirus) ನಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಪಾರ್ಕ್​ಗೆ 2022-23‌ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಕೋಟ್ಯಾಂತರ ಆದಾಯ ಹರಿದು ಬಂದಿದೆ. ಒಟ್ಟು 53 ಕೋಟಿ, 89 ಲಕ್ಷ, 75‌ ಸಾವಿರದಷ್ಟು ಆದಾಯವನ್ನು ಈ ವರ್ಷ ಗಳಿಸಿದೆ. ಶಾಲೆ ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದ್ದು ಮಕ್ಕಳನ್ನು ಬನ್ನೇರುಘಟ್ಟಕ್ಕೆ ಕರೆದುಕೊಂಡು ಬರುವ ಪೋಷಕರ ಸಂಖ್ಯೆ ಹೆಚ್ಚಾಗಿದೆ.

ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕಾದ ಆಕರ್ಷಣೀಯ ಸ್ಥಳವಾಗಿರುವ ಬೆಂಗಳೂರು ನಗರ ಜಿಲ್ಲೆಯ ‌ಆನೇಕಲ್ ತಾಲೂಕಿನ ಬನ್ನೇರುಘಟ್ಟಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಉತ್ತಮ ಆದಾಯ ಕೂಡ ಬರುತ್ತಿದೆ. ಕಳೆದ‌ ವರ್ಷ 2 ಕೋಟಿ ಆದಾಯ ಬಂದಿತ್ತು. 2020 ರಲ್ಲಿ 1‌‌ ಕೋಟಿ 53 ಲಕ್ಷ ಆದಾಯ ಬಂದಿತ್ತು. ಕೋವಿಡ್ ಕಾಲದ ಮುಂಚೆ ಅಂದ್ರೆ 2019-20 ರಲ್ಲಿ 3 ಕೋಟಿ 19 ಲಕ್ಷ ಆದಾಯ ಬಂದಿತ್ತು. ಆದರೆ‌ ಈ ಬಾರಿ ಬನ್ನೇರುಘಟ್ಟ ಪಾರ್ಕ್ ದಾಖಲೆ ಆದಾಯ ಗಳಿಸಿದೆ. ಈ ಬಾರಿ 2‌ ಕೋಟಿಗೂ ಅಧಿಕ ಲಾಭ ಬಂದಿದೆ. 2022-23 ರಲ್ಲಿ ಒಟ್ಟು 20,22,997 ಪ್ರವಾಸಿಗರು ಭೇಟಿ ನೀಡಿದ್ದಾರೆ. 2021-22 ರಲ್ಲಿ 9,41,613 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಕೊರೊನಾ ಹಿನ್ನೆಲೆ ನಷ್ಟು ಅನುಭವಿಸಿದ್ದ ಪಾರ್ಕ್ ಕೊರೊನಾ ನಂತರ ಟಿಕೆಟ್ ದರ ಹೆಚ್ಚಿಸಿತ್ತು. ಸದ್ಯ ಈಗ ಉತ್ತಮ ಆದಾಯ ಗಳಿಸಿದೆ.

ಇದನ್ನೂ ಓದಿ: ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ಇಂದಿರಾ ಗಾಂಧಿ ಇದ್ದಾಗ ಇದ್ದದ್ದು 12 ಹುಲಿ, ಈಗ ಎಷ್ಟು?

ಜೀಪ್ ಸಫಾರಿಗೆ 3500ರೂ (ಇದು ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ), ಎಸಿ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 650 ಮತ್ತು ಮಕ್ಕಳಿಗೆ 450 ರೂ ಇದೆ(ಇದರಲ್ಲಿ ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ). ಎಸಿ ಅಲ್ಲದ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 330 ರೂ ಮತ್ತು ಮಕ್ಕಳಿಗೆ 180 ರೂ ಇದೆ. (ಇದು ಮೃಗಾಲಯ ಮತ್ತು ಸಫಾರಿಗಳನ್ನು ಒಳಗೊಂಡಿರುತ್ತದೆ). ಬೆಳಿಗ್ಗೆ 9:30 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಸಫಾರಿ ಸಮಯ ಬೆಳಿಗ್ಗೆ 10 ರಿಂದ 4: 30 ರವರೆಗೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:25 pm, Wed, 5 April 23