ನಾಲ್ಕು ದಿಕ್ಕುಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ -ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: Mar 07, 2023 | 2:38 PM

ಬೆಂಗಳೂರು ದಕ್ಷಿಣ ಕ್ಷೇತ್ರದ 100ನೇ ಜನೌಷಧಿ ಕೇಂದ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಮನ್​ಸುಖ್ ಉದ್ಘಾಟಿಸಿದರು.

ನಾಲ್ಕು ದಿಕ್ಕುಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ -ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಮನ್​ಸುಖ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ 100ನೇ ಜನೌಷಧಿ ಕೇಂದ್ರ ಉದ್ಘಾಟಿಸಿದ್ದಾರೆ. ಉಚಿತ ಡಯಾಲಿಸಿಸ್ ಕೇಂದ್ರ, 4 ಮೊಬೈಲ್ ಹೆಲ್ತ್ ಕ್ಲಿನಿಕ್​ಗಳಿಗೆ ಚಾಲನೆ ನೀಡಿದ್ದಾರೆ. ಜಯನಗರದ ಕೆಎಸ್​​ಆರ್​ಟಿಸಿ ಆಸ್ಪತ್ರೆ ಅವರಣದಲ್ಲಿ ಕಾರ್ಯಕ್ರಮ ನಡೆದಿದ್ದು ಸಚಿವರಾದ ಡಾ.ಸುಧಾಕರ್, ಆರ್​.ಅಶೋಕ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

ನಾಲ್ಕು ದಿಕ್ಕುಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ

ಜನೌಷಧಿ ಕೇಂದ್ರ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ತೇಜಸ್ವಿ ಸೂರ್ಯರವರ ಕ್ಷೇತ್ರದಲ್ಲಿ ಮೂರನೇ ಜನೌಷಧಿ ಕೇಂದ್ರ ಉದ್ಘಾಟಿಸಲಾಗಿದೆ. ಭಾರತದಲ್ಲಿ ಅತಿಹೆಚ್ಚು ಜನೌಷಧಿ ಕೇಂದ್ರಗಳಿವೆ. ಇದರ ಮೂಲಕ ಬಡವರ ಮೇಲೆ ಇರುವ ಕಾಳಜಿ ಗೊತ್ತಾಗುತ್ತೆ. ವಾಸವಿ ಸಂಸ್ಥೆಯಿಂದ ಡಯಾಲಿಸಿಸ್ ಕೇಂದ್ರ, ಮೊಬೈಲ್ ಕ್ಲಿನಿಕ್ ನಿರ್ವಾಹಣೆಯಾಗುತ್ತೆ.

ಬಡವರಿಗಾಗಿ ಮೋದಿಯವರು ಅತ್ಯಂತ ಕಡಿಮೆ ದರದಲ್ಲಿ ಔಷಧಿಗಳನ್ನ ಕೊಡ್ತಿದ್ದಾರೆ. ಬಡತನದಿಂದ ಬಂದ ಮೋದಿಯವರಿಗೆ ಬಡತನದ ಬಗ್ಗೆ ಗೊತ್ತು. ಹೀಗಾಗಿ ಇದನ್ನ ಮಾಡಿದ್ದಾರೆ. 100 ರೂಪಾಯಿ ಕೊಟ್ಟು ಬಡವರು ಔಷಧಿ ತೆಗೆದುಕೊಳ್ಳುವುದು ಕಷ್ಟ. ಹೀಗಾಗಿ ಪ್ರಧಾನಿ ಮೋದಿ ಯೋಜನೆ ಜಾರಿ ಮಾಡಿದ್ದಾರೆ.

ಎಲ್ಲಾ ಮನೆಗಳಿಗೆ ಇನ್ನು 5 ವರ್ಷದಲ್ಲಿ ನೀರು ಕೊಡ್ತೀನಿ ಅಂತಾ ಪ್ರಧಾನಿ ಹೇಳಿದರು. ಆದ್ರೆ ಇದುವರೆಗೂ ಬೇರೆ ಯಾವ ಪ್ರಧಾನಿಯಾದರು ಈ ರೀತಿ ಹೇಳಿದ್ದಾರಾ? ಛಲ, ಬದ್ಧತೆ, ಹೃದಯ ವೈಶಾಲ್ಯತೆ ಇದ್ರೆ ಮಾತ್ರ ಇದು ಸಾಧ್ಯ ಅಂತಾ ಜಲಜೀವನ್ ಮಿಷನ್ ಮೂಲಕ ಮೋದಿ ಮಾಡಿ ತೋರಿಸಿದ್ದಾರೆ. 10 ಕೋಟಿಗಿಂತ ಹೆಚ್ಚು ಮನೆಗಳಿಗೆ ನೀರು ಕೊಡ್ತಿದ್ದಾರೆ. ಅಸಾಧ್ಯವನ್ನು ಸಾಧ್ಯವಾಗಿಸುವವರು ಪ್ರಧಾನಿ ಮೋದಿ. ಹೆಚ್ಚೆಚ್ಚು ಆಸ್ಪತ್ರೆಗಳ ನಿರ್ಮಾಣ ಮಾಡುತ್ತಿದ್ದೇವೆ. ನಾಲ್ಕು ದಿಕ್ಕುಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ. ಬೆಂಗಳೂರಿನಲ್ಲೂ ಆಸ್ಪತ್ರೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:38 pm, Tue, 7 March 23