ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹಧನ; ಬಿತ್ತನೆ ಗೂಡು, ಬಿಚ್ಚಾಣಿಕೆದಾರರಿಗೂ ಪ್ರೋತ್ಸಾಹಧನ

| Updated By: ganapathi bhat

Updated on: Mar 04, 2022 | 3:09 PM

Karnataka Budget 2022: ದ್ವಿತಳಿ ಬಿತ್ತನೆ ಗೂಡಿಗೆ ಕೆಜಿಗೆ ₹50 ಪ್ರೋತ್ಸಾಹಧನ ಹೆಚ್ಚಳ ಮಾಡಲಾಗಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೂ ಪ್ರೋತ್ಸಾಹಧನ ನೀಡಲಾಗುವುದು. ಮಂಡ್ಯ ಜಿಲ್ಲೆ ಕೆ.ಆರ್. ಮಾರ್ಕೆಟ್‌ನಲ್ಲಿ ರೇಷ್ಮೆ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ. ಪ್ರೋತ್ಸಾಹಧನ; ಬಿತ್ತನೆ ಗೂಡು, ಬಿಚ್ಚಾಣಿಕೆದಾರರಿಗೂ ಪ್ರೋತ್ಸಾಹಧನ
ರೇಷ್ಮೆ ಬೆಳೆಗಾರ
Follow us on

ಬೆಂಗಳೂರು: ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದಿಸಿ ಸಂಗ್ರಹಿಸಿಡಲು ಶೈತ್ಯಾಗಾರ ಸ್ಥಾಪನೆ ಮಾಡಲಾಗುವುದು. 15 ಕೋಟಿ ವೆಚ್ಚದಲ್ಲಿ ರಾಜ್ಯದ 3 ಸ್ಥಳಗಳಲ್ಲಿ ಶೈತ್ಯಾಗಾರ ಸ್ಥಾಪನೆ ಮಾಡಲಾಗುವುದು. ಮದ್ದೂರು, ರಾಣೆಬೆನ್ನೂರು, ದೇವನಹಳ್ಳಿಯಲ್ಲಿ ಶೈತ್ಯಾಗಾರ ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. 30 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಕಲಬುರಗಿ, ಹಾವೇರಿಯಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿದೆ.

ದ್ವಿತಳಿ ಬಿತ್ತನೆ ಗೂಡಿಗೆ ಕೆಜಿಗೆ ₹50 ಪ್ರೋತ್ಸಾಹಧನ ಹೆಚ್ಚಳ ಮಾಡಲಾಗಿದೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೂ ಪ್ರೋತ್ಸಾಹಧನ ನೀಡಲಾಗುವುದು. ಮಂಡ್ಯ ಜಿಲ್ಲೆ ಕೆ.ಆರ್. ಮಾರ್ಕೆಟ್‌ನಲ್ಲಿ ರೇಷ್ಮೆ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಲಾಗಿದೆ.

ಕಾರವಾರ ಬಂದರು ವಿಸ್ತರಣೆಗೆ ಈ ಬಾರಿ ಬಜೆಟ್‌ನಲ್ಲಿ ಹೊಸ ಸ್ಕೀಮ್

ಕೇಂದ್ರದ ಸಾಗರಮಾಲಾ ಯೋಜನೆ ಅಡಿ 1,880 ಕೋಟಿ ರೂ. ನೀಡಲಾಗುವುದು. 1,880 ಕೋಟಿ ರೂಪಾಯಿ ವೆಚ್ಚದಲ್ಲಿ 24 ಯೋಜನೆಗಳ ಅನುಷ್ಠಾನ ಮಾಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಕಾರವಾರ ಬಂದರು ವಿಸ್ತರಣೆಗೆ ಈ ಬಾರಿ ಬಜೆಟ್‌ನಲ್ಲಿ ಹೊಸ ಸ್ಕೀಮ್ ನೀಡಲಾಗಿದೆ. ಬೈಂದೂರು, ಮಲ್ಪೆಯಲ್ಲಿ ವಿವಿಧೋದ್ದೇಶ ಬಂದರು ನಿರ್ಮಾಣ ಚಿಂತನೆ ನಡೆಸಲಾಗಿದೆ. ಎರಡೂ ಕಡೆಗಳಲ್ಲಿ ಬಂದರು ನಿರ್ಮಿಸಲು ಕಾರ್ಯಯೋಜನೆ ಸಿದ್ಧತೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ಸ್ಥಾಪನೆ ಮಾಡಲಾಗುವುದು. ಮಾಜಾಳಿಯಲ್ಲಿ PM ಮತ್ಸ್ಯಸಂಪದ ಯೋಜನೆಯಡಿ 250 ಕೋಟಿ ರೂ. ನೀಡಲಾಗುವುದು. ಹಳೇ ಮಂಗಳೂರು ಬಂದರಿನಲ್ಲಿ ಮೂಲಸೌಕರ್ಯಕ್ಕೆ 350 ಕೋಟಿ ರೂ. ನೀಡಲಾಗುವುದು. ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ, ಇತರೆ ಸೇವೆ ನೀಡಲಾಗುವುದು. ಉತ್ತರ ಕನ್ನಡದಲ್ಲಿ ಕೇಣಿ-ಬೆಳಕೇರಿಯಲ್ಲಿ ಗ್ರೀನ್ ಫೀಲ್ಡ್ ಬಂದರು ಹಾಗೂ ಕಾರವಾರದಲ್ಲಿ ಜಲಸಾರಿಗೆ ಹಾಗೂ ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.

ನದಿಗಳಿಗೆ ನುಗ್ಗುವ ಉಪ್ಪು ನೀರು ತಡೆಗಟ್ಟಲು ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ, ಪ್ರವಾಹದಿಂದ ಹಾನಿಯಾದ ಕೆರೆಗಳಿಗೆ 200 ಕೋಟಿ ರೂಪಾಯಿ, ಕಾಳಿ ನದಿಯಿಂದ ನೀರು ಬಳಸಿಕೊಂಡು 5 ಜಿಲ್ಲೆಗಳಿಗೆ ನೀರು ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಬಂದರು ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ₹1,880 ಕೋಟಿ ರೂ. ಮೀಸಲಿಡಲಾಗಿದೆ. ₹250 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ. ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಬಂದರು ನಿರ್ಮಾಣ ಮಾಡಲಾಗುವುದು. ₹350 ಕೋಟಿ ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ ಮಾಡಲಾಗುವುದು. ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪಿಸಲಾಗುವುದು. ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: Karnataka Budget 2022: ಕರ್ನಾಟಕದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್; ಯಾವ ಇಲಾಖೆಗೆ ಎಷ್ಟು ಅನುದಾನ?

ಇದನ್ನೂ ಓದಿ: Karnataka Budget 2022 Live: ಈ ಬಾರಿಯ ಬಜೆಟ್​ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಭರಪೂರ ಕೊಡುಗೆ; ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ.

Published On - 3:08 pm, Fri, 4 March 22