ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ನಲ್ಲಿ ಭಾರತದ ಹಲವರು ಸಿಲುಕಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಿಲುಕಿದ್ದಾರೆ. ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಲಿಸ್ಟ್ ಮಾಡಿ ಕಳಿಸಿದ್ದೇವೆ. ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪಟ್ಟಿ ಕಳುಹಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ನ ಪಶ್ಚಿಮ ಭಾಗದಿಂದ ರೊಮೇನಿಯಾಗೆ ಬರುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರೆಲ್ಲ ಭಾರತಕ್ಕೆ ಹಿಂದಿರುಗುತ್ತಾರೆ. ರಷ್ಯಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಕ್ರೇನ್ ನಲ್ಲಿ ಕನ್ನಡಿಗರು ಸಿಲುಕಿರುವ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಇಚ್ಚೆಯಿಂದ ಯಾರು ಸಹ ಉಕ್ರೇನ್ ಗಡಿಗಳಿಗೆ ಹೋಗಬೇಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಲ್ಲಿಯ ಸರ್ಕಾರಗಳ ಜೊತೆ ಸಂಪರ್ಕದಲ್ಲಿವೆ. ಇರೊ ಸ್ಥಳದಲ್ಲೆ ಸುರಕ್ಷಿತವಾಗಿ ಇರಿ. ಕೆಲವೇ ದಿನಗಳಲ್ಲಿ ಯುದ್ದ ವಿರಾಮ ಆಗಬಹುದು. ನಾನು ಮತ್ತು ಮುಖ್ಯಮಂತ್ರಿಗಳು ವಿದೇಶಾಂಗ ಇಲಾಖೆಯ ಜೊತೆ ಸಂಪರ್ಕದಲ್ಲಿ ಇದ್ದೇವೆ. ಉಕ್ರೇನ್ ನಲ್ಲಕಿರುವ ಕನ್ನಡಿಗರು ಸೇಪ್ ಆಗಿ ಇದ್ದಾರೆ. ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಯುದ್ಧ ನಡೆಯುತ್ತಿರುವ ಉಕ್ರೇನ್ನಲ್ಲಿ ಕನ್ನಡಿಗರು, ತಮಿಳುನಾಡು, ಆಂಧ್ರ ಮೂಲದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಬಾಗಲಕೋಟೆಯ ಸ್ಪೂರ್ತಿ ದೊಡ್ಡಮನಿ ಸೇರಿದಂತೆ ಇತರೆ ವಿದ್ಯಾರ್ಥಿಗಳು ಆತಂಕದಲ್ಲಿ ಇದ್ದಾರೆ. ಇಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತಿದ್ದು ಭಯಾನಕ ಸದ್ದು ಕೇಳುತ್ತಿದೆ. ನಾವು ಬಾಂಬ್ ಶೆಲ್ಟರ್ ನಲ್ಲಿದ್ದೇವೆ. ಇಲ್ಲಿ ಬಹಳ ಕೆಟ್ಟ ಪರಿಸ್ಥಿತಿ ಇದೆ. ಸರಿಯಾಗಿ ಆಹಾರ ನೀರು ಇಲ್ಲ. ಇಂಟರ್ನೆಟ್ ಸೌಲಭ್ಯವಿಲ್ಲ. ಎಲೆಕ್ಟ್ರಿಸಿಟಿ ಸೌಲಭ್ಯವಿಲ್ಲ. ನಾವು ನಿನ್ನೆ ಸೂಪರ್ ಮಾರ್ಕೆಟ್ಗೆ ಹೋದರೆ ಸರಿಯಾಗಿ ಯಾವುದೇ ಆಹಾರ ಪದಾರ್ಥ ಸಿಕ್ಕಿಲ್ಲ. ನಮ್ಮ ಬಳಿ ಹೆಚ್ಚು ಹಣ ಕೂಡ ಇಲ್ಲ. ಎರಡು ಲೀಟರ್ ನೀರಿನಲ್ಲಿ ನಿನ್ನೆ ಇಡೀ ದಿನ ನಾವು ಹತ್ತು ಜನ ಕುಡಿದಿದ್ದೇವೆ. ಖಾರ್ಕೀವ್ ನಲ್ಲಿ ಬಾಂಬ್ ಶೆಲ್ಟರ್ ನಲ್ಲಿರುವ ವಿದ್ಯಾರ್ಥಿಗಳು, ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ಹಿನ್ನೆಲೆ, ಉಕ್ರೇನ್ ದೇಶದಲ್ಲಿ ಸಿಲುಕಿರೋ ರಾಣೆಬೆನ್ನೂರು ನಗರದ ವಿದ್ಯಾರ್ಥಿ ಗಣೇಶ ಶಿವಲಿಂಗಪ್ಪನವರ ಮಾತನಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ತೆರಳಿದ್ದ ಗಣೇಶ, ಊಟದ ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಮೆಟ್ರೋ ಅಂಡರ್ ಗ್ರೌಂಡನ್‌ಲ್ಲಿ ರಾತ್ರಿ ಕಳೆದ ಗಣೇಶ ಮತ್ತು ಆತನ ಸ್ನೇಹಿತರು, ಆದಷ್ಟು ಬೇಗ ಕೇಂದ್ರ ಸರ್ಕಾರ ನಮ್ಮ ಮಗನನ್ನ ಸುರಕ್ಷಿತವಾಗಿ ಕರೆತರಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿಗಣೇಶ ಪೋಷಕರು ಆತಂಕದಲ್ಲಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಏರ್ಲಿಫ್ಟ್ಗೆ ಸೂಚನೆ
ಈ ಮಧ್ಯೆ, ಹಲವು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಪೋಲೆಂಡ್ ಗಡಿಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. MEA ಪೋಲೆಂಡ್, ರೊಮೇನಿಯಾ ಗಡಿಗೆ ಬರುವಂತೆ ಸೂಚಿಸಿತ್ತು. ಭಾರತದ ವಿದೇಶಾಂಗ ಇಲಾಖೆ ಸೂಚನೆ ಮೇರೆಗೆ ಆಗಮನ ಆಗಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಏರ್ಲಿಫ್ಟ್ಗೆ ಸೂಚನೆ ಕೊಡಲಾಗಿದೆ. ಈಗಾಗಲೇ ರೊಮೇನಿಯಾದಿಂದ 219 ಭಾರತೀಯರ ಏರ್ಲಿಫ್ಟ್ ಮಾಡಲಾಗಿದೆ. ಬುಕಾರೆಸ್ಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಉಕ್ರೇನ್‌ನಿಂದ ಮುಂಬೈಗೆ ಬರುವ ವಿಮಾನಗಳ ಸಮಯದಲ್ಲಿ ಬದಲಾವಣೆ ಉಂಟಾಗಿದೆ. ಸಂಜೆ 4.15ಕ್ಕೆ ಬರಬೇಕಿದ್ದ ವಿಮಾನ 8 ಗಂಟೆ ಸುಮಾರಿಗೆ ಬರುವ ಸಾಧ್ಯತೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿವಿಧ ದೇಶಗಳಿಂದ ಶಸ್ತ್ರಾಸ್ತ್ರ ಸಹಾಯ ಒದಗಲಿದೆ ಎಂದ ಉಕ್ರೇನ್; ಕದನದಲ್ಲಿ ಇದುವರೆಗೆ ಆದ ಸಾವು-ನೋವೆಷ್ಟು?
ಇದನ್ನೂ ಓದಿ: ‘ಯುದ್ಧಕ್ಕಿಂತ ಕೆಟ್ಟದ್ದು ಬೇರೆ ಯಾವುದೂ ಇಲ್ಲ’; ಉಕ್ರೇನ್-ರಷ್ಯಾ ಕದನದ ಬಗ್ಗೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ
Published On - 4:04 pm, Sat, 26 February 22