ಮ್ಯಾನ್ ಹೋಲ್​ಗೆ ಬಿದ್ದು ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ ಬೆನ್ನು ಮೂಳೆ ಮುರಿತ

ಕೆಲಸ‌ ಮಾಡುತ್ತಿದ್ದ ವೇಳೆ ಮ್ಯಾನ್ ಹೋಲ್​ಗೆ ಬಿದ್ದ ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ ಬೆನ್ನುಮೂಳೆ ಮುರಿದ ಘಟನೆ ಬೆಂಗಳೂರು ನಗರದ ನಂದಿನಿ ಲೇಜೌಟ್​ನ ಶ್ರೀಕಂಠ ನಗರದಲ್ಲಿ ನಡೆದಿದೆ.

ಮ್ಯಾನ್ ಹೋಲ್​ಗೆ ಬಿದ್ದು ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ ಬೆನ್ನು ಮೂಳೆ ಮುರಿತ
ಮ್ಯಾನ್ ಹೋಲ್​ಗೆ ಬಿದ್ದು ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ ಬೆನ್ನು ಮೂಳೆ ಮುರಿತ

Updated on: Jun 03, 2023 | 3:45 PM

ಬೆಂಗಳೂರು: ಕೆಲಸ‌ ಮಾಡುತ್ತಿದ್ದ ವೇಳೆ ಮ್ಯಾನ್ ಹೋಲ್​ಗೆ ಬಿದ್ದ ಬಿಬಿಎಂಪಿ (BBMP) ಸ್ವಚ್ಚತಾ ಸಿಬ್ಬಂದಿ ಬೆನ್ನುಮೂಳೆ ಮುರಿದ ಘಟನೆ ಬೆಂಗಳೂರು (Bengaluru) ನಗರದ ನಂದಿನಿ ಲೇಜೌಟ್​ನ ಶ್ರೀಕಂಠ ನಗರದಲ್ಲಿ ನಡೆದಿದೆ. ಮೇ 27ರಂದು ಸ್ವಚ್ಚತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರತ್ನಮ್ಮ ಅವರು ರಾಜಕಾಲುವೆ ಮೋರಿ ಮೇಲೆ ಹಾಕಿದ್ದ ಕಸ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಕಸದ ಕೆಳಗೆ ದೊಡ್ಡ ಮ್ಯಾನ್ ಹೋಲ್ ಇರುವ ಅರಿವಿಲ್ಲದೆ ಹೋದ ರತ್ನಮ್ಮ 20 ಅಡಿ ಆಳದ ಮೋರಿಗೆ ಬಿದ್ದಿದ್ದಾರೆ. ಬಳಿಕ‌ ಜೊತೆಯಿದ್ದ ಇನ್ನೊಬ್ಬ ಸಿಬ್ಬಂದಿ ಸ್ಥಳೀಯರನ್ನು ಕರೆದು ಏಣಿ ಮೂಲಕ ರತ್ನಮ್ಮರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬೆನ್ನು ಮೂಳೆ ಮುರಿದು ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Odisha Train Accident: ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಕ್ಯಾನ್ಸಲ್‌, ಒಡಿಶಾ ರೈಲು ದುರಂತದಲ್ಲಿ ಕನ್ನಡಿಗರು ಸೇಫ್

ಕಳೆದ 7 ವರ್ಷಗಳ ಹಿಂದೆ ನೀರು‌ ಹೋಗಲು ದೊಡ್ಡ ರಾಜಕಾಲುವೆ ಮೋರಿ‌ ನಿರ್ಮಾಣ ಮಾಡಲಾಗಿತ್ತು. ಆದರೆ ಬೃಹತ್ ಮೋರಿ ನಿರ್ಮಾಣ ಮಾಡಿದ ನಂತರ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ಸುತ್ತಮುತ್ತ ಸಾಕಷ್ಟು ಮನೆಯಿದೆ. ಒಂದು ವೇಳೆ ಮಕ್ಕಳು ಬಿದ್ದಿದ್ದರೆ ಏನು ಕತೆ ಅಂತ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ