ಬೆಂಗಳೂರು: ನಗರದಲ್ಲಿ ರಾಜಕಾಲುವೆ (Rajkaluve) ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಆರೋಪದಡಿ ಮಾಜಿ ಶಾಸಕ ನಂದೀಶ್ ರೆಡ್ಡಿ (Nandish Reddy) ವಿರುದ್ಧ ದೂರು ದಾಖಲಿಸಲು ಬಿಬಿಎಂಪಿ (BBMP) ಮುಂದಾಗಿದೆ. ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ಧ ದೂರು ನೀಡಲು ಸೂಚಿಸಿದ್ದೇನೆ. ಮಹದೇವಪುರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ (Criminal Case) ದಾಖಲಿಸಲು ಸೂಚಿಸಿದ್ದೇನೆ. ಕಾರ್ಯಾಚರಣೆಗೆ ಯಾರೇ ಅಡ್ಡಿಪಡಿಸಿದರೂ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸೋಮವಾರ (ಜೂ.19) ರಂದು ಮಹದೇವಪುರ ವಲಯ ದೊಡ್ಡನೆಕ್ಕುಂದಿಯ 24/1,3,4 ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ನಿವಾಸಿಗಳು ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದರು. ಹೀಗಾಗಿ ಬಿಬಿಂಪಿ ದೂರು ದಾಖಿಸಲು ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ, ಹಲವಡೆ ಟ್ರಾಫಿಕ್ ಜಾಮ್ ಅಂಡರ್ ಪಾಸ್ ಬಂದ್
ಇಂದು (ಜೂ.20) ಮತ್ತೆ ಬುಲ್ಡೋಜರ್ ಘರ್ಜಿಸಲಿದೆ. ದೊಡ್ಡನಕುಂದಿ ಹಾಗೂ ಪಣತ್ತೂರು ಎರಡು ಕಡೆ ಅಕ್ರಮ ಒತ್ತುವರಿಯನ್ನು ತೆರುವುಗೊಳಿಸಲಾಗುತ್ತದೆ. ಪಾಲಿಕೆ ಅಕ್ರಮ ಒತ್ತುವರಿ ವರದಿ ಪಡೆದಿದ್ದು, ಪಾಲಿಕೆ ವ್ಯಾಪ್ತಿಯ 8 ವಲಯಗಳ 100ಕ್ಕೂ ಹೆಚ್ಚು ಕಡೆ ಒತ್ತುವರಿಗೆ ಪ್ಲಾನ್ ಮಾಡಲಾಗಿದೆ.
ಇಂದು ಎರಡು ಭಾಗದಲ್ಲಿ ಪಾಲಿಕೆಯಿಂದ ತೆರವು ಕಾರ್ಯಚರಣೆ ನಡೆಯಲಿದೆ. ಪಾಲಿಕೆಯ ಟಾರ್ಗೆಟ್ ನಲ್ಲಿ 600 ಅಕ್ರಮ ಸ್ಥಳಗಳಿವೆ. ಒತ್ತುವರಿ ತೆರವುಗೊಳಿಸಲು ಸರ್ಕಾರ 15 ದಿನಗಳ ಡೆಡ್ ಲೈನ್ ನೀಡಿದೆ. 600 ಪೈಕಿ 110 ಕಡೆ ಕೋರ್ಟ್ನಿಂದ ತಡೆ ಆದೇಶ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Tue, 20 June 23