ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು 2 ಸಾವಿನ ಬಳಿಕ ಬುದ್ದಿ ಕಲಿತ ಬಿಬಿಎಂಪಿ(BBMP) IISC ತಜ್ಞರ ಮೊರೆ ಹೋಗಿದೆ. ಬಿಬಿಎಂಪಿಯ 18 ಅಂಡರ್ ಪಾಸ್ಗಳ ಕಾರ್ಯಕ್ಷಮತೆ ಬಗ್ಗೆ ವರದಿ ನೀಡಲು ತಜ್ಞರಿಗೆ ಸೂಚಿಸಿದೆ. ಹಾಗೂ ಅಂಡರ್‌ಪಾಸ್‌ಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಬಿಬಿಎಂಪಿಯ 18 ಅಂಡರ್ ಪಾಸ್ಗಳ ಪೈಕಿ 3 ಅಂಡರ್ ಪಾಸ್ಗಳು ಡೇಂಜರ್ ಎಂಬುವುದು ತಿಳಿದುಬಂದಿದೆ. ಈ ಮೂರು ಅಂಡರ್ ಪಾಸ್ಗಳು ಬಲಿಗಾಗಿ ಬಾಯ್ತೆರೆದು ಕಾಯುತ್ತಿವೆ. ಹೀಗಾಗಿ ಬಿಬಿಎಂಪಿ ಇಲಾಖೆ ಅಂಡರ್ ಪಾಸ್ಗಳ ಅಧ್ಯಯನಕ್ಕೆ IISC ತಜ್ಞರ ಮೊರೆ ಹೋಗಿದೆ. ಬೆಂಗಳೂರಿನ ಅಂಡರ್ ಪಾಸ್ಗಳ ಕಾರ್ಯ ಕ್ಷಮತೆ ಆಡಿಟ್ಗೆ ಬಿಬಿಎಂಪಿ ಮುಂದಾಗಿದ್ದು ಪಾಲಿಕೆ ವ್ಯಾಪ್ತಿಯ 18 ಅಂಡರ್ ಪಾಸ್ ಗಳ ಕಾರ್ಯಕ್ಷಮತೆ ಕುರಿತು ವರದಿ ನೀಡುವಂತೆ IISC ತಜ್ಞರಿಗೆ ಮನವಿ ಮಾಡಲಾಗಿದೆ. ಈಗಾಗಲೇ 18 ಅಂಡರ್ ಪಾಸ್ ಗಳಲ್ಲಿ ಮೂರು ಅಂಡರ್ ಪಾಸ್ ಡೇಂಜರ್ ಅಂದು ತಜ್ಞರು ತಿಳಿಸಿದ್ದಾರೆ. ಕೆ.ಆರ್. ಸರ್ಕಲ್, ಕಾವೇರಿ ಜಂಕ್ಷನ್ ಮುಂಭಾಗ, ಗಾಲ್ಫ್ ಕೋರ್ಟ್ ರಸ್ತೆ (ಸಿಎಂ ಮನೆ ಸಂಪರ್ಕದ ಅಂಡರ್ ಪಾಸ್). ಬಿಬಿಎಂಪಿ IISC ತಜ್ಞರ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಿದೆ.
ಇದನ್ನೂ ಓದಿ: ಮಳೆ ಅವಘಡ ತಡೆಯಲು ಟ್ರಾಫಿಕ್ ಪೊಲೀಸರಿಗೆ ಟಾಸ್ಕ್ ಕೊಟ್ಟ ಕಮಿಷನರ್ ಸಲೀಂ, ಕಬ್ಬನ್ ಪಾರ್ಕ್ಗೆ ಹೋಗುವವರೇ ಇರಲಿ ಎಚ್ಚರ!
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ