ಬೆಂಗಳೂರಿನಲ್ಲಿ ಮುಂದುವರಿದ ಅನಧಿಕೃತ ಶೆಡ್​ ತೆರವು ಕಾರ್ಯಾಚರಣೆ; 20 ಕೋಟಿ ರೂ. ಮೌಲ್ಯದ ಆಸ್ತಿ ಮರುವಶ

|

Updated on: Feb 23, 2023 | 7:31 AM

ಬಿಡಿಎ ಆಯುಕ್ತ ಕುಮಾರ ನಾಯಕ, ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ ನಂಜುಂಡೇಗೌಡ ಹಾಗೂ ಬಿಡಿಎ ಪೂರ್ವ ವಲಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ ಗೌಡ ಸೇರಿದಂತೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಬೆಂಗಳೂರಿನಲ್ಲಿ ಮುಂದುವರಿದ ಅನಧಿಕೃತ ಶೆಡ್​ ತೆರವು ಕಾರ್ಯಾಚರಣೆ; 20 ಕೋಟಿ ರೂ. ಮೌಲ್ಯದ ಆಸ್ತಿ ಮರುವಶ
ಬಿಡಿಎ
Follow us on

ಬೆಂಗಳೂರು: ನಗರದಲ್ಲಿ ಅನಧಿಕೃತ ಶೆಡ್​ಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಎಚ್​ಎಸ್​ಆರ್ ಲೇಔಟ್​ನ (HSR Layout) 1ನೇ ಸೆಕ್ಟರ್​ನಲ್ಲಿ ಬುಧವಾರ 20 ಕೋಟಿ ರೂ. ಮೌಲ್ಯದ ಆಸ್ತಿ ಮರುವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯುಕ್ತ ಕುಮಾರ ನಾಯಕ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಅಗರ ಗ್ರಾಮದ ಸರ್ವೆ ನಂಬರ್​ 74ರಲ್ಲಿ ಅನಧಿಕೃತ ಶೆಡ್​ಗಳ ತೆರವು ಮಾಡಲಾಯಿತು. ಒಟ್ಟು 15 ಗುಂಟೆ ಭೂಮಿ ಮರುವಶಪಡಿಸಿಕೊಳ್ಳಲಾಗಿದೆ. ಬಿಡಿಎ ಆಯುಕ್ತ ಕುಮಾರ ನಾಯಕ, ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ ನಂಜುಂಡೇಗೌಡ ಹಾಗೂ ಬಿಡಿಎ ಪೂರ್ವ ವಲಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ ಗೌಡ ಸೇರಿದಂತೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಜೆಪಿ ನಗರದ 9ನೇ ಹಂತದ 4ನೇ ಬ್ಲಾಕ್‌ನ ತಿಪ್ಪಸಂದ್ರದ ಸರ್ವೆ ನಂಬರ್ 10ರಲ್ಲಿದ್ದ ಬಿಡಿಎಗೆ ಸೇರಿದ ಸುಮಾರು 65 ಕೋಟಿ ರೂಪಾಯಿ ಮೌಲ್ಯದ ಒಂದೂವರೆ ಎಕರೆ ಒತ್ತುವರಿಯಾಗಿದ್ದ ಜಾಗವನ್ನು ಎರಡು ದಿನಗಳ ಹಿಂದಷ್ಟೇ ಬಿಡಿಎ ಮರುವಶಪಡಿಸಿಕೊಂಡಿತ್ತು. ಒತ್ತುವರಿದಾರರು ಬಿಡಿಎಗೆ ಸೇರಿದ ಜಾಗದಲ್ಲಿ ವಾಹನ ತೂಕ ಹಾಕುವ ಯಂತ್ರ ಸೇರಿ ಕಟ್ಟಡ ಬಳಕೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ಪೊಲೀಸ್ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳಿಂದ ಒತ್ತುವರಿ ತೆರವು ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ