ಬೆಳ್ಳಂದೂರು-ಕರ್ಮೇಲರಂ ನಡುವಿನ ರೈಲು ಹಳಿ ಡಬ್ಲಿಂಗ್ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣ

|

Updated on: Nov 03, 2023 | 8:03 AM

498.73 ಕೋಟಿ ರೂ. ವೆಚ್ಚದ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಯನ್ನು ಪೂರ್ಣಗೊಳಿಸಲು 2024 ಡಿಸೆಂಬರ್ ಗಡುವು ನೀಡಲಾಗಿದೆ. ಈ ಮಾರ್ಗ ಬೆಳ್ಳಂದೂರು ರೋಡ್​​, ಕರ್ಮೇಲರಂ, ಹುಸ್ಕೂರು, ಹೀಲಲಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಕೊನೆಗೆ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತದೆ.

ಬೆಳ್ಳಂದೂರು-ಕರ್ಮೇಲರಂ ನಡುವಿನ ರೈಲು ಹಳಿ ಡಬ್ಲಿಂಗ್ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣ
ಡಬಲಿಂಗ್​ ಕಾಮಗಾರಿ
Image Credit source: The Indian Express
Follow us on

ಬೆಂಗಳೂರು ನ.03: ಆರ್​​.ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ನಮ್ಮ ಮೆಟ್ರೋ (Metro) ಹಳದಿ ಮಾರ್ಗ ಯಾವಾಗ ಆರಂಭವಾಗುತ್ತದೆ ಎಂದು ಎಲೆಕ್ಟ್ರಾನಿಕ್​ ಸಿಟಿ ನೌಕರರು ಕುತೂಹಲದಿಂದ ಎದರು ನೋಡುತ್ತಿದ್ದಾರೆ. ಈ ನಡುವೆ ಬೈಯಪ್ಪನಹಳ್ಳಿಯಿಂದ ಹೊಸೂರಿಗೆ (Baiyappanahalli-Hosur) ಸಂಪರ್ಕ ಕಲ್ಪಿಸುವ 48 ಕಿಮೀ ರೈಲು ಹಳಿ ಡಬ್ಲಿಂಗ್​ ಕಾಮಗಾರಿ ನಡೆಯುತ್ತಿದೆ. ಬೆಳ್ಳಂದೂರು ರೋಡ್​​-ಕರ್ಮೇಲರಂ ನಡುವಿನ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣಗೊಳ್ಳಲಿದೆ. ಚಂದಾಪುರ ಸಮೀಪದಲ್ಲಿರುವ ಹೀಲಲಿಗೆ ರೈಲು ನಿಲ್ದಾಣವು ಎಲೆಕ್ಟ್ರಾನಿಕ್ಸ್ ಸಿಟಿ-2 ಮತ್ತು ಎಲೆಕ್ಟ್ರಾನಿಕ್ ಸಿಟಿ-1 ರಿಂದ ಕ್ರಮವಾಗಿ 3 ಕಿಮೀ ಮತ್ತು 5 ಕಿಮೀ ದೂರದಲ್ಲಿದೆ.

498.73 ಕೋಟಿ ರೂ. ವೆಚ್ಚದ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಯನ್ನು ಪೂರ್ಣಗೊಳಿಸಲು 2024 ಡಿಸೆಂಬರ್ ಗಡುವು ನೀಡಲಾಗಿದೆ. ಈ ಮಾರ್ಗ ಬೆಳ್ಳಂದೂರು ರೋಡ್​​, ಕರ್ಮೇಲರಂ, ಹುಸ್ಕೂರು, ಹೀಲಲಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಕೊನೆಗೆ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತದೆ.

ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕೆ-ರೈಡ್) ಪ್ರಾಜೆಕ್ಟ್‌ಗಳ ನಿರ್ದೇಶಕ ಆರ್‌ಕೆ ಸಿಂಗ್ ಮಾತನಾಡಿ, ಕರ್ಮೇಲರಂನಿಂದ ಹೀಲಲಿಗೆ ನಿಲ್ದಾಣದವರೆಗಿನ 10.5 ಕಿ.ಮೀ. ಉದ್ದ ಮಾರ್ಗ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ. ಹಾಗೆ ಬಹಳ ಮುಖ್ಯವಾದ ಬೆಳ್ಳಂದೂರು ರೋಡ್​​ನಿಂದ ಕಾರ್ಮೆಲಾರಂಗೆ ಸಂಪರ್ಕಿಸುವ 3.5 ಕಿಮೀ ಕಾಮಗಾರಿ ಮತ್ತು ಆನೇಕಲ್ ಮತ್ತು ಮಾರನಾಯಕನಹಳ್ಳಿ ನಡುವಿನ 7 ಕಿ.ಮೀ ಉದ್ದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆ: ನಾಚಿಕೆಯಿಲ್ಲದೆ ಸುಳ್ಳು ಹೇಳುವ ಸಿದ್ದರಾಮಯ್ಯ, ದಾಖಲೆ ಸಹಿತ ತೇಜಸ್ವಿ ಸೂರ್ಯ ತಿರುಗೇಟು

ಪ್ರಸ್ತುತ ಬೆಳ್ಳಂದೂರು ರೋಡ್ ರೈಲು ನಿಲ್ದಾಣದಲ್ಲಿ​​​ ಒಂದು ರೈಲು ಹಳಿ ಮಾರ್ಗವಿದ್ದು, ಇದನ್ನು ನಾಲ್ಕಕ್ಕೆ ಏರಿಸಲಾಗುವುದು. ಈ ಮೂಲಕ ಒಟ್ಟು ಐದು ಹಳಿಗಳು ಕಾರ್ಯನಿರ್ವಹಿಸುತ್ತದೆ. ಕರ್ಮೇಲರಂ ಮತ್ತು ಹೀಲಲಿಗೆ ನಡುವೆ ಹುಸ್ಕೂರಿನಲ್ಲಿ ಹೊಸ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಹೆಚ್ಚಿನ ರೈಲುಗಳನ್ನು ಓಡಿಸಲು ಮೂಲಸೌಕರ್ಯಗಳನ್ನು ನವೀಕರಿಸುವ ಕ್ರಮಗಳಾಗಿವೆ ಎಂದು ತಿಳಿಸಿದರು.

ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಾಲ್ಕು ಹೊಸ ಫ್ಲಾಟ್​ಫಾರ್ಮ್​​ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ 2024ರ ಮಾರ್ಚ್​​​ನಿಂದ ಕಂಟೋನ್ಮೆಂಟ್‌ನಿಂದ ಹೀಲಲಿಗೆ ಕಡೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲನ್ನು ಓಡಿಸಬಹುದು. ಈ ಹೆಚ್ಚಿನ ರೈಲು ಓಡಿಸಲು ಎರಡು ಹೊಸ ಮೆಮು 8 ಕೋಚ್ ರೈಲುಗಳನ್ನು ಸಿದ್ಧಪಡಿಸಬೇಕಾಗಿದೆ. ಡಬ್ಲಿಂಗ್ ಯೋಜನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವಿನ ರಸ್ತೆ ಕೆಳ ಸೇತುವೆಯನ್ನು ಸಹ ವಿಸ್ತರಿಸಲಾಗುತ್ತಿದೆ.

ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಮಾತನಾಡಿ, ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಯೋಜನೆ ಮತ್ತು ಈ ಡಬಲಿಂಗ್​​ ಯೋಜನೆಯು ಜನರ ಪ್ರಯಾಣದ ಮಾರ್ಗದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ಚಂದಾಪುರ ಜಂಕ್ಷನ್ ಹೇಲಲಿಗೆ ನಿಲ್ದಾಣದ ಆಸುಪಾಸಿನಲ್ಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಗೆ ಸಮೀಪದಲ್ಲಿದೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ-1 ರಿಂದ 5 ಕಿ.ಮೀ ದೂರದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:56 am, Fri, 3 November 23