ಬಿಬಿಎಂಪಿ ಶಾಲೆಗಳಲ್ಲಿ ದಾಖಲಾತಿ ಇಳಿಕೆ, ಏಕಾಏಕಿಯಾಗಿ ಶೇ 40 ರಷ್ಟು ಕುಸಿತ!

|

Updated on: Jun 15, 2024 | 10:10 AM

ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಈ ಬಾರಿ ಭಾರಿ ಇಳಿಕೆಯಾಗಿದೆ. ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಈ ಬಾರಿ ದಾಖಲಾತಿ ಪ್ರಮಾಣ ಭಾರಿ ಇಳಿಕೆಯಾಗಿದೆ. ಇಲ್ಲಿದೆ ವಿವರ

ಬಿಬಿಎಂಪಿ ಶಾಲೆಗಳಲ್ಲಿ ದಾಖಲಾತಿ ಇಳಿಕೆ, ಏಕಾಏಕಿಯಾಗಿ ಶೇ 40 ರಷ್ಟು ಕುಸಿತ!
ಬಿಬಿಎಂಪಿ ಶಾಲೆ
Follow us on

ಬೆಂಗಳೂರು, ಜೂನ್​ 15: ಬೆಂಗಳೂರಿನ (Bengaluru) ಸಾಕ್ಷರತೆ ಹೆಚ್ಚಿಸುವಲ್ಲಿ ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP) ಶಾಲೆಗಳ ಪಾತ್ರ ದೊಡ್ಡದಿದೆ. ಆದರೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಇದೀಗ ಈ 2024-25ನೇ ಶೈಕ್ಷಣಿಕ ಸಾಲಿನ ಶಾಲೆ ದಾಖಲಾತಿಯಲ್ಲಿ ಭಾರಿ ಇಳಿಕೆ ಕಂಡಿದೆ. ಬಿಬಿಎಂಪಿ ಶಾಲೆಯಿಂದಲೂ ಬಡವರ ಮಕ್ಕಳು ದೂರ ಉಳಿಯುತ್ತಿದ್ದಾರೆ.

ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಈ ಬಾರಿ ಭಾರಿ ಇಳಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿಯ ದಾಖಲಾತಿಯಲ್ಲಿ ಸುಮಾರು ಶೇ40 ರಷ್ಟು ಕುಸಿತ ಕಂಡಿದೆ. ಹೌದು, ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಈ ಬಾರಿ ದಾಖಲಾತಿ ಪ್ರಮಾಣ ಭಾರಿ ಇಳಿಕೆಯಾಗಿದೆ.

ಕೊರೊನಾ ಸಂದರ್ಭದಲ್ಲಿ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಕಳೆದ 2023-24ನೇ ಸಾಲಿನಲ್ಲಿ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು. ಆದರೆ, ಈ ಬಾರಿ ಕೇವಲ 19,974 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಹುತೇಕ ಶೇ.40ರಷ್ಟು ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ.

ಈ ಬಾರಿಯ ದಾಖಲಾತಿ

ನರ್ಸರಿ ಶಾಲೆ: 311

ಪ್ರಾಥಮಿಕ ಶಾಲೆ: 3674

ಪ್ರೌಢ ಶಾಲೆ: 6691

ಪಿಯು ಕಾಲೇಜು: 4711

ಡಿಗ್ರಿ ಕಾಲೇಜು: 1689

ಪಿಜಿ ಕಾಲೇಜು: 98

ಒಟ್ಟು ದಾಖಲಾತಿ: 19,974 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಬಿಬಿಎಂಪಿ ತನ್ನ ವ್ಯಾಪ್ತಿಯ ಶಾಲೆಗಳನ್ನು ನಿರ್ವಹಣೆ ಮಾಡುವುದರಲ್ಲಿ ಎಡವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಹಲವು ಭ್ರಷ್ಟಾಚಾರಗಳು ಹಾಗೂ ಮಕ್ಕಳಿಗೆ ಸಮಪರ್ಕವಾಗಿ ಮೂಲಭೂತ ಸೌಕರ್ಯ ಕೊಡುವುದರಲ್ಲಿ ಪಾಲಿಕೆ ಎಡವಿದೆ ಎನ್ನುವ ಆರೋಪವಿದೆ. ಹೀಗಿರುವಾಗ ದಾಖಲಾತಿ ಪ್ರಮಾಣ ಹೆಚ್ಚುವುದಾದರು ಹೇಗೆ ಎಂದು ಪ್ರಶ್ನೆ ಉದ್ಭವಿಸಿದೆ.

ಬಿಬಿಎಂಪಿ ಶಾಲೆ

ಕೆಲವು ಕಡೆಗಳಲ್ಲಿ ಪಾಲಿಕೆ ವ್ಯಾಪ್ತಿಯ ಶಾಲಾ ಕಟ್ಟಡಗಳು ಬಿರುಕು ಬಿದ್ದಿವೆ. ಕೆಲವು ಕಡೆ ಮೂಲಭೂತ ಸೌಕರ್ಯವೇ ಇಲ್ಲ. ಇದರ ಜೊತೆಗೆ ಪ್ರತಿ ವರ್ಷ ಮಕ್ಕಳಿಗೆ ಸೇರಬೇಕಾದ ಸಮವಸ್ತ್ರಗಳು ಮಕ್ಕಳ ಕೈಗೆ ಸರಿಯಾದ ಸಮಯಕ್ಕೆ ಸೇರುತ್ತಿಲ್ಲ. ಹೀಗೆ ಹಲವು ಕೊರೆತಗಳು ಬಿಬಿಎಂಪಿ ಶಾಲೆಗಳು ಎದುರಿಸುತ್ತಿವೆ. ಈ ಎಲ್ಲ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಬಿಬಿಎಂಪಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:23 am, Sat, 15 June 24