ಬೆಂಗಳೂರು: ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಗ್ಯಾಂಗ್​ ಪತ್ತೆ; ಮೂವರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 19, 2023 | 9:39 PM

ಪಿಜಿ(PG)ಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಗ್ಯಾಂಗ್​ ಪತ್ತೆಯಾಗಿದ್ದು, ಯಶವಂತಪುರ ಪೊಲೀಸ(Yesvantpur Police)ರು ಅರೆಸ್ಟ್​ ಮಾಡಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಇವರಿಂದ ಬರೊಬ್ಬರಿ 16 ಲಕ್ಷ ರೂಪಾಯಿ ಮೌಲ್ಯದ 50 ಲ್ಯಾಪ್‌ಟಾಟ್​ ಹಾಗೂ 7 ಮೊಬೈಲ್​ಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು: ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಗ್ಯಾಂಗ್​ ಪತ್ತೆ; ಮೂವರ ಬಂಧನ
ಬಂಧಿತ ಆರೋಪಿಗಳು
Follow us on

ಬೆಂಗಳೂರು, ಡಿ.19: ಪಿಜಿ(PG)ಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಗ್ಯಾಂಗ್​ ಪತ್ತೆಯಾಗಿದ್ದು, ಯಶವಂತಪುರ ಪೊಲೀಸ(Yesvantpur Police)ರು ಅರೆಸ್ಟ್​ ಮಾಡಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಇವರಿಂದ ಬರೊಬ್ಬರಿ 16 ಲಕ್ಷ ರೂಪಾಯಿ ಮೌಲ್ಯದ 50 ಲ್ಯಾಪ್‌ಟಾಟ್​ ಹಾಗೂ 7 ಮೊಬೈಲ್​ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಈ ಆಸಾಮಿಗಳು ಲ್ಯಾಪ್‌ಟಾಪ್‌ಗಳನ್ನು ಕದ್ದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

ಪಿಜಿಗಳೇ ಈ ಖದೀಮರ ಟಾರ್ಗೆಟ್

ಆರೋಪಿಗಳಾದ ಪ್ರಭು ಮತ್ತು ಯುವರಾಜ್ ಕೆಆರ್ ಪುರಂನಲ್ಲಿ ರೂಮ್ ಮಾಡಿಕೊಂಡಿದ್ದರು. ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡಿಕೊಂಡು ಪಿಜಿಗಳ ಬಳಿ ಹೋಗುತ್ತಿದ್ದ ಆರೋಪಿಗಳು. ಸಂಪೂರ್ಣ ಪಿಜಿಯನ್ನು ಗಮನಿಸಿಕೊಂಡು ಯಾವ್ಯಾವ ರೂಮ್ ನಲ್ಲಿ ಲ್ಯಾಪ್‌ಟಾಪ್ ಇವೆ ಎನ್ನುವುದನ್ನು ನೋಡಿಕೊಂಡು, ಬಳಿಕ ರೂಮ್​ಗಳಲ್ಲಿ ಯಾರು ಇಲ್ಲದ ವೇಳೆ ಬೆಳಗ್ಗೆ‌ 9 ರಿಂದ 10 ಗಂಟೆ ಸಮಯದಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ, ಕದ್ದ ಕೆಲವೇ ಗಂಟೆಗಳಲ್ಲಿ ಬಸ್​ನಲ್ಲಿ ಪಾರ್ಸಲ್ ಮಾಡುತ್ತಿದ್ದರು.

ಇದನ್ನೂ ಓದಿ:ಆನೇಕಲ್: ಹಾಡಹಗಲೇ ಖತರ್ನಾಕ್ ಕಳ್ಳರ ಕೈಚಳಕ: ಗಮನ ಬೇರೆಡೆಗೆ ಸೆಳೆದು 10 ಲಕ್ಷ ರೂ. ಕಳ್ಳತನ

ವಿದ್ಯಾರ್ಥಿಗಳಂತೆ ಪೋಸ್ ಕೊಟ್ಟು ಕಳ್ಳತನ

ಡಿಸೆಂಬರ್ 10 ರಂದು ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಪಲ್ಸರ್​ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ‘ಕಳೆದ ಎರಡು ವರ್ಷಗಳಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳು ವಿದ್ಯಾರ್ಥಿಗಳಂತೆ ಪೋಸ್ ಕೊಟ್ಟು, ಮಾಲೀಕರು ಇಲ್ಲದಿದ್ದಾಗ ಗ್ಯಾಜೆಟ್‌ಗಳನ್ನು ಕದಿಯಲು ಪಿಜಿಗಳಿಗೆ ಭೇಟಿ ನೀಡುತ್ತಿದ್ದರಂತೆ. ಇನ್ನು ಬಂಧಿತ ಆರೋಪಿಗಳಲ್ಲಿ ಇಬ್ಬರು ಆರೋಪಿಗಳು ಆಂಧ್ರಪ್ರದೇಶದ ಚಿತ್ತೂರಿನವರು. ಒಬ್ಬ ಆರೋಪಿ ತಮಿಳುನಾಡಿನ ಸೇಲಂ ಮೂಲದವನು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದು,  ಈ ಅಪರಾಧದಲ್ಲಿ ಭಾಗಿಯಾಗಿರುವ ಇತರ ನಾಲ್ವರು ತಲೆಮರೆಸಿಕೊಂಡಿದ್ದಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ