ಬೆಂಗಳೂರು ಗಾಳಿಯ ಗುಣಮಟ್ಟ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ! ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕಾರು, ಬೈಕುಗಳ ಸಂಖ್ಯೆ ಗಗಕ್ಕೇರುತ್ತಿದೆ. ಪ್ರತಿದಿನ ನಗರದಲ್ಲಿ 3000 ದಷ್ಟು ಹೊಸ ವಾಹನಗಳು ನೋಂದಣಿ ಆಗುತ್ತಿವೆ. ಇದರಿಂದ ನಗರದ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಗಾಳಿಯ ಗುಣಮಟ್ಟ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ! ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Jul 11, 2026 | 8:12 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 3000 ಹೊಸ ವಾಹನ
  • ವಾಹನಗಳ ಹೆಚ್ಚಳದಿಂದ ತೀವ್ರಗೊಂಡ ವಾಯು ಮಾಲಿನ್ಯ
  • ಬೆಂಗಳೂರಿನ ವಾಯು ಗುಣಮಟ್ಟದ ಬಗ್ಗೆ ಆಘಾತಕಾರಿ ವರದಿ ಬಿಡುಗಡೆ

ಬೆಂಗಳೂರು, ಜುಲೈ 11: ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪೈಕಿ ಬೆಂಗಳೂರು (Bengaluru) ಎರಡನೇ ಸ್ಥಾನ ಪಡೆದುಕೊಂಡಿದೆ. ಇದೀಗ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಹವಾಮಾನದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಸಿಲಿಕಾನ್ ಸಿಟಿಯ ಹವಾಮಾನ ತೀರಾ ಕಳಪೆಯಾಗಿದೆ. ವಾಯುಮಾಲಿನ್ಯದ ಪರಿಣಾಮ ವಾರಕ್ಕೆ ಎರಡು ಸಿಗರೇಟ್ ಸೇದಿದಷ್ಟು, ತಿಂಗಳಿಗೆ ಸುಮಾರು ಹತ್ತು ಸಿಗರೇಟ್ ಸೇದಿದಷ್ಟು ಎಂದು ಉಲ್ಲೇಖಿಸಿದೆ. ಇತ್ತ ಪ್ರತಿದಿನ ನಗರದಲ್ಲಿ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಇವುಗಳಲ್ಲಿ 2100 ದ್ವಿಚಕ್ರ ವಾಹನಗಳು, 600 ಕಾರುಗಳು, ಆಟೋ, ಲಾರಿ, ಬಸ್ಸು ಎಲ್ಲಾ ರೀತಿಯ ವಾಹನಗಳು ಸೇರಿವೆ. ಇದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯದ ಪ್ರಮಾಣವು ಹೆಚ್ಚಾಗುತಿದೆ.

ಬೆಂಗಳೂರಿನಲ್ಲಿ 3 ವರ್ಷದಲ್ಲಿ ನೋಂದಣಿಯಾದ ವಾಹನಗಳ ವಿವರ

2023-24

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ – 1,59,150
  • ದ್ವಿಚಕ್ರ ವಾಹನಗಳ ಸಂಖ್ಯೆ – 4,77,361
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,25,597 ಲಕ್ಷ.

2024-25

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ – 1,45,322
  • ದ್ವಿಚಕ್ರಗಳ ಸಂಖ್ಯೆ – 4,73,994
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,22,873

2025-26

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ 1,55,345
  • ದ್ವಿಚಕ್ರ ವಾಹನಗಳ ಸಂಖ್ಯೆ – 5,25,335
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,87,671

ಬೆಂಗಳೂರಿನಲ್ಲಿ ವಾನಹ ನೋಂದಣಿ: 2025-26ರವರೆಗಿನ ಅಂಕಿಅಂಶ

  • ಬೆಂಗಳೂರಿನಲ್ಲಿರುವ ಒಟ್ಟು ಕಾರುಗಳ ಸಂಖ್ಯೆ: 24,79,695
  • ಬೆಂಗಳೂರಿನಲ್ಲಿರುವ ಒಟ್ಟು ದ್ವಿಚಕ್ರ ವಾಹನಗಳ ಸಂಖ್ಯೆ: 86,04,109
  • ಬೆಂಗಳೂರಿನಲ್ಲಿರುವ ಒಟ್ಟು ವಾಹನಗಳ ಸಂಖ್ಯೆ: 1,25,94,899

ದೆಹಲಿಯ ಸ್ಥಿತಿ ಇನ್ನಷ್ಟು ಭೀಕರ

ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ದೆಹಲಿ ಹವಾಮಾನದ ಬಗ್ಗೆಯೂ ವರದಿ ನೀಡಿದ್ದು, ದೆಹಲಿಯ ವಾಯು ಗುಣಮಟ್ಟವು ದಿನಕ್ಕೆ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ ಎಂದು ಉಲ್ಲೇಖಿಸಿದೆ. ಪ್ರತಿದಿನ ರಾಜಧಾನಿಯಲ್ಲಿ 500 ರಿಂದ 600 ಹೊಸ ಕಾರುಗಳು ರಿಜಿಸ್ಟ್ರೇಷನ್ ಆಗುತ್ತಿದ್ದು, ಇದರಿಂದ ಮೂರು ವರ್ಷದಲ್ಲಿ ರಾಜಧಾನಿಯಲ್ಲಿ ಸುಮಾರು 30 ಲಕ್ಷ ಕಾರುಗಳ ಸಂಖ್ಯೆ ದಾಟಲಿದೆ ಎಂದಿದೆ.

ಇತ್ತ ಕರ್ನಾಟಕದಲ್ಲಿ ಒಟ್ಟು 3.50 ಕೋಟಿ ವಾಹನಗಳಿವೆ, ಈ ಪೈಕಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 1 ಕೋಟಿ 25 ಲಕ್ಷವಾಹನಗಳಿದ್ದು, ನೆರೆಯ ರಾಜ್ಯ, ಅಕ್ಕಪಕ್ಕದ ರಾಜ್ಯದ ವಾಹನಗಳು‌ ಸೇರಿಸಿದರೆ 1.55 ಕೋಟಿ ವಾಹನ ಬೆಂಗಳೂರಿನಲ್ಲಿ ಪ್ರತಿದಿನ ಸಂಚಾರ ಮಾಡುತ್ತಿವೆ. 50ಸಾವಿರ ವಾಹನಗಳು ಓಡಾಡುವ ಸಾಮರ್ಥ್ಯದ ರಸ್ತೆಯಲ್ಲಿ ಒಂದುವರೆ ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರಲ್ಲಿ 1.9 ಕೋಟಿ ಬರೋಬ್ಬರಿ ಖಾಸಗಿ ವಾಹನಗಳು. 13.25 ಲಕ್ಷ ವಾಹನಗಳು ವಾಣಿಜ್ಯ ವಾಹನಗಳು. ಕಳೆದ ಮೂರು ವರ್ಷದಲ್ಲಿ ಬೆಂಗಳೂರಲ್ಲಿ 4,58,817 ಹೊಸ ಕಾರು ರಿಜಿಸ್ಟ್ರೇಷನ್ ಆಗಿದೆ.

ಇದನ್ನೂ ಓದಿ: ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಉತ್ತಮ

ಒಟ್ಟಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿದ್ದ ಲಕ್ಷಾಂತರ ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಇತ್ತ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರಿಂದ ವಾಯುಮಾಲಿನ್ಯದ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Sat, 11 July 26

Follow Us