ಬೆಂಗಳೂರು ಏರ್​​ಪೋರ್ಟ್​​: 50 ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ, 20 ಫ್ಲೈಟ್​​ಗಳು​​ ರದ್ದು

ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 22 ವಿಮಾನಗಳು ರದ್ದಾಗಿದ್ದು, 50ಕ್ಕೂ ಹೆಚ್ಚು ವಿಳಂಬವಾಗಿವೆ. ಕೊಲ್ಕತ್ತಾ, ದೆಹಲಿ ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಪರದಾಟ ನಡೆಸಿದ್ದಾರೆ. ಈ ಅಡಚಣೆ ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು ಏರ್​​ಪೋರ್ಟ್​​: 50 ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ, 20 ಫ್ಲೈಟ್​​ಗಳು​​ ರದ್ದು
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
Updated By: ಪ್ರಸನ್ನ ಹೆಗಡೆ

Updated on: Dec 02, 2025 | 7:38 PM

ದೇವನಹಳ್ಳಿ, ಡಿಸೆಂಬರ್​​ 02: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ತಡರಾತ್ರಿಯಿಂದ ಈವರೆಗೆ ಸುಮಾರು 70ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಿದೆ. ಒಟ್ಟು 22 ವಿಮಾನಗಳ ಹಾರಾಟ ಈವರೆಗೆ ರದ್ದಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.

ವಿಮಾನಗಳ ಸಾಪ್ಟವೇರ್ ಸಂಬಂಧಿತ ತಾಂತ್ರಿಕ ಕಾರಣಗಳಿಂದಾಗಿ ಕೊಲ್ಕತ್ತಾ, ದೆಹಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸರಿಯಾದ ಸಮಯಕ್ಕೆ ವಿಮಾನಗಳು ಹಾರಾಟ ನಡೆಸದ ಕಾರಣ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ನಿಗದಿತ ಸಮಯಕ್ಕೆ ಬಂದರೂ ಸರಿಯಾದ ಸಮಯಕ್ಕೆ ನಾವು ಪ್ರಯಾಣಿಸಬೇಕಿದ್ದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಾತ್ರವಲ್ಲದೆ ನಾಳೆಯೂ ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಹೊಸ ರೂಲ್ಸ್​: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್​​

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ವಿಪರೀತ ಚಳಿಯ ಪರಿಣಾಮ ಪ್ರತಿಕೂಲ ವಾತಾವರಣದಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ಸಂಚಾರ ನಡೆಸಬೇಕಿದ್ದ ಸುಮಾರು 81 ವಿಮಾನಗಳ ಹಾರಾಟ ವಿಳಂಬವಾಗಿತ್ತು.ಕೆಲ ವಿಮಾನಗಳು ಕಡಿಮೆ ಅವಧಿಯ ಮಟ್ಟಿಗೆ ವಿಳಂಬವಾದರೆ ಇನ್ನೂ ಕೆಲ ವಿಮಾನಗಳು ಗರಿಷ್ಠ 69 ನಿಮಿಷಗಳವರೆಗೂ ತಡವಾಗಿ ಹಾರಾಟ ಆರಂಭಿಸಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯದ(DGCA) ಮಾನದಂಡದ ಪ್ರಕಾರ ವಿಮಾನ ವಿಳಂಬಕ್ಕೆ 15 ನಿಮಿಷಗಳ ಮಿತಿಯಿದ್ದು, ಹಾರಾಟ ನಡೆಸಬೇಕಿದ್ದ 81 ವಿಮಾನಗಳ ಪೈಕಿ 33 ವಿಮಾನಗಳು ಮಾತ್ರ ಈ ಮಿತಿಯನ್ನು ದಾಟಿದ್ದವು. ದಟ್ಟ ಮಂಜಿನ ಕಾರಣಕ್ಕೆ ಮಂಗಳೂರು ಮತ್ತು ದೆಹಲಿಯಿಂದ ಬರುತ್ತಿದ್ದ ವಿಮಾನಗಳ ಸಂಚಾರ ಮಾರ್ಗ ಬದಲಾವಣೆ ಕೂಡ ಮಾಡಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:36 pm, Tue, 2 December 25