ಬೆಂಗಳೂರು: ಕನ್ನಡದಲ್ಲಿ ಮಾತನಾಡಲು ಹೇಳಿದಕ್ಕೆ ಬಿಹಾರ್ ಮೂಲದ ಯುವಕ ಶಬ್ಬೀರ್ ಎಂಬಾತ ದೀಪಕ್ ಎನ್ನುವವರಿಗೆ ಪೆಪ್ಸಿ ಬಾಟಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿರುವ ಘಟನೆ ಜನವರಿ 31 ರಂದು ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿರುವ ತಾಜಾ ಜ್ಯೂಸ್ ಶಾಪ್ನಲ್ಲಿ ನಡೆದಿದೆ. ರಾತ್ರಿ 7:30 ರ ಸುಮಾರಿಗೆ ಐಸ್ ಕ್ರೀಂ ತಿನ್ನಲು ದೀಪಕ್ ಅಂಗಡಿಗೆ ಹೋಗಿದ್ದಾನೆ. ನಂತರ ಐಸ್ ಕ್ರೀಂ ಗೆ ಹಣ ಎಷ್ಟು ಅಂತ ಕೇಳಿದ್ದಾನೆ. ಯುವಕ ಶಬ್ಬೀರ್ ಹಿಂದಿಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದು, ಆದರೆ ದೀಪಕ್ಗೆ ಹಿಂದಿ ಬರದ ಕಾರಣ ಕನ್ನಡದಲ್ಲಿ ಹೇಳಪ್ಪ ಎಂದು ಹೇಳಿದ್ದಾನೆ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜ್ಯೂಸ್ ಅಂಗಡಿಯ ಯುವಕ ಶಬ್ಬೀರ್, ದೀಪಕ್ನೊಂದಿಗೆ ಗಲಾಟೆ ಮಾಡಿದ್ದಾನೆ. ನಂತರ ದೀಪಕ್ ಮುಖಕ್ಕೆ ಪೆಪ್ಸಿ ಬಾಟಲಿನಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಪ್ರಜ್ಞೆ ತಪ್ಪಿದ್ದ ದೀಪಕ್ ನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಘಟನೆ ಸಂಬಂಧ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೂರು ನೀಡಿರುವ ದೀಪಕ್ ಪೋಷಕರು, ಹಲ್ಲೆ ನಡೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದವನ ರಕ್ಷಣೆ
ಬೆಂಗಳೂರು: ಮರ ಹತ್ತಿದ್ದ ಬಳಿಕ ಪ್ರಜ್ಞೆ ತಪ್ಪಿ ಮರದಲ್ಲಿ ಸಿಲುಕಿದ್ದ ಅಪರಿಚಿತ ವ್ಯಕ್ತಿಯನ್ನ ರಕ್ಷಣೆ ಮಾಡಿದ ಘಟನೆ ಮೈಲಸಂದ್ರ ಬಳಿ ನಡೆದಿದೆ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿರುವ ವ್ಯಕ್ತಿ ಮರದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿವಿಲ್ ಡಿಫೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ,
ಮೂವತ್ತು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ಪ್ರಜ್ಞೆ ಕಳೆದುಕೊಡ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿಸದ್ದು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Mon, 6 February 23