ಬೆಂಗಳೂರು ಬಂದ್: ಇಂದು ಎಲ್ಲೆಲ್ಲಿ, ಯಾವ ಸಂಘಟನೆಗಳ ಹೋರಾಟ? ಇಲ್ಲಿದೆ ಫುಲ್ ಪ್ಲಾನ್

| Updated By: ಆಯೇಷಾ ಬಾನು

Updated on: Sep 26, 2023 | 7:43 AM

ತಮಿಳುನಾಡಿಗೆ ಕಾವೇರಿ ಹರಿಬಿಟ್ಟ ಹಿನ್ನೆಲೆ ಕನ್ನಡ ಪರ ಸಂಘಟನೆಗಳು, ರೈತರು ಇಂದು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿವೆ. 90ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಇನ್ನು ಬಂದ್ ನಡುವೆ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳು ಮುಂದಾಗಿದ್ದು ಎಲ್ಲೆಲ್ಲಿ? ಯಾವ ಸಂಘಟನೆಗಳು ಹೋರಾಟ ನಡೆಸಲಿವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಬಂದ್: ಇಂದು ಎಲ್ಲೆಲ್ಲಿ, ಯಾವ ಸಂಘಟನೆಗಳ ಹೋರಾಟ? ಇಲ್ಲಿದೆ ಫುಲ್ ಪ್ಲಾನ್
ಬೆಂಗಳೂರು ಬಂದ್
Follow us on

ಬೆಂಗಳೂರು, ಸೆ.26: ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರನ್ನ (Cauvery Water Dispute) ಕರ್ನಾಟಕ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎಂದು ಕನ್ನಡ ಪರ ಸಂಘಟನೆಗಳು, ರೈತರು ಇಂದು ಬೆಂಗಳೂರು ಬಂದ್​ಗೆ (Bengaluru Bandh) ಕರೆ ಕೊಟ್ಟಿವೆ. 90ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಇನ್ನು ಬಂದ್ ನಡುವೆ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳು ಮುಂದಾಗಿವೆ. ಎಲ್ಲೆಲ್ಲಿ? ಯಾವ ಸಂಘಟನೆಗಳು ಹೋರಾಟ ನಡೆಸಲಿವೆ ಎಂಬ ಮಾಹಿತಿ ಇಲ್ಲಿದೆ.

ಇಂದು ಎಲ್ಲೆಲ್ಲಿ? ಯಾವ ಸಂಘಟನೆಗಳ ಹೋರಾಟ

  • ಕಾವೇರಿ ಹೋರಾಟ ಸಮಿತಿ:  ಬೆಳಗ್ಗೆ 09.30ಕ್ಕೆ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಬಳೆಪೇಟೆ,  ಮೈಸೂರು ಬ್ಯಾಂಕ್ ಸರ್ಕಲ್, ಟೌನ್ ಹಾಲ್ ಸಮೀಪ ಜನರಲ್ಲಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
  • ಕನ್ನಡ ಚಳುವಳಿ ಕೇಂದ್ರ ಸಮಿತಿ, ನಾಡಪ್ರಭು ಕೆಂಪೇಗೌಡ ಪ್ರತಿಷ್ಟಾನ ವತಿಯಿಂದ ಟೋಲ್ ಗೇಟ್ ಸಿಗ್ನಲ್ ನಿಂದ ಟೌನ್ ಹಾಲ್ ತನಕ ಬೆಳಗ್ಗೆ 9 ಘಂಟೆಗೆ ಬೈಕ್ ರ್ಯಾಲಿ
  • ಜಯ ಕರ್ನಾಟಕ ಸಮರ ಸೇನೆ: ಬಾಪೂಜಿನಗರಿಂದ ಸ್ಯಾಟಲೈಟ್ ಬಸ್ ನಿಲ್ದಾಣ ತನಕ ಕಾಲ್ನಡಿಗೆ ಮೂಲಕ ಬಂದು ತಮಿಳುನಾಡು ಬಸ್ ತಡೆ.
  • ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಟೌನ್ ಹಾಲ್ ತನಕ ಸೈಕಲ್ ಜಾಥ ( ಖಾಲಿ ಬಿಂದಿಗೆಯನ್ನ ಸೈಕಲ್​ಗಳಿಗೆ ಕಟ್ಟಿಕೊಂಡು ಕೆ.ಆರ್. ಮಾರ್ಕೆಟ್, ಟೌನ್ ಹಾಲ್ ತನಕ ಗುಲಾಬಿ ಹೂ ನೀಡಿ ಬಂದ್ ಗೆ ಮನವಿ
  • ಖಾಸಗಿ ವಾಹನ ಮಾಲೀಕರ ಒಕ್ಕೂಟ: ನ್ಯಾಷನಲ್ ಕಾಲೇಜ್ ಮೈದಾನದಿಂದ ಟೌನ್ ಹಾಲ್ ವರೆಗೆ ಒಂದು ಸಾವಿರ ಆಟೋ, 300 ಕ್ಯಾಬ್ ಗಳ ಮೂಲಕ  ಮೆರವಣಿಗೆ
  • ಸ್ವಾಭಿಮಾನಿ ಸೇನೆಯಿಂದ ಮೈಸೂರು ರೋಡ್ ನ  ಗಾಳಿ ಆಂಜನೇಯ ದೇವಸ್ಥಾನ ದಿಂದ  ಮೆಜೆಸ್ಟಿಕ್, ಗಾಂಧಿನಗರ, ಬ್ರಿಗೇಡ್ , ಟೌನ್ ಹಾಲ್ ತನಕ ಕ್ಯಾಂಟರ್ ವಾಹನ ಮೂಲಕ ಬಂದ್ ಬಗ್ಗೆ ಜಾಗೃತಿ, ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಮನವಿ.
  • ಪೀಸ್ ಆಟೋ ಸಂಘಟನೆಯಿಂದ  9 ಗಂಟೆಗೆ ಆಟೋ ರ್ಯಾಲಿ
  • ಕರ್ನಾಟಕ ಕ್ರೈಸ್ತ ಸಂಘಟನೆಯ 200 ಜನರಿಂದ ಟೌನ್ ಹಾಲ್ ನಿಂದ  ಫ್ರೀಡಂಪಾರ್ಕ್ ವರೆಗೆ ಬೈಕ್ ರ್ಯಾಲಿ
  • ನಮ್ಮ ಕರುನಾಡು ಯುವ ಸೇನೆಯಿಂದ ನವರಂಗ್ ಸರ್ಕಲ್ ಬಳಿ ಟೈರ್ ಗೆ ಬೆಂಕಿ, ರಾಜ್ಯ ನಾಯಕರ ಪ್ರತಿಕೃತಿ ದಹನ

ಫ್ರೀಡಂಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ

ಇನ್ನು ಫ್ರೀಡಂಪಾರ್ಕ್ ಹೊರತುಪಡಿಸಿ ಬೇರೆ ಕಡೆ ಧರಣಿಗೆ ಅವಕಾಶವಿಲ್ಲ. ನಗರದ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾದರೆ ವಶಕ್ಕೆ ಪಡೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ