ಬೆಂಗಳೂರು ಬಂದ್: ನಾಳೆ ಏನೇನು ಇರುತ್ತೆ? ಏನೇನು ಇರುವುದಿಲ್ಲ?

| Updated By: Rakesh Nayak Manchi

Updated on: Sep 25, 2023 | 6:21 PM

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಭಾಗವಾಗಿ ನಾಳೆ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿವೆ. ಸರ್ಕಾರಿ ಸಾರಿಗೆಗಳು, ಆಸ್ಪತ್ರೆ, ಮೆಡಿಕಲ್ ಲಭ್ಯವಿದ್ದು, ಆಟೋ, ಗೂಡ್ಸ್ ಇತ್ಯಾದಿಗಳು ಲಭ್ಯವಿರುವುದಿಲ್ಲ.

ಬೆಂಗಳೂರು ಬಂದ್: ನಾಳೆ ಏನೇನು ಇರುತ್ತೆ? ಏನೇನು ಇರುವುದಿಲ್ಲ?
ನಾಳೆ ಬೆಂಗಳೂರು ಬಂದ್, ಏನಿರುತ್ತೆ? ಏನಿರಲ್ಲ? (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಸೆ.25: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಭಾಗವಾಗಿ ನಾಳೆ ಬೆಂಗಳೂರು ಬಂದ್​ಗೆ (Bangalore Bandh) ಕರೆ ಕೊಟ್ಟಿವೆ. ಹಾಗಾದರೆ ನಾಳೆ ಏನೆಲ್ಲಾ ಲಭ್ಯವಿದೆ? ಯಾವುದು ಲಭ್ಯವಿರುವುದಿಲ್ಲ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ನಾಳೆ ಏನೇನು ಇರುತ್ತದೆ?

  • ಬಿಎಂಟಿಸಿ ಬಸ್ಸುಗಳು
  • ಮೆಟ್ರೋ‌ ವ್ಯವಸ್ಥೆ ಇರುತ್ತೆ
  • ಒಲಾ ಒಬರ್ ಇರಲಿವೆ
  • ಥಿಯೇಟರ್ ಒಪನ್ ಇರಲಿವೆ
  • ಮೆಡಿಕಲ್ ಒಪನ್ ಇರಲಿವೆ
  • ಹಾಲಿನ ಬೂತ್ ತೆರದಿಲಿವೆ
  • ಅಂಚೆ ಕಚೇರಿ
  • ಸರ್ಕಾರಿ ಕಚೇರಿ
  • ಪೆಟ್ರೋಲ್ ಬಂಕ್
  • ಬ್ಯಾಂಕ್
  • ಅಂಬುಲೆನ್ಸ್

ಇದನ್ನೂ ಓದಿ: ಬಲವಂತದ ಬಂದ್​ಗೆ ಇಲ್ಲ ಅವಕಾಶ, ನಾಳೆ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ

ಏನು ಇರುವುದಿಲ್ಲ?

  • ಆಟೋ
  • ಗೂಡ್ಸ್ ವಾಹನ
  • ಖಾಸಗಿ ಬಸ್ಸುಗಳು
  • ಕೈಗಾರಿಕೆಗಳು
  • ಜುವೆಲ್ಲರಿ ಶಾಪ್
  • ಶಾಲೆಗಳು ಒಪನ್
  • ಶಾಲಾ ವಾಹನಗಳು ಇರುವುದಿಲ್ಲ

ಬೆಂಗಳೂರು ನಗರ ಬಂದ್​ ಹಿನ್ನೆಲೆ ಕೆಲವೆಡೆ ಜನರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಖಾಸಗಿ ವಾಹನಗಳ ಒಕ್ಕೂಟದಿಂದ ನ್ಯಾಷನಲ್ ಕಾಲೇಜಿನಿಂದ ಟೌನ್​ಹಾಲ್​ವರೆಗೂ ಬೃಹತ್ ಱಲಿ ನಡೆಯಲಿದ್ದು, ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಮತ್ತೊಂದು ಱಲಿ ನಡೆಯಲಿದೆ. ಈ ವೇಳೆ ಸಾಕಷ್ಟು ಟ್ರಾಫಿಕ್​ಜಾಮ್ ಉಂಟಾಗುವ ಸಾಧ್ಯತೆ ಇದೆ.

ಬೆಂಗಳೂರು ಬಂದ್​ಗೆ ರಾಜ್ಯ ಹೊಟೇಲ್ ಮಾಲೀಕರ ಸಂಘ ಬೆಂಬಲ

ರಾಜ್ಯ ಹೊಟೇಲ್ ಮಾಲೀಕರ ಸಂಘ ಲಾಗಿ ಕರ್ನಾಟಕ ಬಂದ್​ಗೆ ಮಾತ್ರ ಬೆಂಬಲ ಸೂಚಿಸಿತ್ತು. ಇದೀಗ ಬೆಂಗಳೂರು ಬಂದ್​ಗೂ ಬೆಂಬಲ ಸೂಚಿಸಿದೆ. ಈ ಬಗ್ಗೆ ಟಿವಿ9ಗೆ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಹಿತಿ ನೀಡಿದ್ದು, ನಾಳೆ ಸಂಪೂರ್ಣವಾಗಿ ಹೋಟೆಲ್​ಗಳು ಮುಚ್ಚಲಿವೆ ಎಂದರು.

ಬೆಂಗಳೂರು ಬಂದ್​ಗೆ ಖಾಸಗಿ ಸಾರಿಗೆ ಒಕ್ಕೂಟದ ಬೆಂಬಲ

ಬೆಂಗಳೂರು ನಗರ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ. ನಮ್ಮ 37 ಸಂಘಟನೆಗಳು ನಾಳೆಯ ಬಂದ್​ನಲ್ಲಿ ಭಾಗಿಯಾಗಲಿವೆ. ಯಾವುದೇ ಕಾರಣಕ್ಕೂ ನಾಳೆ ಖಾಸಗಿ ಬಸ್​ಗಳು ರಸ್ತೆಗಿಳಿಯುವುದಿಲ್ಲ. ನ್ಯಾಷನಲ್ ಕಾಲೇಜಿನಿಂದ ಟೌನ್ ಹೌಲ್​ವರೆಗೆ ಱಲಿ ನಡೆಸುತ್ತೇವೆ. ಎರಡು ಸಾವಿರಕ್ಕೂ ಹೆಚ್ಚು ಚಾಲಕರು ಬಂದ್​ನಲ್ಲಿ ಭಾಗಿಯಾಗಲಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ