
ಬೆಂಗಳೂರು, ಸೆಪ್ಟೆಂಬರ್ 05: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಪರಿಸರ ಸ್ನೇಹಿಯಾಗಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆಯಡಿ 4,500 ಹೊಸ ವಿದ್ಯುತ್ ಚಾಲಿತ (ಇ-ಬಸ್) ಬಸ್‌ಗಳನ್ನು ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಮುಂದಿನ 18 ತಿಂಗಳಲ್ಲಿ ಬಿಎಂಟಿಸಿಯ ಒಟ್ಟು ಬಸ್‌ಗಳ ಪೈಕಿ ಶೇಕಡಾ 50ಕ್ಕಿಂತ ಹೆಚ್ಚು ಭಾಗ ಎಲೆಕ್ಟ್ರಿಕ್ ಬಸ್‌ಗಳಾಗಲಿವೆ.
ಪ್ರಸ್ತುತ ಬಿಎಂಆರ್‌ಟಿಸಿ ಬಳಿ ಸುಮಾರು 7,000 ಬಸ್‌ಗಳಿದ್ದು, ಅವುಗಳಲ್ಲಿ 1,700 ಇ-ಬಸ್‌ಗಳು GCC ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಹೊಸದಾಗಿ 4,500 ಇ-ಬಸ್‌ಗಳು ಸೇರ್ಪಡೆಯಾಗುವುದರ ಜೊತೆಗೆ, ಹಳೆಯ ಬಸ್‌ಗಳ ತೆರವು ಕಾರ್ಯಾಚರಣೆಯ ನಂತರ ಸಂಸ್ಥೆಯ ಒಟ್ಟು ಬಸ್‌ಗಳ ಸಂಖ್ಯೆ ಸುಮಾರು 11,000ಕ್ಕೆ ಏರಿಕೆಯಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಖಾಸಗಿ ಸಂಸ್ಥೆಗಳು ಬಸ್‌ಗಳನ್ನು ಪೂರೈಸಿ ನಿರ್ವಹಣೆ ಮಾಡಲಿದ್ದು, ಬಿಎಂಟಿಸಿ ಪ್ರತಿ ಕಿಲೋಮೀಟರ್ ಆಧಾರದಲ್ಲಿ ದರ ಪಾವತಿಸಲಿದೆ.
ಈ 4,500 ಬಸ್‌ಗಳಲ್ಲಿ:
ಒಪ್ಪಂದ ಅಂತಿಮಗೊಂಡ 6 ತಿಂಗಳಲ್ಲಿ ಮೊದಲ ಹಂತದ ಬಸ್‌ಗಳು ರಸ್ತೆಗೆ ಇಳಿಯಲಿವೆ.
ಇದನ್ನೂ ಓದಿ ಬಿಎಂಟಿಸಿ ಬಸ್ಸುಗಳಲ್ಲಿ ಸ್ಪೇರ್ ಪಾರ್ಟ್ಸ್ ಅಭಾವ: ನಡುರಸ್ತೆಯಲ್ಲೇ ಬಸ್ ಕೆಟ್ಟು ಚಾಲಕರು-ಪ್ರಯಾಣಿಕರ ಪರದಾಟ
ಕೇಂದ್ರ ಸರ್ಕಾರವು ಈ ಬಸ್‌ಗಳನ್ನು ಒದಗಿಸುತ್ತಿದ್ದು, ರಾಜ್ಯ ಸರ್ಕಾರವು ಬಿಎಂಟಿಸಿಗೆ ವಾರ್ಷಿಕ 600 ಕೋಟಿ ರೂಪಾಯಿ ಧನಸಹಾಯ ನೀಡಲಿದೆ. ಆದಾಗ್ಯೂ, ಕಾರ್ಯಾಚರಣೆಯ ವೆಚ್ಚದಿಂದ ಸಂಸ್ಥೆಗೆ ವಾರ್ಷಿಕ ಸುಮಾರು 1,000 ಕೋಟಿ ರೂ.ಗಳ ಕೊರತೆ ಎದುರಾಗಲಿದ್ದು, ಅದನ್ನು ಸ್ವಂತ ಸಂಪನ್ಮೂಲದಿಂದ ಭರಿಸಬೇಕಾಗುತ್ತದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, “ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ತಡೆಯಲು ಈ ಯೋಜನೆ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ. ಇದಲ್ಲದೆ, ಹೊಸ ಡೆಪೋಗಳ ನಿರ್ಮಾಣ ಹಾಗೂ ನಿಲ್ದಾಣಗಳ ಮೇಲ್ದರ್ಜೆಗೇರಿಸಲು ಕೇಂದ್ರದಿಂದ 2,000 ಕೋಟಿ ರೂ. ನೆರವು ಪಡೆಯಲು ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ