ಬೆಂಗಳೂರು: ನಗರದ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ಹೈಗ್ರೌಂಡ್ಸ್, ಶೇಷಾದ್ರಿಪುರಂ, ಉಪ್ಪಾರಪೇಟೆ, ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿತ್ತು. ಈ ಕುರಿತ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ₹ 5 ಲಕ್ಷವನ್ನು ಜಪ್ತಿ ಮಾಡಲಾಗಿದೆ.
ಐವರು ಆರೋಪಿಗಳು ಮೊಬೈಲ್ ಮುಖಾಂತರ ಬೆಟ್ಟಿಂಗ್ ನಡೆಸುತ್ತಿದ್ದರು. ಪಂದ್ಯ ನಡೆಯುವ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆರೋಪಿಗಳ ವಿರುದ್ಧ ಪ್ರತ್ಯೇಕ ಠಾಣೆಗಳಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಟೋಯಿಂಗ್ ಮಾಡಿದ್ದ ವಾಹನ ಬಿಡಲು 800 ರೂ ಲಂಚಕ್ಕೆ ಬೇಡಿಕೆ; ಟೋಯಿಂಗ್ ಸಿಬ್ಬಂದಿ ವಶಕ್ಕೆ
ಬೆಂಗಳೂರು: ಜಯನಗರ ಸಂಚಾರಿ ಠಾಣೆ ಮೇಲೆ ಎಸಿಬಿ ದಾಳಿ ನಡೆಸಿದ್ದು ಟೋಯಿಂಗ್ ಮಾಡಿದ್ದ ದ್ವಿಚಕ್ರ ವಾಹನವನ್ನು ಮರಳಿ ನೀಡಲು 800 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಟೋಯಿಂಗ್ ಸಿಬ್ಬಂದಿ ಸಿದ್ದೇಗೌಡ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ. ಸೆಪ್ಟೆಂಬರ್ 25ರಂದು ಜೆ.ಪಿ.ನಗರದಲ್ಲಿ ನಿಲ್ಲಿಸಿದ್ದ ಬೈಕ್ ಟೋಯಿಂಗ್ ಮಾಡಲಾಗಿತ್ತು. ಠಾಣೆಗೆ ಹೋಗಿ ವಿಚಾರಿಸಿದಾಗ ಆರೋಪಿ 800 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಟೋಯಿಂಗ್ ಸಿಬ್ಬಂದಿ ಶುಲ್ಕ ಕಟ್ಟಿದರೆ 1,500 ರೂಪಾಯಿ ಆಗುತ್ತದೆ. ನಮಗೆ 800 ರೂ. ಲಂಚ ನೀಡಿದರೆ ಬಿಡುವುದಾಗಿ ಹೇಳಿದ್ದ. ಸದ್ಯ ಟೋಯಿಂಗ್ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರದ ಬಗ್ಗೆ ತನಿಖೆ ನಡೆಸಲಿದೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣ; 9 ತಿಂಗಳ ಮಗುವನ್ನು ತಾಯಿ ಹತ್ಯೆ ಮಾಡಿರುವುದು ದೃಢ
ಹೆಂಡತಿ ಆತ್ಮಹತ್ಯೆಯ ಕೆಲ ದಿನಗಳ ಬಳಿಕ ವಿಷ ಸೇವಿಸಿ ಸಿಆರ್ಪಿಎಫ್ ಯೋಧ ಆತ್ಮಹತ್ಯೆ, ಮಗ ಅನಾಥ
(Bengaluru CCB Police arrested 5 people who are involved in Cricket betting)