AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣ; 9 ತಿಂಗಳ ಮಗುವನ್ನು ತಾಯಿ ಹತ್ಯೆ ಮಾಡಿರುವುದು ದೃಢ

ಮೆಡಿಕಲ್ ರಿಪೋರ್ಟ್ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದೆ. ಒಂಬತ್ತು ತಿಂಗಳ ಹಸುಗೂಸನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ಹಸಿರು ಬಣ್ಣದ ಬಟ್ಟೆಯಿಂದ ಉಸಿರುಗಟ್ಟಿಸಿರುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣ; 9 ತಿಂಗಳ ಮಗುವನ್ನು ತಾಯಿ ಹತ್ಯೆ ಮಾಡಿರುವುದು ದೃಢ
ಆತ್ಮಹತ್ಯಗೆ ಶರಣಾಗಿರುವ ಶಂಕರ್ ಕುಟುಂಬ
TV9 Web
| Edited By: |

Updated on:Sep 29, 2021 | 11:21 AM

Share

ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ 9 ತಿಂಗಳ ಮಗುವನ್ನು ಹತ್ಯೆ ಮಾಡಿರುವುದು ದೃಢವಾಗಿದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಮಗುವನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ ಮಗು ಹತ್ಯೆಯಾಗಿದೆ ಎಂದು ಮೆಡಿಕಲ್ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿದೆ. ಹಸಿರು ಬಣ್ಣದ dಬಟ್ಟೆಯಿಂದ ಮಗುವಿನ ಕತ್ತನ್ನ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಗುವನ್ನ ಹತ್ಯೆ ಮಾಡಿ ಬಳಿಕ ತಾಯಿ ಸಿಂಧೂರಾಣಿ ನೇಣು ಬಿಗಿದುಕೊಂಡಿದ್ದ್ದಾಳೆ.

ಮೆಡಿಕಲ್ ರಿಪೋರ್ಟ್ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದೆ. ಒಂಬತ್ತು ತಿಂಗಳ ಹಸುಗೂಸನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ಹಸಿರು ಬಣ್ಣದ ಬಟ್ಟೆಯಿಂದ ಉಸಿರುಗಟ್ಟಿಸಿರುವ ಮಾಹಿತಿ ಲಭ್ಯವಾಗಿದ್ದು, ಪಿಎಂ ರಿಪೋರ್ಟ್​ನಲ್ಲಿ ಧೃಡವಾಗಿದೆ. ಮಗುವಿನ ಕೊಲೆ ರಿಪೋರ್ಟ್ ಬಂದ ಹಿನ್ನೆಲೆ ಮತ್ತೊಂದು ಎಫ್​ಐಆರ್ ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

ಮಹಿಳೆಯರ ಜೊತೆ ಶಂಕರ್ ಚಾಟಿಂಗ್; ಮಾಹಿತಿ ಲಭ್ಯ ಆತ್ಮಹತ್ಯೆಗೆ ಶರಣಾಗಿದ್ದ ಮಕ್ಕಳು ತನ್ನ ತಂದೆ ಶಂಕರ್ ವಿರುದ್ಧ ದೂರಿದ್ದರು. ಶಂಕರ್ ವಿರುದ್ಧ ಮಕ್ಕಳು ಡೆತ್‌ನೋಟ್‌ನಲ್ಲಿ ಆರೋಪಿಸಿದ ಹಿನ್ನೆಲೆ ಶಂಕರ್‌ಗೆ ಸೇರಿದ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಶಂಕರ್ ಅಳಿಯಂದಿರಿಗೆ ಸೇರಿದ ಮೊಬೈಲ್‌ ಕೂಡ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್, ಮೊಬೈಲ್ ರಿಟ್ರೀವ್‌ಗೆ ಪೊಲೀಸರಿಂದ ಸಿದ್ಧತೆ ನಡೆಯುತ್ತಿದೆ. ಸಿಐಡಿ ಸೈಬರ್ ಸೆಲ್ ಎಕ್ಸ್‌ಪರ್ಟ್‌ನಿಂದ ರಿಟ್ರೀವ್‌ಗೆ ತಯಾರಿ ನಡೆಸಲಾಗುತ್ತಿದೆ. ಲ್ಯಾಪ್‌ಟಾಪ್‌ನಲ್ಲಿ ಶಂಕರ್ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹಿಳೆಯರ ಜತೆ ಚಾಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದೆ.

ಇದನ್ನೂ ಓದಿ

ಒಂದೇ ಕುಟುಂಬದ ಐವರ ಸಾವು ಪ್ರಕರಣ; ಅಪ್ಪನ ವಿರುದ್ಧ ಆರೋಪಿಸಿ ಡೆತ್​ನೋಟ್ ಬರೆದ ಶಂಕರ್ ಮಕ್ಕಳು, ಏನಿದೆ ಅದರಲ್ಲಿ?

ರೈತ ಮಹಿಳೆ‌ ಮೇಲೆ ಲೇಡಿ ಪಿಎಸ್ಐ ದರ್ಪ; ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು

(Bengaluru Suicide case clear in the medical report that the mother murdered a 9 month old baby)

Published On - 11:09 am, Wed, 29 September 21