ಒಂದೇ ಕುಟುಂಬದ ಐವರ ಸಾವು ಪ್ರಕರಣ; ಅಪ್ಪನ ವಿರುದ್ಧ ಆರೋಪಿಸಿ ಡೆತ್​ನೋಟ್ ಬರೆದ ಶಂಕರ್ ಮಕ್ಕಳು, ಏನಿದೆ ಅದರಲ್ಲಿ?

ಗಂಡನ ಮನೆ, ತವರುಮನೆ ಎರಡೂ ಕಡೆ ನೆಮ್ಮದಿ ಇರಲಿಲ್ಲ. ಹೀಗಾಗಿ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಶಂಕರ್ ಪುತ್ರಿಯರು 3-4 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ.

ಒಂದೇ ಕುಟುಂಬದ ಐವರ ಸಾವು ಪ್ರಕರಣ; ಅಪ್ಪನ ವಿರುದ್ಧ ಆರೋಪಿಸಿ ಡೆತ್​ನೋಟ್ ಬರೆದ ಶಂಕರ್ ಮಕ್ಕಳು, ಏನಿದೆ ಅದರಲ್ಲಿ?
ಶಂಕರ್ ಮಕ್ಕಳಾದ ಸಿಂಚನಾ, ಸಿಂಧುರಾಣಿ ಮತ್ತು ಮಧುಸಾಗರ್


ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕಣಕ್ಕೆ ಸಂಬಂಧಿಸಿ ಸಾವಿಗೂ ಮುನ್ನ ಬರೆದಿರುವ ಮೂರು ಡೆತ್​ನೋಟ್​ಗಳು (Death Note) ಪತ್ತೆಯಾಗಿವೆ.  ಸಂಪಾದಕ ಶಂಕರ್ ಮಕ್ಕಳಾದ ಸಿಂಧುರಾಣಿ, ಸಿಂಚನಾ, ಮಧುಸಾಗರ್‌ ಪ್ರತ್ಯೇಕ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಶಂಕರ್ ಪುತ್ರಿಯರಾದ ಸಿಂಧುರಾಣಿ, ಸಿಂಚನಾ ಬರೆದ ಡೆತ್‌ನೋಟ್​ನಲ್ಲಿ ನಮಗೆ ತಂದೆಯ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ಇನ್ನು ಅದರಲ್ಲಿ ಪತಿಯರ ಬಗ್ಗೆಯೂ ಸಿಂಧುರಾಣಿ, ಸಿಂಚನಾ ಉಲ್ಲೇಖಿಸಿದ್ದಾರೆ. ಗಂಡನ ಮನೆ, ತವರುಮನೆ ಎರಡೂ ಕಡೆ ನೆಮ್ಮದಿ ಇರಲಿಲ್ಲ. ಹೀಗಾಗಿ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಶಂಕರ್ ಪುತ್ರಿಯರು 3-4 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ.

ಶಂಕರ್ ಅನೈತಿಕ ಸಂಬಂಧ ಉಲ್ಲೆಖ
ಇನ್ನು ಮಗ ಮಧುಸಾಗರ್ ಕೂಡಾ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾನೆ. ತಂದೆ ಶಂಕರ್ ವಿರುದ್ಧ ಆರೋಪ ಮಾಡಿರುವ ಮಧುಸಾಗರ್, ತಂದೆ ಶಂಕರ್ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾನೆ. ತಂದೆ ದೌರ್ಜನ್ಯಗಳ ಬಗ್ಗೆ ಲ್ಯಾಪ್‌ಟಾಪ್‌ನಲ್ಲಿ ಮಾಹಿತಿ ಇದೆ ಅಂತ ಡೆತ್‌ನೋಟ್‌ನಲ್ಲಿ ಮಗ ಉಲ್ಲೇಖ ಮಾಡಿದ್ದಾನೆ. ಸದ್ಯ ಮನೆಯಲ್ಲಿದ್ದ 3 ಲ್ಯಾಪ್‌ಟಾಪ್, 4 ಮೊಬೈಲ್‌ಗಳು ವಶಕ್ಕೆ ಪಡೆಯಲಾಗಿದೆ.

ಮೂವರು ಮಕ್ಕಳು ಬೇರೆ ಬೇರೆ ಡೆತ್​ನೋಟ್​ ಬರೆದಿಟ್ಟಿದ್ದಾರೆ. ಮೂವರ ಡೆತ್​ನೋಟ್​ನಲ್ಲೂ ‘ಮಕ್ಕಳು, ಮಹಿಳೆಯರಿಗೆ ಕಿರುಕುಳ ಇಲ್ಲಿಗೆ ಕೊನೆಯಾಗಲಿ’, ‘ಎಂಡ್ ಆಫ್ ಅಬ್ಯುಸ್ ಆಫ್ ವುಮೆನ್ ಆ್ಯಂಡ್ ಚೈಲ್ಡ್’ ಅಂತ ಒಂದೇ ರೀತಿಯ ಹೆಡ್ಡಿಂಗ್‌ ಇರುವುದು ತಿಳಿದುಬಂದಿದೆ.

1 ಕೆಜಿ ಚಿನ್ನ, 10-12 ಲಕ್ಷ ರೂ. ಪತ್ತೆ
ಡೆತ್​ನೋಟ್ ನೇಣು ಬಿಗಿದುಕೊಂಡ ಸ್ಥಳದಲ್ಲಿಯೇ ಪತ್ತೆಯಾಗಿವೆ. ಶಂಕರ್ ಮನೆಯಲ್ಲಿ ಪಂಚನಾಮೆ ಪ್ರಕ್ರಿಯೆ ಮುಂದುವರಿದಿದೆ. ಶಂಕರ್ ಮನೆಯಲ್ಲಿ ಸುಮಾರು 1 ಕೆಜಿ ಚಿನ್ನ, 10-12 ಲಕ್ಷ ರೂ. ಪತ್ತೆಯಾಗಿದೆ. ಮನೆಯಲ್ಲಿ ಮಡಚಿದ ರೀತಿಯಲ್ಲಿ ನೋಟುಗಳು ಬಿದ್ದಿವೆ. ಪೊಲೀಸರ ಪರಿಶೀಲನೆಯ ವೇಳೆ ಚಿನ್ನಾಭರಣ, ನಗದು ಪತ್ತೆಯಾಗಿದೆ. ಶಂಕರ್ ಮನೆಯಲ್ಲಿ ಅಕ್ಕಸಾಲಿಗರಿಂದ ಚಿನ್ನ ಪರಿಶೀಲನೆ ನಡೆಯುತ್ತಿದೆ.

ಡೆತ್‌ನೋಟ್‌ನಲ್ಲಿರುವ ಅಂಶಗಳು ಸತ್ಯವಾದರೆ ಐಪಿಸಿ ಸೆಕ್ಷನ್ 306ರಡಿ ಪ್ರಕರಣ ದಾಖಲಾಗುತ್ತದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗುತ್ತದೆ.

ಇದನ್ನೂ ಓದಿ

ಕುಟುಂಬವೇ ಮಣ್ಣಾದ್ರೂ ಸಂಪಾದಕ ಶಂಕರ್​ಗೆ ಹಣ-ಚಿನ್ನಾಭರಣದ ಆಸೆ? ಹೆಚ್ಚಾಯ್ತು ಅನುಮಾನ

ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ! ತಮಾಷೆ ವಿಡಿಯೋ ವೈರಲ್

(Got a death note written by Shankar daughters after commit suicide in Bengaluru)

Read Full Article

Click on your DTH Provider to Add TV9 Kannada