ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ! ತಮಾಷೆ ವಿಡಿಯೋ ವೈರಲ್

TV9 Digital Desk

| Edited By: shruti hegde

Updated on: Sep 19, 2021 | 12:39 PM

Viral Video: ಕೆಲವರು ಬೇರೆಯವರನ್ನು ಯಾವಾಗಲೂ ತಮಾಷೆ ಮಾಡಲು ಮುಂದಾಗುತ್ತಾರೆ. ಕೆಲವು ಬಾರಿ ಅವರೇ ತಮಾಷೆಯಾಗಿ ಉಳಿದವರೆಲ್ಲಾ ನಕ್ಕ ಘಟನೆಗಳೂ ಇವೆ. ಅತಹುದೇ ದೃಶ್ಯ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ! ತಮಾಷೆ ವಿಡಿಯೋ ವೈರಲ್
ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ!

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ತಮಾಷೆ ವಿಡಿಯೋಗಳಂತೂ ಭಾರೀ ನಗು ತರಿಸುತ್ತವೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುವ ದೃಶ್ಯಗಳಂತೂ ಪದೆ ಪದೇ ನೋಡೋಣ ಅನ್ನಿಸುವಷ್ಟು ಇಷ್ವಾಗಿ ಬಿಡುತ್ತವೆ. ಕೆಲವು ಬಾರಿ ಬೇರೆಯವರಿಗೆ ಫ್ರಾಂಕ್​ ಮಾಡೋಕೆ ಹೋಗಿ ನಾವೇ ಕಾಮಿಡಿ ಮ್ಯಾನ್ ಆಗಿಬಿಡ್ತೀವಿ. ಇಲ್ಲೋರ್ವರ ಪಜೀತಿ ಕೂಡಾ ಹೀಗೆ ಆಗಿದೆ. ಮಲಗಿದ್ದ ಹೆಂಡತಿಗೆ ಫ್ರಾಂಕ್ ಮಾಡೋಕೆ ಹೋಗಿ ಗಂಡನೇ ಕಾಮಿಡಿ ಮ್ಯಾನ್ ಆಗಿಬಿಟ್ಟ. ವಿಡಿಯೋ ಮಜವಾಗಿದೆ ನೀವೇ ನೋಡಿ.

ಕೆಲವರು ಬೇರೆಯವರನ್ನು ಯಾವಾಗಲೂ ತಮಾಷೆ ಮಾಡಲು ಮುಂದಾಗುತ್ತಾರೆ. ಕೆಲವು ಬಾರಿ ಅವರೇ ತಮಾಷೆಯಾಗಿ ಉಳಿದವರೆಲ್ಲಾ ನಕ್ಕ ಘಟನೆಗಳೂ ಇವೆ. ಅತಹುದೇ ದೃಶ್ಯ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

View this post on Instagram

A post shared by hepgul5 (@hepgul5)

ಹೆಂಡತಿ ಸೋಫಾದ ಮೇಲೆ ಮಲಗಿರುತ್ತಾಳೆ. ಕೈಗೆ ಕಪ್ಪು ಮಸಿ ಹಚ್ಚಿಕೊಂಡು ಬಂದ ಗಂಡ ಹೆಂಡತಿಯ ಮುಖಕ್ಕೆ ಹಚ್ಚಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಆತನಿಗೆ ಸೀನು ಬಂದಿದೆ. ಮುಖ ಮುಚ್ಚಿಕೊಳ್ಳಲು ಹೋಗಿ ಆತನ ಮುಖಕ್ಕೇ ಕಪ್ಪು ಮಸಿಯೆಲ್ಲಾ ಬಳಿದಿದೆ. ಈ ತಮಾಷೆಯ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ತಮಾಷೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಇಲ್ಲಿಯವರೆಗೆ 2,000ಕ್ಕಿಂತಲೂ ಹೆಚ್ಚಿನ ಲೈಕ್ಸ್ಗಳು ಲಭ್ಯವಾಗಿವೆ. ತಮಾಷೆಯ ಎಮೋಜಿಗಳನ್ನು ಕಳುಹಿಸುವ ಮೂಲಕ ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ರೈಲು ಚಲಿಸುತ್ತಿರುವಾಗಲೇ ಭಯಾನಕ ಸ್ಟಂಟ್; ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಜೀವ ಉಳಿಯೋದೆ ಡೌಟ್​!

Shocking Video: ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ; ಅಸಹ್ಯಕರ ವಿಡಿಯೋ ವೈರಲ್!

(Viral Video husband prank on wife to paint wife face watch what happened next)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada