ತಾಯಿ ಆನೆ ಎಷ್ಟು ಪ್ರಯತ್ನಿಸಿದ್ರೂ ಮರಿ ಆನೆಯನ್ನು ನಿದ್ದೆಯಿಂದ ಎದ್ದೇಳಿಸಲು ಆಗ್ತಾನೇ ಇಲ್ಲ; ಮುಂದೇನಾಗತ್ತೆ ನೋಡಿ
Viral Video: ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ವಿಡಿಯೋಗಳು ಮೆಚ್ಚುವಂತಿರುತ್ತವೆ. ಅದರಲ್ಲಿಯೂ ಸಹ ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ.
ತಾಯಿ ಆನೆ ತನ್ನ ಮರಿಯನ್ನು ನಿದ್ದೆಯಿಂದ ಎದ್ದೇಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮರಿ ಎದ್ದೇಳುವಂತೆ ತಾಯಿ ಆನೆ ತುಂಬಾ ಪ್ರಯತ್ನ ಪಡುತ್ತಿದೆ. ಆದರೂ ಸಹ ಮರಿ ಆನೆ ಮಾತ್ರ ನಿದ್ದೆಯಿಂದ ಎದ್ದೇಳುತ್ತಲೇ ಇಲ್ಲ. ದೀರ್ಘ ನಿದ್ದೆಯಲ್ಲಿರುವ ಆನೆ ಮರಿಯ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ವಿಡಿಯೋಗಳು ಮೆಚ್ಚುವಂತಿರುತ್ತವೆ. ಅದರಲ್ಲಿಯೂ ಸಹ ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ. ಅಂಥಹುದೇ ದೃಶ್ಯ ಇದಾಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.
ಗಾಢ ನಿದ್ದೆಯಲ್ಲಿದ್ದ ಅನೆ ಮರಿಯನ್ನು ಎದ್ದೇಳಿಸಲು ತಾಯಿ ಆನೆ ಪ್ರಯತ್ನ ಪಡುತ್ತಿದೆ. ಆದರೂ ಸಹ ಮರಿ ಆನೆಗೆ ಎಚ್ಚರವೇ ಆಗುತ್ತಿಲ್ಲ. ತನ್ನ ಸೊಂಡಿಲಿನಿಂದ ಮರಿಯನ್ನು ಎದ್ದೇಳಿಸಲು ಪ್ರಯತ್ನಿಸುತ್ತಿದೆ. ಆಮೇಲೆಯೂ ಮರಿ ಆನೆ ಎಚ್ಚರಗೊಳ್ಳಲಿಲ್ಲ. ದೂರದಲ್ಲೆಲ್ಲೋ ಇದ್ದ ಕೀಪರ್ ಬಂದು ಮರಿ ಆನೆಯನ್ನು ಎದ್ದೇಳಿಸಿದ್ದಾನೆ. ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋ ತುಂಬಾ ಹಳೇಯದ್ದು, 2017ರಲ್ಲಿ ಸೆರೆ ಹಿಡಿದ ದೃಶ್ಯ. ಆದರೆ ಇತ್ತೀಚೆಗೆ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ದೃಶ್ಯ 383 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.
Mother elephant can’t wake her baby sound asleep and asks her keepers for help.. pic.twitter.com/6h0nzpB5IR
— Buitengebieden (@buitengebieden_) September 17, 2021
ಇದನ್ನೂ ಓದಿ:
Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ
Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್
(Viral video Elephant mother to tried wake up her baby from sleep video watch what happened next)
Published On - 9:31 am, Sun, 19 September 21