ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಕ್ರೈಂ ರೇಟ್ ಹೆಚ್ಚುತ್ತಿದೆ. ಹಾಗಾಗಿ ಮಾಹಿತಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿ, ಬೆಂಗಳೂರು ಪೊಲೀಸರು ಸಿಲಿಕಾನ್ ಸಿಟಿಯಲ್ಲಿ ಅಪರಾಧ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ರಾತ್ರಿ ವೇಳೆ ಪೊಲೀಸರ ಗಸ್ತು ಕಾರ್ಯ ಸುಧಾರಿಸಲು ‘ಸುಭಾಹು ಇ-ಬೀಟ್’ ಆ್ಯಪ್ (Subahu e-beat) ಬಳಕೆಗೆ ನಿರ್ಧರಿಸಲಾಗಿದೆ. ಪೊಲೀಸರು ಕಡ್ಡಾಯವಾಗಿ ಗಸ್ತು ತಿರುಗಲು ಈ ಆ್ಯಪ್ ವ್ಯವಸ್ಥೆ ಜಾರಗೆ ತರಲಾಗಿದೆ.
ರೌಂಡ್ಸ್ ನಲ್ಲಿ ಇರುವ ಪೊಲೀಸರಿಗಾಗಿ ಸಿದ್ಧ ಪಡಿಸಿದ ಆ್ಯಪ್..
ರೌಂಡ್ಸ್‌ನಲ್ಲಿ ಇರುವ ಪೊಲೀಸರಿಗಾಗಿ ಸಿದ್ಧಪಡಿಸಿದ ಆ್ಯಪ್ ಇದಾಗಿದ್ದು, ಪೊಲೀಸರು ಅಲಾಟ್ ಆಗಿರುವ ಸ್ಥಳಕ್ಕೆ ಹೋಗಲೇಬೇಕು. ನಿಯೋಜಿತ ಸ್ಥಳಕ್ಕೆ ಹೋಗಿ ಲೊಕೇಷನ್ ಕ್ಲಿಕ್ ಮಾಡಬೇಕು. ಲೊಕೇಷನ್ ಕ್ಲಿಕ್ ಮಾಡಿ ಅಪ್ರೂವಲ್ ಪಡೆಯಲೇಬೇಕಾಗಿದೆ. ಇದರಿಂದ ಕಡ್ಡಾಯವಾಗಿ ಪೊಲೀಸರು ಗಸ್ತು ತಿರುಗಲೇಬೇಕು (night patrolling) ಎಂಬಂತಾಗಿದೆ. ಸುಭಾಹು ಇ-ಬೀಟ್ ಸಿಸ್ಟಂಗೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಪೊಲೀಸ ಆಂತರಿಕೆ ವ್ಯವಸ್ಥೆಯಲ್ಲಿ ಕಠಿಣ ಅಸ್ತ್ರ:
ಇಲಾಖೆಯಲ್ಲಿ (bengaluru city police) ಜಾರಿಗೆ ಬಂದಿರುವ ಹೊಸ ಇ-ಬೀಟ್ ವಿಧಾನವು ಪೇಮೆಂಟ್ ಆಪ್‌ಗಳ ರೀತಿಯಿದೆ. ಇಲ್ಲಿಯೂ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಕ್ಯು ಆರ್ ಕೋಡ್ ಸ್ಕ್ಯಾನ್ ಮೂಲಕ ಕುಳಿತಲ್ಲೇ ನೈಟ್ ಬೀಟ್ ಮಾಹಿತಿ ಕಲೆ ಹಾಕಬಹುದು. ಈ ಸಿಸ್ಟಮ್ ನಿಂದ ಕೆಲ ಪೊಲೀಸ್ ಸಿಬ್ಬಂದಿ ಕಳ್ಳಾಟಕ್ಕೂ ಬ್ರೇಕ್ ಬೀಳಲಿದೆ.
ಸದ್ಯಕ್ಕೆ ಬೆಂಗಳೂರು ಉತ್ತರ ವಿಭಾಗದಲ್ಲಿ”ಸುಭಾಹು”ಸಿಸ್ಟಮ್ ಜಾರಿಗೆ ಬಂದಿದೆ. ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಹೊಸ ಆಲೋಚನೆಗೆ ಶಹಬ್ಬಾಶ್ ಗಿರಿ ನೀಡಿದ್ದಾರೆ. ಅಂದಹಾಗೆ ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.
(bengaluru city police launch Subahu e-beat for better patrolling in bengaluru)