AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಬಿಜೆಪಿ ‘ಜನಾಶೀರ್ವಾದ ಯಾತ್ರೆ’ ಆರಂಭ; ಕೆಲ ಮಾಹಿತಿ ಇಲ್ಲಿದೆ ನೋಡಿ

ಬೆಳಗ್ಗೆ 11 ಗಂಟೆಗೆ ಮಂಡ್ಯದ ಪತ್ರಿಕಾ ಭವನದಲ್ಲಿ ಪ್ರೆಸ್ ಮೀಟ್​ನಲ್ಲಿ ಭಾಗಿಯಾಗಲಿರುವ ಶೋಭಾ ಕರಂದ್ಲಾಜೆ, ನಂತರ ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಂದಿನಿಂದ ಬಿಜೆಪಿ ‘ಜನಾಶೀರ್ವಾದ ಯಾತ್ರೆ’ ಆರಂಭ; ಕೆಲ ಮಾಹಿತಿ ಇಲ್ಲಿದೆ ನೋಡಿ
ಸಂಗ್ರಹ ಚಿತ್ರ
TV9 Web
| Updated By: sandhya thejappa|

Updated on:Aug 16, 2021 | 11:00 AM

Share

ಭಾರತೀಯ ಜನತಾ ಪಕ್ಷ (BJP) ಜನರನ್ನು ತಲುಪುವ ನಿಟ್ಟಿನಲ್ಲಿ ಜನಾಶೀರ್ವಾದ ಯಾತ್ರೆಯನ್ನು (Jan Ashirwad Yatra) ಪ್ರಾರಂಭಿಸಲು ಮುಂದಾಗಿದ್ದು, ಇಂದಿನಿಂದ (ಆಗಸ್ಟ್ 16) ಈ ಯಾತ್ರೆ ಆರಂಭವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಸೇರ್ಪಡೆಯಾದ 39 ಹೊಸ ಸಚಿವರ ಜನಾಶೀರ್ವಾದ ಯಾತ್ರೆಯಾಗಿದ್ದು, ದೊಡ್ಡ ಮಟ್ಟದ ಱಲಿ ಮೂಲಕ ಜನರನ್ನು ತಲುಪುವ ಹೊಸ ಯೋಜನೆಯಾಗಿದೆ. ಇಂದಿನಿಂದ ಈ ಜನಾಶೀರ್ವಾದ ಯಾತ್ರೆ ಶುರುವಾಗಿದೆ. ಜನಾಶೀರ್ವಾದ ಯಾತ್ರೆ ಹಿನ್ನೆಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಮಂಡ್ಯಕ್ಕೆ ಆಗಮಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮಂಡ್ಯದ ಪತ್ರಿಕಾ ಭವನದಲ್ಲಿ ಪ್ರೆಸ್ ಮೀಟ್​ನಲ್ಲಿ ಭಾಗಿಯಾಗಲಿರುವ ಶೋಭಾ ಕರಂದ್ಲಾಜೆ, ನಂತರ ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಅಂಗಡಿಗೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಂದಿನಿಂದ ಆರಂಭವಾಗುತ್ತಿರುವ ಈ ಜನಾಶೀರ್ವಾದ ಯಾತ್ರೆಯನ್ನು ಕೇಂದ್ರ ಇಲಾಖೆ ರಾಜ್ಯ ಸಚಿವರುಗಳು ಪ್ರಾರಂಭಿಸುತ್ತಿದ್ದಾರೆ. ಇದರಲ್ಲಿ ಕ್ಯಾಬಿನೆಟ್ ದರ್ಜೆಯ ಹೊಸ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ. ಇಂದಿನಿಂದ ಶುರುವಾಗುವ ಈ ಜನಾಶೀರ್ವಾದ ಯಾತ್ರೆ ಸುಮಾರು 22 ರಾಜ್ಯಗಳಿಂದ, ಒಟ್ಟು 19,567 ಕಿಮೀಗಳಷ್ಟು ದೂರ ಸಂಚರಿಸಲಿದೆ. 22 ರಾಜ್ಯಗಳ, 265 ಜಿಲ್ಲೆಗಳು ಮತ್ತು 212 ಲೋಕಸಭಾ ಕ್ಷೇತ್ರಗಳ ಮೂಲಕ ಈ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಸಂಚಾರ ಮಾಡಲಿದೆ.

ಈ ಬಗ್ಗೆ ಮಾತನಾಡಿದ್ದ ಬಿಜೆಪಿಯ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಇತ್ತೀಚೆಗೆ ಸಂಪುಟ ಸೇರ್ಪಡೆಯಾದ ಹೊಸ ಸಚಿವರು, ಜನರ ಆಶೀರ್ವಾದ ಪಡೆಯಲು ಯಾತ್ರೆ ಹೊರಡಲಿದ್ದಾರೆ. ಸಮಾಜದ ದುರ್ಬಲ ವರ್ಗಗಳು ಮತ್ತು ವಿವಿಧ ಬಡ ಸಮುದಾಯಗಳ ಏಳಿಗೆಗ ಬಿಜೆಪಿ ನೇತೃತ್ವದ ಸರ್ಕಾರ ಪ್ರಾತಿನಿಧ್ಯ ನೀಡಲಿದೆ ಎಂಬ ಸಂದೇಶವನ್ನು ಹೊತ್ತು ಈ ಯಾತ್ರೆ ಸಂಚಾರ ಮಾಡಲಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ

ಕಾಂಗ್ರೆಸ್​​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಸುಷ್ಮಿತಾ ದೇವ್

ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷ ಗೌರವ

(From now on BJP has begun the Jan Ashirwad Yatra)

Published On - 10:56 am, Mon, 16 August 21