Corona 3rd Wave: ಕೊರೊನಾ 3ನೇ ಅಲೆಯ ಆತಂಕ, ಆಗಸ್ಟ್ 18ರಿಂದ ಬೆಂಗಳೂರಿನಲ್ಲಿ ಹೊಸ ರೂಲ್ಸ್ ಸಾಧ್ಯತೆ
ಅತಿ ಹೆಚ್ಚು ವಹಿವಾಟು ನಡೆಯುವ ಏರಿಯಾಗಳ ಲಿಸ್ಟ್ ಮಾಡಲಾಗಿದೆ. ಚಿಕ್ಕಪೇಟೆ, ಅವೆನ್ಯೂ ರೋಡ್, ಬಿ.ವಿ.ಕೆ.ಅಯ್ಯಂಗಾರ್ ರಸ್ತೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಕಮರ್ಷಿಯಲ್ ಸ್ಟ್ರೀಟ್, ಕಮ್ಮನಹಳ್ಳಿ ಮುಖ್ಯರಸ್ತೆ, ಶಿವಾಜಿನಗರ ಮಾರ್ಕೆಟ್ ಸೇರಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರುವಲ್ಲಿ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು: ನಗರದಲ್ಲಿ ಕೊರೊನಾ 3ನೇ ಅಲೆಯ(Corona 3rd wave) ಆತಂಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಿಗೆ ಹೊಸ ನಿಯಮ ಜಾರಿ ಮಾಡಲು ಬಿಬಿಎಂಪಿ(BBMP) ಚಿಂತನೆ ನಡೆಸುತ್ತಿದೆ. ಶ್ರಾವಣ ಮಾಸ ಶುರುವಾದ್ದರಿಂದ ಸಾಲುಸಾಲು ಹಬ್ಬಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅತಿ ಹೆಚ್ಚು ವಹಿವಾಟು ನಡೆಯುವ ಏರಿಯಾಗಳ ಲಿಸ್ಟ್ ಮಾಡಲಾಗಿದೆ. ಚಿಕ್ಕಪೇಟೆ, ಅವೆನ್ಯೂ ರೋಡ್, ಬಿ.ವಿ.ಕೆ.ಅಯ್ಯಂಗಾರ್ ರಸ್ತೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಕಮರ್ಷಿಯಲ್ ಸ್ಟ್ರೀಟ್, ಕಮ್ಮನಹಳ್ಳಿ ಮುಖ್ಯರಸ್ತೆ, ಶಿವಾಜಿನಗರ ಮಾರ್ಕೆಟ್ ಸೇರಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರುವಲ್ಲಿ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ವಾಣಿಜ್ಯ ಚಟುವಟಿಕೆಯ ಜಾಗಗಳಿಗೆ ಒಂದೇ ಪ್ರವೇಶ, ಒಂದೇ ನಿರ್ಗಮ ಸ್ಥಳ ಮಾರ್ಕಿಂಗ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಎಂಟ್ರಿ, ಎಕ್ಸಿಟ್ ಪಾಯಿಂಟ್‌ನಲ್ಲಿ ಪೊಲೀಸರು, ಮಾರ್ಷೆಲ್‌ಗಳು, ಹೋಂ ಗಾರ್ಡ್ಸ್ ನೇಮಕಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸಣ್ಣಪುಟ್ಟ ನಿಯಮ ಉಲ್ಲಂಘನೆಗೂ ದಂಡಕ್ಕೆ ನಿರ್ಧಾರ ಮಾಡಿದ್ದು ದಂಡಕ್ಕೆ ಸಹಕರಿಸದಿದ್ದರೆ ಪೊಲೀಸರ ಸಹಾಯದಿಂದ ಕೇಸ್ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಹಾಗೂ ಮಾರುಕಟ್ಟೆಗೆ ನಿರ್ದಿಷ್ಟ ಸಂಖ್ಯೆ ಜನರನ್ನು ಬಿಡಲು ಚಿಂತನೆ ನಡೆಸಲಾಗುತ್ತಿದೆ. ಇದರ ಜೊತೆಗೂ ಖರೀದಿಗೆ ನಿಗದಿತ ಸಮಯ ಘೋಷಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಜತೆ ಅಂತಿಮ ಚರ್ಚೆ ಬಳಿಕ ಆಗಸ್ಟ್ 18ರಿಂದಲೇ ಹೊಸ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ.
ಬೆಂಗಳೂರಿಗೆ ಕಠಿಣ ನಿಯಮ ಜಾರಿ ಬಗ್ಗೆ ಚರ್ಚಿಸುತ್ತೇವೆ ಇನ್ನು ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಗರದಲ್ಲಿ ಕಠಿಣ ನಿಯಮ ಜಾರಿ ಬಗ್ಗೆ ಮೂರ್ನಾಲ್ಕು ದಿನದಲ್ಲಿ ಸಿಎಂ ಬಸವರರಾಜ ಬೊಮ್ಮಾಯಿ ಜತೆ ಚರ್ಚೆ ನಡೆಸುತ್ತೇವೆ. ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕಠಿಣ ನಿಯಮ ಜಾರಿ ಬಗ್ಗೆ ಚರ್ಚಿಸುತ್ತೇವೆ. ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾದರೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯೋಚಿಸುತ್ತೇವೆ. ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡುವ ಯೋಚನೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಕೂಲಿಗೆ ತೆರಳುವ ಮಹಿಳೆಯೊಬ್ಬರು ರಾಷ್ಟ್ರಧ್ವಜಕ್ಕೆ ವಂದಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್
Published On - 8:23 am, Mon, 16 August 21