ಬೆಂಗಳೂರು: ಜೂ.5 ರಂದು ಖಾಸಗಿ ಕಾಲೇಜು ವಿದ್ಯಾರ್ಥಿ(Student) ಮೇಲೆ ಲಾಂಗ್‌ನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು(Annapoorneshwari Police Station) 10 ಕ್ಕೂ ಹೆಚ್ಚು ಯುವಕರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಹೌದು ಹಾಡಹಗಲೇ ದರ್ಶನ್ ಎಂಬ ವಿದ್ಯಾರ್ಥಿ ಮೇಲೆ ಬೈಕ್ಗಳ ಮೇಲೆ ಹೆಲ್ಮೆಟ್ ಧರಿಸಿ ಬಂದು, 6 ಜನರ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಉಲ್ಟಾ ಲಾಂಗ್ ಬೀಸಿ ಎಸ್ಕೇಪ್ ಆಗಿದ್ದರು. ಈ ಕುರಿತು ದರ್ಶನ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಇದೀಗ ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಕರಣ ಸಂಬಂಧ ಮೊಬೈಲ್ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಹೌದು ಕೃತ್ಯ ನಡೆದ ಏರಿಯಾದ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡುತ್ತಿರುವ ಪೊಲೀಸರು, ಈ ಕುರಿತು ವಿದ್ಯಾರ್ಥಿ ದರ್ಶನ್ ದೂರು ನೀಡಿ, ತನಿಖೆಗೆ ಸಹಕರಿಸಲು ಮೀನಾಮೇಷ ಮಾಡುತ್ತಿದ್ದಾನೆ. ಈ ಹಿನ್ನೆಲೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಈಗಾಗಲೇ 10 ಕ್ಕೂ ಹೆಚ್ಚು ಯುವಕರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರಾಮನಗರ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಲಾಂಗ್‌ನಿಂದ ಹಲ್ಲೆ
ಇನ್ನು ಹುಡುಗಿ ವಿಚಾರಕ್ಕೆ ಲಾಂಗ್‌ನಿಂದ ವಿದ್ಯಾರ್ಥಿ ಮೇಲೆ ಅಟ್ಯಾಕ್ ನಡೀತಾ ಎಂಬ ಅನುಮಾನಗಳು ಮೂಡಿದೆ.
ಕೆಲ ದಿನಗಳ ಹಿಂದೆ ಸ್ನೇಹಿತನ ಸಂಗಾತಿ ವಿಚಾರಕ್ಕೆ ಕೆಲ ಹುಡುಗರೊಂದಿಗೆ ದರ್ಶನ್ ಕಿರಿಕ್ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಹಲ್ಲೆ ನಡೆದಿರುವ ಸಾಧ್ಯತೆಯಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದ್ರೆ, ಘಟನೆ ಕುರಿತು ದೂರದಾರ ದರ್ಶನ್ ಮಾತ್ರ ನಿಜಾಂಶ ರಿವೀಲ್ ಮಾಡದೆ ಸತಾಯಿಸುತ್ತಿದ್ದಾನೆ.
ಇನ್ನು ಈ ಭೀಕರ ಅಟ್ಯಾಕ್ ನಡೆದಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನ ಸಮೀಪದ ರಸ್ತೆಯಲ್ಲಿ. ಬಿಬಿಎ ಓದುತ್ತಿದ್ದ ವಿದ್ಯಾರ್ಥಿ ದರ್ಶನ್ ಎಂಬಾತನ ಮೇಲೆ ಜೂನ್ 5 ರಂದು 6 ಜನ ಯುವಕರ ಈ ಡೆಡ್ಲಿ ಗ್ಯಾಂಗ್ ಅಟ್ಯಾಕ್ ಮಾಡಿದ್ದರು. ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿ ದರ್ಶನ್ ಪಾರಾಗಿದ್ದ. ಆದ್ರೆ, ಘಟನೆ ಬಳಿಕ ದೂರು ನೀಡಿ ಕೇಸ್ ದಾಖಲಿಸಿರುವ ವಿದ್ಯಾರ್ಥಿ ದರ್ಶನ್, ಪ್ರಕರಣ ತನಿಖೆಗೆ ಪೋಲಿಸರಿಗೆ ಯಾವುದೇ ಸಹಕಾರ ನೀಡದೆ ಮೀನಾ ಮೇಷ ಏಣಿಸುತ್ತಿದ್ದಾನೆ. ಕಾಲೇಜು ಅಸುಪಾಸಿನಲ್ಲೇ ಲಾಂಗು, ಮಚ್ಚುಗಳು ಝಳಪಿಸಿದ್ದು, ಸೊಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Sat, 24 June 23