ಬೆಂಗಳೂರು, ಡಿಸೆಂಬರ್26: ದಿನಗಳು ಉರುಳುತ್ತಿದ್ದು, ಹೊಸ ವರ್ಷ ಹತ್ತಿರ ಬರುತ್ತಿದೆ. ನ್ಯೂ ಇಯರ್ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಬಣ್ಣದ ಬೆಳಕಲ್ಲಿ ಜನ ಮಿಂದೇಳುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ಗೆ ಸಜ್ಜಾಗಿದೆ. ಡಿಸೆಂಬರ್ 31ರ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ (Drink and drive) ಪ್ರಕರಣಗಳನ್ನು ಪರಿಶೀಲಿಸಲು ಪೊಲೀಸರು ಬೆಂಗಳೂರಿನಲ್ಲಿ 48 ಚೆಕ್‌ಪೋಸ್ಟ್‌ಗಳನ್ನು ಗುರುತಿಸಲಾಗಿದೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಉತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಬೆಂಗಳೂರಿನ ಪ್ರಮುಖ ನಗರಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಮತ್ತು ಇತರೆ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡಿಸಿಪಿಗಳು, ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಕೋರಿ ಹೈಕೋರ್ಟ್ಗೆ ಪಿಐಎಲ್
ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಆರೋಗ್ಯ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆಗಾಗಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುವುದು ಎಂದು ಹೇಳಿದ್ದಾರೆ.
ಡಿಸೆಂಬರ್ 31ರ ರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆಗೆ ಅನುಮತಿ ನೀಡಲಾಗಿದೆ. ಕ್ಲಬ್ಗಳಿಗೂ 1 ಗಂಟೆವರೆಗೆ ಕ್ಲಬ್ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಡಿಸೆಂಬರ್ 31ರ ರಾತ್ರಿ 12ರವರೆಗೆ ವೈನ್ ಶಾಪ್ಗಳಿಗೆ ಅವಕಾಶ ಇದೆ. ಇನ್ನು ಪಬ್ಗಳಲ್ಲಿ ಮಿತಿಗಿಂತ ಹೆಚ್ಚು ಟಿಕೆಟ್ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ. ಡಿಸೆಂಬರ್ 31ರಂದು ಎಲ್ಲಾ ಫ್ಲೈಓವರ್ಗಳು ಬಂದ್ ಆಗಲಿವೆ. ಏರ್ಪೋರ್ಟ್ ರಸ್ತೆ ಹೊರತುಪಡಿಸಿ ಎಲ್ಲಾ ಫ್ಲೈಓವರ್ಗಳು ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ಫ್ಲೈಓವರ್ಗಳು ಬಂದ್ ಆಗಲಿವೆ.
ಇದನ್ನೂ ಓದಿ: New Year Guidelines: ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಬೆಂಗಳೂರು ಪೊಲೀಸ್ ಆಯುಕ್ತ: ಇಲ್ಲಿದೆ ಮಾಹಿತಿ
ಬ್ರಿಗೇಡ್, ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್, ಅನಿಲ್ ಕುಂಬ್ಳೆ ಜಂಕ್ಷನ್, ಮೆಯೋಹಾಲ್ ಜಂಕ್ಷನ್ಗಳಲ್ಲಿ ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿದೆ. ಇದರ ಜತೆಗೆ ಹೊಸ ವರ್ಷಾಚರಣೆ ವೇಳೆ ಡ್ರಂಕ್ & ಡ್ರೈವ್ ಮಾಡಿದರೆ ಪಕ್ಕಾ ಕ್ರಮಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಡ್ರಂಕ್ & ಡ್ರೈವ್ ಪರಿಶೀಲನೆ ಮಾಡಲಾಗುತ್ತೆ.
ಹೊಸ ವರ್ಷಾಚರಣೆ ನಿಮಿತ್ತ ಈ ಬಾರಿ ಬೆಂಗಳೂರಿನಲ್ಲಿ ಭಾರಿ ಪೊಲೀಸ್ ಭದ್ರತೆ ಮಾಡಲಾಗಿದೆ. ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 45 ಎಸಿಪಿಗಳು 160 ಪಿಐ, 600 ಸಬ್ ಇನ್ಸ್ಪೆಕ್ಟರ್ಗಳು, 600 ಎಎಸ್ಐಗಳು 1800 ಹೆಡ್ ಕಾನ್ಸ್ಟೇಬಲ್ಸ್, 5200 ಕಾನ್ಸ್ಟೇಬಲ್ಸ್ ಭದ್ರತೆಗೆ ಡ್ರೋನ್, ಸಿಸಿ ಕ್ಯಾಮರಾ ಕಣ್ಣು, ವೀಕ್ಷಣಾ ಗೋಪುರ ನಿರ್ಮಾಣದ ಜತೆಗೆ ಸಿವಿಲ್ ಡ್ರೆಸ್ಗಳಲ್ಲಿ ಪೊಲೀಸರು ಮಫ್ತಿಯಲ್ಲಿ ಓಡಾಟ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:01 pm, Tue, 26 December 23