AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​​ಗೆ ಅಪರಿಚಿತ ವ್ಯಕ್ತಿ ಸಾವು

ಮಂಗಳವಾರ (ಡಿ.26)ರ ರಾತ್ರಿ 9:30 ರ ಸುಮಾರಿಗೆ ಬೆಂಗಳೂರಿನ ಆನಂದ್​ ರಾವ್​ ಸರ್ಕಲ್​​​ನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಆನಂದ ರಾವ್​ ಸರ್ಕಲ್​​ ಫ್ಲೈ ಓವರ್​​ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹಿಟ್​ ಆ್ಯಂಡ್​ ರನ್​​ಗೆ ಅಪರಿಚಿತ ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on:Dec 27, 2023 | 2:52 PM

Share

ಬೆಂಗಳೂರು, ಡಿಸೆಂಬರ್​ 27: ನಗರದ ಆನಂದ್​ರಾವ್ ಸರ್ಕಲ್ (Anand Rao Circle)​ ಬಳಿಯ ಫ್ಲೈಓವರ್​ನಲ್ಲಿ ಹಿಟ್​ ಆ್ಯಂಡ್​​​ ರನ್​ಗೆ (Hit and Run) ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮಂಗಳವಾರ (ಡಿ.26) ರಾತ್ರಿ 9.30ರ ಸುಮಾರಿಗೆ 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ಫ್ಲೈಓವರ್ ಮೇಲೆ ನಡೆದುಕೊಂಡು ಹೊಗುತ್ತಿದ್ದರು. ಈ ವೇಳೆ ವಾಹನ ಡಿಕ್ಕಿ ಹೊಡೆದಿದೆ. ನಂತರ ವಾಹನ ಮೃತದೇಹವನ್ನು 20 ಮೀಟರ್​​ನಷ್ಟು ದೂರ ಎಳೆದೊಯ್ದಿದೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಓವರ್ ಟೇಕ್ ಮಾಡಲು ಹೋಗಿ ಬೈಕ್‌ಗೆ ಗುದ್ದಿದ ಯುವಕ

ಧಾರವಾಡ: ಓವರ್ ಟೇಕ್ ಮಾಡಲು ಹೋಗಿ ಯುವಕ ಬೈಕ್​​ಗೆ ಹಿಂದಿನಿಂದ ಗುದ್ದಿದ ಘಟನೆ ಧಾರವಾಡದ ಟೋಲ್ ನಾಕಾ ಬಳಿ ನಡೆದಿದೆ. ರಾಮು ದ್ಯಾಮಕ್ಕನವರ್, ಡಿಕ್ಕಿ ಹೊಡೆದ ಯುವಕ. ಅಪಘಾತದ ದೃಶ್ಯ ಕಾರಿನ ಡ್ಯಾಷ್‌ಬೋರ್ಡ್ ​ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟೋಲ್ ನಾಕಾ ಬಳಿ ರಾಮು ದ್ಯಾಮಕ್ಕನವರ್ ಕೆಟಿಎಂ ಡ್ಯೂಕ್ ಬೈಕ್ ಮೇಲೆ ವೇಗವಾಗಿ ಹೊಗುತ್ತಿದ್ದನು. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್​​ನ್ನು ಓವರ್​ ಟೇಕ್​ ಮಾಡಲು ಹೋಗಿ ಗುದ್ದಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಭವಿಸಿದ ಕೆಲ ಅಪಘಾತ ಪ್ರಕರಣಗಳಲ್ಲಿ ಡ್ರಗ್ಸ್ ಕರಿನೆರಳು!

ಇದರಿಂದ ಬೈಕ್​ನಲ್ಲಿದ್ದ ದಂಪತಿ ಕೆಳೆಗೆ ಬಿದ್ದಿದ್ದಾರೆ. ಇದನ್ನು ಕಂಡು ರಾಮು ದ್ಯಾಮಕ್ಕನವರ್ ಸ್ಥಳದಿಂದ ಪರಾರಿಯಾಗಿದ್ದಾನೆ. ರಾಮು ದ್ಯಾಮಕ್ಕನವರ್ ಬೈಕ್​​ನ ಹಿಂದಯೇ ಇದ್ದ ಕಾರಿನ ಡ್ಯಾಷ್‌ಬೋರ್ಡ್ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ವಿಡಿಯೋ ಆಧರಿಸಿ ಪೊಲೀಸರು ರಾಮು ದ್ಯಾಮಕ್ಕನವರ್​​ನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಸಮೀನಾ ಎಂಬುವವರಿಗೆ ಗಾಯಗಳಾಗಿವೆ. ಧಾರವಾಡ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:42 am, Wed, 27 December 23