ಬೆಂಗಳೂರಿನಲ್ಲಿ ಸಂಭವಿಸಿದ ಕೆಲ ಅಪಘಾತ ಪ್ರಕರಣಗಳಲ್ಲಿ ಡ್ರಗ್ಸ್ ಕರಿನೆರಳು!
ಬೆಂಗಳೂರು ನಗರದಲ್ಲಿ ಇತ್ತಿಚೇಗಿನ ಕೆಲ ಅಪಘಾತ ಪ್ರಕರಣಗಳಲ್ಲಿ ಡ್ರಗ್ಸ್ ಕರಿನೆರಳು ಬಿದ್ದಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು, ಚಾಲಕರ ರಕ್ತ ಪರೀಕ್ಷೆ ಮಾಡಿಸುತ್ತಿದ್ದಾರೆ. ಒಂದು ವೇಳೆ ಡ್ರಗ್ಸ್ ಸೇವಿಸಿ ಅಪಘಾತ ಮಾಡಿದ್ದರೆ ಉದ್ದೇಶಪೂರ್ವಕವಲ್ಲದ ಕೊಲೆ ಎಂದು ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಕೇಸ್ ದಾಖಲಾಗುತ್ತದೆ.
ಬೆಂಗಳೂರು, (ಡಿಸೆಂಬರ್ 27): ಪೊಲೀಸರು ಎಷ್ಟೇ ಜಾಗೃತಿ ಹಾಗೂ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದರೂ ಸಹ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಡ್ರಗ್ಸ್ (Drugs) ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ವಿದೇಶ, ದೆಹಲಿ, ಮುಂಬೈ ಸೇರಿದಂತೆ ಇತರೆ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಆಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನೂ ಈ ಡ್ರಗ್ಸ್ ಸೇವಿಸಿ ಅಪಘಾತಗಳು ಸಂಭವಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು ನಗರದಲ್ಲಿ ಇತ್ತಿಚೇಗಿನ ಕೆಲ ಅಪಘಾತ ಪ್ರಕರಣಗಳಲ್ಲಿ ಡ್ರಗ್ಸ್ ಕರಿನೆರಳು ಬಿದ್ದಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು, ಚಾಲಕರ ರಕ್ತ ಪರೀಕ್ಷೆ ಮಾಡಿಸುತ್ತಿದ್ದಾರೆ. ಡ್ರಗ್ ಸೇವನೆ ಮಾಡಿ ಅಪಘಾತ ಮಾಡುತ್ತಿರುವ ಪ್ರಕರಣಗಳು ಹೆಚ್ಚಳವಾಗಿದೆ. ಇದರಿಂದ ಅಪಘಾತಕ್ಕೆ ಒಳಗಾದವರು ಹಾಗೂ ಅಪಘಾತ ಮಾಡಿದವರಿಬ್ಬರಿಗೂ ರಕ್ತ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ, 30 ಜನರಿಗೆ ಗಾಯ
ಇಷ್ಟು ದಿನ ಅಪಘಾತ ಪ್ರಕರಣಗಳಲ್ಲಿ ಅಜಾಗರೂಕ ಹಾಗೂ ನಿರ್ಲಕ್ಷ್ಯ ಎಂದು ಐಪಿಸಿ ಸೆಕ್ಷನ್ 304(a) ಅಡಿಯಲ್ಲಿ ಪ್ರಕರಣ ದಾಖಲಾಗುತಿತ್ತು. ಆದ್ರೆ, ಇದೀಗ ರಕ್ತ ಪರೀಕ್ಷೆ ಮಾಡಿದಾಗ ಡ್ರಗ್ಸ್ ಸೇವಿಸಿರುವುದು ಕಂಡು ಬಂದ್ರೆ ಉದ್ದೇಶಪೂರ್ವಕವಲ್ಲದ ಕೊಲೆ ಎಂದು ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಕೇಸ್ ದಾಖಲಾಗುತ್ತದೆ.
ಇನ್ನು ವೀಲ್ಹಿಂಗ್ ಮಾಡಿ ಅದರಿಂದ ಯಾರಾದ್ರೂ ಸಾವನ್ನಪಿದರೆ 304 ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಈಗಾಗಲೇ ಒಟ್ಟು ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ