ಬೆಂಗಳೂರು: ನಗರದ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸೊಳ್ಳೆ ಪರದೆ ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ದುರ್ಘಟನೆ ಸಂಭವಿಸಿದೆ. ಕಾವೇರಿಪುರದ ನಂಜಪ್ಪ ಲೇಔಟ್‌ನಲ್ಲಿರುವ ಫ್ಯಾಕ್ಟರಿಯಲ್ಲಿ ದುರ್ಘಟನೆ ಸಂಭವಿಸಿದ್ದು, 14 ಲಕ್ಷ ಮೌಲ್ಯದಷ್ಟು ವಸ್ತುಗಳು ಸುಟ್ಟುಭಸ್ಮವಾಗಿದೆ ಎಂದು ಶಂಕಿಸಲಾಗಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಅವಘಡದಲ್ಲಿ ಪ್ಯಾಕ್ಟರಿಯಲ್ಲಿದ 15 ಮಗ್ಗದ ಯಂತ್ರಗಳು, ಸುಮಾರು 2,000ಕೆಜಿ ಮೊನೊ ಫೀಲಾಮೆಂಟ್ ಯಾರ್ನ್, ರೆಡಿ ಸೊಳ್ಳೆ ಪರದೆಯ 150 ಪೀಸ್ ಬೆಂಕಿಗಾಹುತಿಯಾಗಿದೆ. ಹೇಮಾದ್ರಿ ನಾಯ್ಡು ಎಂಬುವವರಿಗೆ ಫ್ಯಾಕ್ಟರಿ ಸೇರಿದ್ದು, ಅಂದಾಜು ಸುಮಾರು 14 ಲಕ್ಷ ನಷ್ಟವಾಗಿರುವ ಸಾಧ್ಯತೆಯನ್ನು ಶಂಕಿಸಲಾಗಿದೆ.
ಪತ್ರಿಕೆಯೊಂದರಲ್ಲಿ ಅಗ್ನಿ ಅವಘಡ
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪತ್ರಿಕೆಯೊಂದರ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅವಘಡ ವೇಳೆ ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
ಇದನ್ನೂ ಓದಿ:
ಬುರ್ಖಾಧಾರಿ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ; ಕಠಿಣ ಕ್ರಮದ ಭರವಸೆ ನೀಡಿದ ಸಿಎಂ
(Bengaluru Fire Mosquito nets factory damaged lakhs of equipment )
Published On - 4:30 pm, Sun, 19 September 21