
ಬೆಂಗಳೂರು, ಅ.7: ಬೆಂಗಳೂರಿನ ಫ್ಲೈಓವರ್‌ನಲ್ಲಿ (Bengaluru flyover scam) ನಡೆದ ಒಂದು ಅಘಾತಕಾರಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ಮಂದರಗಿರಿ ಬೆಟ್ಟದ ಬಳಿಯ ಬೆಂಗಳೂರಿನ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. ಇದೀಗ ಇದರಿಂದ ವಾಹನ ಸವಾರರಿಗೆ ಸುರಕ್ಷತಾ ಕಳವಳವನ್ನುಂಟು ಮಾಡಿದೆ. ಪ್ರವಾಸ ಮುಗಿಸಿ, ಐಕಿಯಾ ಶೋ ರೂಂ ಮುಂಭಾಗದ ಫ್ಲೈಓವರ್ ಬಳಿಯ ರಸ್ತೆಯಲ್ಲಿ ಬರಬೇಕಾದರೆ ರಸ್ತೆಯ ಮೇಲೆ ಭಾರೀ ಪ್ರಮಾಣದ ಮೊಳೆಗಳು ಬಿದ್ದದರಿಂದ ಬೈಕ್ ಟೈರ್ ಪಂಚರ್ ಆಗಿದೆ. ಸವಾರರ ಬಳಿ ಬಿಡಿ ಟ್ಯೂಬ್ ಇತ್ತು. ತಕ್ಷಣ ಬದಲಾವಣೆ ಮಾಡಿ ಮುಂದಕ್ಕೆ ಸಾಗಿದ್ದಾರೆ. ಆದರೆ ಮುಂದಕ್ಕೆ ಹೋಗುತ್ತಿದ್ದಂತೆ ರಸ್ತೆ ಪೂರ್ತಿ ಈ ಮೊಳೆಗಳು ಇದೆ. ರಸ್ತೆಯಲ್ಲಿ ಹರಡಿರುವ ಮೊಳೆಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಬೆಂಗಳೂರಿನ ಫ್ಲೈಓವರ್‌ನಲ್ಲಿ ಸಂಚಾರಿಸುವಾಗ ಎಚ್ಚರದಿಂದ ಇರುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಈ ವಿಡಿಯೋದಲ್ಲಿ ಅದೇ ಸ್ಥಳದಲ್ಲಿ ಮತ್ತೊಬ್ಬ ಸೈಕಲ್ ಸವಾರನ ಟಯರ್ ಕೂಡ ಪಂಚರ್ ಆಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ. ಸುಲಿಗೆ ಮಾಡಲು ಇಂತಹ ಕೃತ್ಯವನ್ನು ಮಾಡಲಾಗುತ್ತಿದೆ. ವಾಹನಗಳನ್ನು ಪಂಚರ್ ಮಾಡಿ ಅಲ್ಲಿರುವ ಪಂಚರ್ ಶಾಪ್ಗೆ ಜನ ಬರುವಂತೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದೊಂದು ರೀತಿಯ ವಂಚನೆ ಎಂದು ಹೇಳಲಾಗಿದೆ. ನಂತರ ರಿಪೇರಿಯ ಹೆಸರಿನಲ್ಲಿ ಹೆಚ್ಚು ಹೆಚ್ಚು ಹಣವನ್ನು ಪಡೆಯುವುದು ಈ ಗ್ಯಾಂಗ್ನ ಕೆಲಸ ಆಗಿದೆ.
ಇದನ್ನೂ ಓದಿ: ಇದು ಬೆಂಗಳೂರು ರಸ್ತೆಗಳ ಗೋಳು, 11 ತಿಂಗಳಲ್ಲಿ 10 ಬಾರಿ ರಸ್ತೆ ಅಗೆಯುವ ಬಿಬಿಎಂಪಿ
🚨 SCAM ALERT for Bengaluru Citizens 🚨
⚠️ Public Awareness Message ⚠️A recent shocking incident has come to light near Mandaragiri Hill, and it serves as an urgent warning for all motorists and two-wheeler riders in Bengaluru.A group of people who had gone for an outing… pic.twitter.com/zG09cmnTPp
— Karnataka Portfolio (@karnatakaportf) October 6, 2025
ಈ ವಿಡಿಯೋವನ್ನು ಎಕ್ಸ್ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಅನೇಕ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಇದು ಕೆಲವು ವರ್ಷಗಳ ಹಿಂದೆ ಎಚ್‌ಎಸ್‌ಆರ್ ಅಗರ ಫ್ಲೈಓವರ್‌ನಲ್ಲಿ ನಡೆಯುತ್ತಿತ್ತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಇಟ್ಟು ವಂಚನೆ ಮಾಡಿರುವ ಪಂಕ್ಚರ್ ಗ್ಯಾಂಗ್‌ಗಳು ಇವೆ. ಈ ಗ್ಯಾಂಗ್‌ಗಳು ಟ್ಯೂಬ್ ಮಾತ್ರವಲ್ಲ, ವಾಹನದಲ್ಲಿ ಕೆಲವೊಂದು ರಿಪೇರಿ ಇದೆ ಎಂದು ಹೆಚ್ಚು ಹಣ ವಸೂಲಿ ಮಾಡುತ್ತಾರೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ಆರ್.ಆರ್. ನಗರದಲ್ಲಿ ಇದೇ ರೀತಿಯ ನೂರಾರು ಮೊಳೆಗಳು ಕಂಡುಬಂದಿವೆ ಮತ್ತು ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದೆ ಅದರ ಬಗ್ಗೆ ಏನಾಯಿತು ಎಂಬ ಬಗ್ಗೆ ಇಂದಿಗೂ ತಿಳಿದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ