AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಬೆಂಗಳೂರು ರಸ್ತೆಗಳ ಗೋಳು, 11 ತಿಂಗಳಲ್ಲಿ 10 ಬಾರಿ ರಸ್ತೆ ಅಗೆಯುವ ಬಿಬಿಎಂಪಿ

ಬೆಂಗಳೂರಿನ ರಸ್ತೆಗಳನ್ನು ಯಾರಿಂದಲ್ಲೂ ಸರಿ ಮಾಡಲು ಸಾಧ್ಯವಿಲ್ಲ. ಪ್ರತಿದಿನ ಇಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತ ಇರುತ್ತದೆ. ಇದರಿಂದ ಜನರಿಗೆ ತುಂಬಾ ಕಿರಿಕ್​​​​​​​​ ಆಗುತ್ತಿದೆ. ಇದೀಗ ಇದಕ್ಕೆ ಸಂಬಂಧಪಟ್ಟಂತೆ ಪೋಸ್ಟ್​​ ಒಂದು ವೈರಲ್​​ ಆಗಿದೆ. 11 ತಿಂಗಳಲ್ಲಿ ಕನಿಷ್ಠ 10 ಬಾರಿ ರಸ್ತೆಯನ್ನು ಅಗೆಯಲಾಗಿದೆ. ಪ್ರತಿ 2-3 ವಾರಗಳಿಗೊಮ್ಮೆ ಕೆಲವು ಅಧಿಕಾರಿಗಳು, ಕಾರ್ಮಿಕರು ಬರುತ್ತಾರೆ, ರಸ್ತೆಯನ್ನು ಅಗೆಯುತ್ತಾರೆ, ಅರ್ಧದಷ್ಟು ತೇಪೆ ಹಾಕುತ್ತಾರೆ ಇದು ಇಲ್ಲಿನ ಜನರ ಪ್ರತಿದಿನ ಈ ಸಮಸ್ಯೆಯನ್ನು ಅನುಭವಿಸುತ್ತ ಬಂದಿದ್ದಾರೆ.

ಇದು ಬೆಂಗಳೂರು ರಸ್ತೆಗಳ ಗೋಳು, 11 ತಿಂಗಳಲ್ಲಿ 10 ಬಾರಿ ರಸ್ತೆ ಅಗೆಯುವ ಬಿಬಿಎಂಪಿ
ರಸ್ತೆ ಕಾಮಗಾರಿ
ಅಕ್ಷಯ್​ ಪಲ್ಲಮಜಲು​​
|

Updated on: Oct 07, 2025 | 11:31 AM

Share

ಬೆಂಗಳೂರು, ಅ.7: ಬೆಂಗಳೂರಿನ (Bangalore) ರಸ್ತೆಗಳದ್ದು ದಿನಕ್ಕೊಂದು ಗೋಳು, ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ರಸ್ತೆಗಳ ಬಗ್ಗೆಯೇ ದೂರು, ಮಾತುಕತೆ ನಡೆಯುತ್ತಲೇ ಇರುತ್ತದೆ. ಟಿವಿ9 ಕನ್ನಡ ಕೂಡ ‘ಏನ್ ರೋಡ್ ಗುರು’ ಎಂಬ ವಿಶೇಷ ಕಾರ್ಯಕ್ರಮವನ್ನು ಮಾಡಿತ್ತು.  ಈ ಕಾರ್ಯಕ್ರಮದ ಮೂಲಕ ಅಧಿಕಾರಿಗಳನ್ನು ಎಚ್ಚರಿಸಿತ್ತು.  ಬೆಂಗಳೂರಿನ ಕೆಲವು ಕಡೆ ಈ ಅಭಿಯಾನದ ಮೂಲಕ ರಸ್ತೆಗಳು ದುರಸ್ಥಿತಿ ಮಾಡಲಾಗಿದೆ. ಅದರೂ ಇನ್ನು ಕೆಲವೊಂದು ರಸ್ತೆ ದುರಸ್ಥಿತಿ ಬಗ್ಗೆ ಕಾರ್ಯಪ್ರವೃತರಾಗಬೇಕಿದೆ.  ಇದೀಗ ಇಲ್ಲೊಂದು ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರು ನಿವಾಸಿಯೊಬ್ಬರು ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​​​ ತುಂಬಾ ವ್ಯಂಗ್ಯಾತ್ಮಕವಾಗಿದ್ದು, ನಗರದಲ್ಲಿ ಪ್ರತಿದಿನ ನಡೆಯುವ ಕಾಮಗಾರಿಯ ಬಗ್ಗೆ ಅಣಕಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನ 9ನೇ ಮುಖ್ಯ ರಸ್ತೆಯಲ್ಲಿರುವ ತಮ್ಮ ನಿವಾಸದ ಬಳಿ ಇರುವ ರಸ್ತೆಯನ್ನು 11 ತಿಂಗಳಲ್ಲಿ ಕನಿಷ್ಠ 10 ಬಾರಿ ರಸ್ತೆಯನ್ನು ಅಗೆಯಲಾಗಿದೆ. ಪ್ರತಿ 2-3 ವಾರಗಳಿಗೊಮ್ಮೆ ಕೆಲವು ಅಧಿಕಾರಿಗಳು, ಕಾರ್ಮಿಕರು ಬರುತ್ತಾರೆ, ರಸ್ತೆಯನ್ನು ಅಗೆಯುತ್ತಾರೆ, ಅರ್ಧದಷ್ಟು ತೇಪೆ ಹಾಕುತ್ತಾರೆ, ಮರುದಿನ ಅಲ್ಲಿಂದ ಅಧಿಕಾರಿಗಳು, ಕಾರ್ಮಿಕರು ಮಾಯಾ, ಇದನ್ನು ನೋಡಿ… ನೋಡಿ ಸಾಕಾಗಿದೆ ಎಂದು ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ. ಇದೊಂದು ನಿಗೂಢ ಕಾಮಾಗಾರಿ ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.

ಬಿಬಿಎಂಪಿ ’10 ಬಾರಿ ಅಗೆಯಿರಿ, 1 ಉಚಿತ’ ಯೋಜನೆ ಪಡೆಯಿರಿ ಎಂಬ ಅಭಿಯಾನವನ್ನು ಪ್ರಾರಂಭಿಸಿರಬೇಕು ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​​ ಮಾಡಿದ್ದಾರೆ. ಕೆಲವೊಂದು ಬಾರಿ ಈ ರಸ್ತೆಗಳನ್ನು ಹಾಗೂ ನಮ್ಮ ಅಧಿಕಾರಿಗಳು ಮಾಡುವ ಕೆಲಸಗಳನ್ನು ನೋಡಿದ್ರೆ ಜೀವನದಲ್ಲಿ ಮೈನ್‌ಕ್ರಾಫ್ಟ್ ಕಾಣುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ. ಅನೇಕರು ಈ ಕಮೆಂಟ್​​​​ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಹಾಗೂ ಬಿಬಿಎಂಪಿಯ ವಿರೋಧ ಪೋಸ್ಟ್​​ನ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿ ಅಗೆದು ಸ್ವಲ್ಪ ಮಳೆ ಬಂದರೆ ಇನ್ನು ಚೆನ್ನಾಗಿರುತ್ತದೆ. ಮಳೆಯಿಂದ ಗುಂಡಿಗಳು ಕೊಳದಂತೆ ಕಾಣುತ್ತದೆ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.ಇನ್ನು ಕೆಲವರು ಬೆಂಗಳೂರಿನಾದ್ಯಂತ ಇದೇ ಕಥೆ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​

BBMP, is there a frequent digger loyalty program? 🤡 byu/toroidmax inbangalore

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಭಾರೀ ವೈರಲ್​​ ಆಗುತ್ತಿದೆ. ಪೋಸ್ಟ್​​​ ಬಗ್ಗೆ ಹಲವು ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ರೀತಿ ವ್ಯವಸ್ಥಿತ ಭ್ರಷ್ಟಾಚಾರ ಎಂದು ಒಬ್ಬ ಬಳಕೆದಾರ ಈ ಪೋಸ್ಟ್​​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರ ತುಂಬಾ ತಮಾಷೆಯಾಗಿ ಹೇಳಿದ್ದಾರೆ ಬಹುಶಃ ಅವರು 1800 ರ ದಶಕದ ಯಾವುದೋ ಗುಪ್ತ ನಿಧಿಗಾಗಿ ಅಗೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಸದಾಗಿ ಹಾಕಿದ ರಸ್ತೆಗಳು ಒಂದು ವಾರ ಮಾತ್ರ ಚೆನ್ನಾಗಿ ಇರುತ್ತದೆ. ನಂತರ ಕೇಬಲ್ ಅಥವಾ ನೀರಿನ ಕಾಮಗಾರಿಗಳಿಗಾಗಿ ಮತ್ತೆ ಅಗೆಯಲು ಪ್ರಾರಂಭಿಸುತ್ತಾರೆ. ಇದು ಬೆಂಗಳೂರಿನ ಅಧಿಕಾರಿಗಳ ಸೂಚನೆ ಮೆರೆಗೆ ನಡೆಯುತ್ತಿದೆ ಎಂದು ಹಲವು ಜನ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್​ಗಳು! ನಾನ್ ಪೀಕ್ ಅವರ್ಸ್ ಸಂಚಾರ ಇನ್ನು ಸುಗಮ

ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಅಲ್ಲಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿರುವ ವೇಳೆ ಈ ಪೋಸ್ಟ್​​ ವೈರಲ್​ ಆಗಿದೆ. ನಗರದಾದ್ಯಂತ 35,000 ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದೆ ಮತ್ತು ಮಳೆಗಾಲ ಕಡಿಮೆಯಾಗುವ ಮೊದಲು ಅವುಗಳನ್ನು ಮುಚ್ಚಲು ವಿಶೇಷ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. BWSSB ಪೈಪ್‌ಲೈನ್‌ಗಳು, ಬೆಸ್ಕಾಂ ಕೇಬಲ್‌ಗಳು ಅಥವಾ ಇಂಟರ್ನೆಟ್ ಫೈಬರ್ ಕೆಲಸಕ್ಕಾಗಿ ರಸ್ತೆಗಳನ್ನು ಹೆಚ್ಚು ಅಗೆಯುತ್ತಿದ್ದಾರೆ. HSR ಲೇಔಟ್, ಬೆಳ್ಳಂದೂರು ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ, ಪದೇ ಪದೇ ರಸ್ತೆಗಳನ್ನು ಅಗೆದು ಭಾಗಶಃ ಮಾತ್ರ ಮುಚ್ಚಿ ಹೋಗುತ್ತಾರೆ ಎಂಬುದು ಸ್ಥಳೀಯರ ದೂರು.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ