
ಬೆಂಗಳೂರು, ಜ.10: ಬೆಂಗಳೂರು (Bengaluru) ಸಿಲಿಕಾನ್ ಸಿಟಿ, ಇಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಆದರೆ ಇತ್ತೀಚಿಗೆ ಇಲ್ಲಿ ಯಾವುದೂ ಸರಿ ಇಲ್ಲ. ದಿನಕ್ಕೊಂದು ಸಮಸ್ಯೆಗಳ ದೂರು ಬರುತ್ತಿರುತ್ತದೆ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಟ್ರಾಫಿಕ್, ಇದೀಗ ಇದರ ಜತೆಗೆ ಪಾದಚಾರಿಗಳ ಮಾರ್ಗ ಕೂಡ ಸರಿ ಇಲ್ಲ. ಪಾದಚಾರಿಗಳ ಮಾರ್ಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಕ್ಸ್ನಲ್ಲಿ ಈ ವಿಚಾರವಾಗಿ ಪೋಸ್ಟ್ವೊಂದನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಮೊದಲೇ ಈ ಪಾದಚಾರಿ ಮಾರ್ಗದಲ್ಲಿ ಓಡಾಡಲು ಆಗುತ್ತಿಲ್ಲ. ಅಲ್ಲಿಯೇ ಕಸ, ವಾಹನ ಎಲ್ಲವನ್ನು ನಿಲ್ಲಿಸಿರುತ್ತಾರೆ. ಹೇಗೋ ಸಹಿಸಿಕೊಂಡು ಹೋಗುತ್ತೇವೆ. ಇದರ ಮಧ್ಯೆ ಈ ದೊಡ್ಡ ಗಾತ್ರದ ಕಾಂಕ್ರೀಟ್ ಬ್ಲಾಕ್ ಇಟ್ಟಿದ್ದಾರೆ. ಜನರು ಇಲ್ಲಿ ಹೇಗೆ ಓಡಾಡುವುದು, ಅಧಿಕಾರಿಗಳಿಗೆ ಈ ಬಗ್ಗೆ ಸಾಮಾನ್ಯ ಪ್ರಜ್ಞೆಯಾದರು ಇರಬೇಕೆಲ್ಲ ಎಂದು ಪ್ರಶ್ನಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಶಿಲ್ಪ ಎನ್ನುವವರು ಈ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು ಫೋಟೋವನ್ನು ಹಂಚಿಕೊಂಡು, “ಭಾರತದ ಅತಿದೊಡ್ಡ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾದ ನಮ್ಮ ಬೆಂಗಳೂರು, ಸಾರ್ವಜನಿಕ ಯೋಜನೆ ಮತ್ತು ಪಾದಚಾರಿ ಸುರಕ್ಷತೆಯ ಕುರಿತು ಭಾರೀ ಚರ್ಚೆಗೆ ಕಾರಣವಾಗಿದೆ. ಬಾಗ್ಮನೆ ಟೆಕ್ ಪಾರ್ಕ್ ಪ್ರದೇಶದಲ್ಲಿರುವ ಇಂತಹ ಸ್ಥಿತಿ ಎಲ್ಲೂ ಇಲ್ಲ. ಪಾದಚಾರಿ ಮಾರ್ಗದ ಮೇಲೆ ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕಲಾಗಿದ್ದು, ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಬೇಕಾಗಿರುವ ಪರಿಸ್ಥಿತಿ ಬಂದಿದೆ. ಮೊದಲು ಸಂಗ್ರಹಣೆ, ನಂತರ ನಡೆಯಲು ಅನುಕೂಲಕರ” ಎಂದು ಈ ಪೋಸ್ಟ್ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ ಕಡಿಮೆ ಅವಧಿಯಲ್ಲಿ 8 ಸಾವಿರ ವೀಕ್ಷಣೆಯನ್ನು ಗಳಿಸಿಕೊಂಡಿದೆ. ಹಲವಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಲ್ಲಲ್ಲಿ ವಾಹನ ಪಾರ್ಕ್ ಮಾಡುವವರಿಗೆ ಜಿಬಿಎ ಶಾಕ್!
Bangalore Footpaths:
Storage first, walkability last.At Bagmane techpark, EMC bus stop. pic.twitter.com/WxAhg0CLax
— Shilpi (@TwitShilpi) January 8, 2026
ಬೆಂಗಳೂರಿನಾದ್ಯಂತ ಇಂತಹ ದೃಶ್ಯಗಳು ಸಾಮಾನ್ಯ ಎಂದು ಈ ಪೋಸ್ಟ್ಗೆ ರೀಪೋಸ್ಟ್ ಮಾಡಿದ್ದಾರೆ. ಜನರ ನಡೆಯುವ ಈ ಸ್ಥಳದಲ್ಲಿ ವಾಹನ, ಕಾಮಗಾರಿ ವಸ್ತುಗಳು, ಇಂತಹ ದೊಡ್ಡ ಗಾತ್ರದ ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕುತ್ತಿದ್ದಾರೆ. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ ಅನೇಕರು ಕಮೆಂಟ್ ಮಾಡಿದ್ದಾರೆ. ನಾವು ಪಾದಚಾರಿ ಮಾರ್ಗಗಳಲ್ಲಿ ಈ ಅಸಂಬದ್ಧತೆಗಾಗಿ ತೆರಿಗೆ ಪಾವತಿಸುತ್ತಿದ್ದೇವೆಯೇ? ಎಂದು ಒಬ್ಬರು ಹೇಳಿದ್ದಾರೆ. ಇದು ಗಂಭೀರವಾಗಿ ಸ್ವೀಕಾರಾರ್ಹವಲ್ಲ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನ ನಿವಾಸಿಯಾಗಿ ಈ ಚಿತ್ರವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 pm, Sat, 10 January 26