
ಬೆಂಗಳೂರು, ಜ.17: ಬೆಂಗಳೂರಿನ ಜಿಮ್ (Bengaluru Gym) ಒಂದರಲ್ಲಿ ವಿಚಿತ್ರ ಪೋಸ್ಟ್ವೊಂದನ್ನು ಹಾಕಿದ್ದಾರೆ. ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ನಗರದ ಜಿಮ್ವೊಂದರಲ್ಲಿ ಸಲಿಂಗಕಾಮಿಗಳಿಗೆ ತೂಕ ಇಳಿಸಿಕೊಳ್ಳಲು ಅವಕಾಶ ಇಲ್ಲ ಎಂಬ ಪೋಸ್ಟರ್ ಹಾಕಿದ್ದಾರೆ. ಇದೀಗ ಇದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜಿಮ್ ಮಾಲೀಕರ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ. ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋ ಈ ಪೋಸ್ಟ್ನ್ನು ಹಾಕಿದೆ ಎಂದು ಹೇಳಲಾಗಿದೆ. ಈ ಪೋಸ್ಟರ್ನ್ನು ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ, ಯಾವುದೇ ಸಮುದಾಯವನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋ ಹೇಳಿಕೆ ನೀಡಿದೆ. ಜತೆಗೆ ಕ್ಷಮೆಯನ್ನು ಕೇಳಿದೆ ಎಂದು ಹೇಳಲಾಗಿದೆ. ಪೋಸ್ಟ್ ಈಗಾಗಲೇ ಆನ್‌ಲೈನ್‌ನಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು, ಅನೇಕ ನೆಟ್ಟಿಗರು ಹೋಮೋಫೋಬಿಕ್ ಬಗ್ಗೆ ಹೇಳಿಕೆ ನೀಡಿದ ಜಿಮ್ನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ.
ಈ ಪೋಸ್ಟ್ನ್ನು ರೆಡ್ಡಿಟ್‌ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ‘ಗೇ’ ಪದವನ್ನು ಹೀಗೆ ಬಳಸುವುದು ಸರಿಯಲ್ಲ. ಇದು ಅವಮಾನದ ಸಂಗತಿ ಎಂದು ಈ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ನಲ್ಲಿರುವ ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋದಲ್ಲಿ ಹಾಕಲಾಗಿದೆ. ಇಂತಹ ಅಸಂಬದ್ಧ ಪೋಸ್ಟರ್ಗಳನ್ನು ಹಾಕಲು ಯಾರೂ ಅಧಿಕಾರ ನೀಡಿದ್ದು, ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. HSR ಲೇಔಟ್‌ನ ಅತ್ಯಂತ ಪ್ರಸಿದ್ಧ ಜಿಮ್‌ನಲ್ಲಿ ಇಂತಹ ಪೋಸ್ಟರ್ಗಳನ್ನು ಹಾಕುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲರೂ ಕಷ್ಟ ಪಡುತ್ತಾರೆ. ಆದರೆ ಗೇ ಎನ್ನುವ ಕಾರಣಕ್ಕೆ ಈ ರೀತಿ ಪೋಸ್ಟರ್ಗಳನ್ನು ಹಾಕಿ ಅವಮಾನ ಮಾಡುವುದು ಸರಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!
Blatant homophobia at a gym in HSR. Can’t believe this is real
byu/skullkeeper0023 inbangalore
ಈ ಜಿಮ್ ನಡೆಸುವವರು ಅನಕ್ಷರಸ್ಥರು ಎಂಬುದನ್ನು ಈ ಪೋಸ್ಟರ್ ತೋರಿಸುತ್ತದೆ. ಈ ವ್ಯಕ್ತಿ ಮೆದುಳಿಲ್ಲ, ಕೇವಲ ಸ್ನಾಯುಗಳು ಮಾತ್ರ ಇದೆ ಎಂದು ಟೀಕಿಸಿದ್ದಾರೆ. ಈ ಜಿಮ್ನ್ನು ಬಹಿಷ್ಕಾರ ಮಾಡಿ. ಕೆಟ್ಟದಾಗಿ ರೇಟ್ ಮಾಡಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು ಈ ಜಿಮ್‌ಗೆ ಒಂದು ವರ್ಷ ಹೋಗಿದ್ದೆ. ಅಲ್ಲಿನ ಜನರು ಮತ್ತು ತರಬೇತುದಾರರು ಸಂಪೂರ್ಣವಾಗಿ ಹುಚ್ಚರು. ಇದು ನಿಜಕ್ಕೂ ತುಂಬಾ ಅವಮಾನ ವಿಚಾರ ಎಂದು ಹೇಳಿದ್ದಾರೆ. ಸಲಿಂಗಕಾಮಿ ಕೂಡ ಮನುಷ್ಯರಲ್ಲವೇ? ಈ ಪೋಸ್ಟರ್ ಹಾಕಿದವನಿಗೆ ಬಾಲ್….. ಕ್ಷಮಿಸಿ ಮೆದುಳು ಇಲ್ಲ ಎಂದು ಮತ್ತೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Sat, 17 January 26