Blinkit App: ಎರಡು ಐಟಮ್ ಮಿಸ್ ಎಂದು ಡೆಲಿವರಿ ಬಾಯ್​ಗೆ ಚಪ್ಪಲಿಯಲ್ಲಿ ಹೊಡೆದ ದಂಪತಿ, ಸ್ಥಳದಲ್ಲಿ ಡೆಲಿವರಿ ಬಾಯ್​ಗಳ ಪ್ರತಿಭಟನೆ

| Updated By: Rakesh Nayak Manchi

Updated on: Feb 01, 2023 | 3:05 PM

ಐಟಮ್ಸ್ ಚೆಕ್ ಮಾಡಿ ಎಂದರೂ ಚೆಕ್ ಮಾಡದೆ ಮೆನೆಯೊಳಗೆ ಹೋಗಿ ಎರಡು ಐಟಮ್ಸ್ ಮಿಸ್ ಎಂದು ಆರೋಪಿಸಿ ಡೆಲಿವರಿ ಬಾಯ್​ಗೆ ದಂಪತಿ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Blinkit App: ಎರಡು ಐಟಮ್ ಮಿಸ್ ಎಂದು ಡೆಲಿವರಿ ಬಾಯ್​ಗೆ ಚಪ್ಪಲಿಯಲ್ಲಿ ಹೊಡೆದ ದಂಪತಿ, ಸ್ಥಳದಲ್ಲಿ ಡೆಲಿವರಿ ಬಾಯ್​ಗಳ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಆತ ತನ್ನ ಹೊಟ್ಟೆಪಾಡಿಗಾಗಿ ಬ್ಲಿಂಕಿಟ್ ಆ್ಯಪ್​ನಲ್ಲಿ (Blinkit App) ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಯಕಲವೇ ಕೈಲಾಸ ಎಂದು ದಿನನಿತ್ಯ ಗ್ರಾಹಕರಿಗೆ ಆರ್ಡರ್​​ಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುತ್ತಿದ್ದನು. ಆದರೆ ಇಂದು ತಾನು ಮಾಡದ ತಪ್ಪಿಗೆ ಚಪ್ಪಲಿ ಏಟು ತಿನ್ನುವಂತಾಗಿದೆ. ಹೌದು, ವೀರೇಶ್ ಎಂಬ ಯುವಕ ಬ್ಲಿಂಕಿಟ್ ಆ್ಯಪ್ ಡೆಲಿವರಿ ಬಾಯ್ ಆಗಿದ್ದಾನೆ. ಅದರಂತೆ ಗ್ರಾಹಕರು ಆರ್ಡರ್ ಮಾಡಿದ್ದ ಗ್ರೊಸರಿ ಡೆಲಿವರಿಗೆಂದು ಮನೆ ಬಾಗಿಲಿಗೆ ಬಂದಿದ್ದಾನೆ. ಆರ್ಡರ್ ಪಡೆದ ದಂಪತಿ ಪಾರ್ಸೆಲ್​ನಲ್ಲಿ ಎರಡು ಐಟಮ್ಸ್ ಇಲ್ಲ ಎಂದು ಆರೋಪಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ (Assault On Delivery Boy). ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಸಂಪೂರ್ಣ ವಿವರ ಇಲ್ಲಿದೆ.

ಬ್ಲಿಂಕಿಟ್ ಆ್ಯಪ್ ಮೂಲಕ ಶ್ರೀನಿ ಮತ್ತು ಪತ್ನಿ ಗೃಹೋಪಯೋಗಿ ಸಾಮಗ್ರಿ (ಗ್ರೊಸರಿ ಸಾಮಾಗ್ರಿಗಳು) ಆರ್ಡರ್ ಮಾಡಿದ್ದಾರೆ. ಒಟ್ಟು ಎಂಟು ಸಾಮಾಗ್ರಿಗಳನ್ನು ಕ್ಯಾಷ್ ಆನ್ ಡೆಲಿವರಿ ಆಡರ್ಡರ್ ಮಾಡಿದ್ದಾರೆ. ಅದರಂತೆ ಡೆಲಿವರಿ ಬಾಯ್ ವೀರೇಶ್, ಬೆಳಗ್ಗೆ 8 ಗಂಟೆ ಸುಮಾರಿಗೆ ಗೊಲ್ಲಹಳ್ಳಿಯಿಂದ ಬಂದಿದ್ದಾನೆ. ಗ್ರಾಹಕರಿಗೆ ಪಾರ್ಸೆಲ್ ಒಪ್ಪಿಸು ವೇಳೆ ವೀರೇಶ್ ದಂಪತಿಗೆ ಐಟಮ್ಸ್ ಚೆಕ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.

ಇದನ್ನೂ ಓದಿ: ನಾಯಿಗೆ ಹೆದರಿ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸಾವು

ವಿರೇಶ್ ಸಾಮಾಗ್ರಿಗಳು ಸರಿ ಇವೆಯೇ ಎಂದು ಸ್ಥಳದಲ್ಲೇ ಪರಿಶೀಲಿಸುವಂತೆ ಕೋರಿದ್ದರೂ ಒಪ್ಪದ ದಂಪತಿ ಪರವಾಗಿಲ್ಲ ನಾವು ಮನೆಯೊಳಗೆ ಚೆಕ್ ಮಾಡುತ್ತೇವೆ ಎಂದು ಹೇಳಿ ಐಟಮ್ ಸಹಿತ ಮನೆಯೊಳಗೆ ಹೋಗಿದ್ದಾರೆ. ಹೀಗೆ ಹೋದ ದಂಪತಿ ಮತ್ತೆ ವಾಪಸ್ ಹೊರ ಬಂದು ಎರಡು ಐಟಮ್ಸ್ ಕಡಿಮೆ ಇದೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ಇದನ್ನು ಡೆಲಿವರಿ ಬಾಯ್ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ ಶ್ರೀನಿ ಕಾಲಿನಲ್ಲಿ ಇದ್ದ ಚಪ್ಪಲಿಯಲ್ಲಿ ಹೊಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಡ ಹೆಂಡತಿ ಇಬ್ಬರು ಡೆಲಿವರಿ ಬಾಯ್​ನನ್ನ ಕೆಳಗೆ ಬೀಳಿಸಿ ಕಾಲಿನಲ್ಲಿ ಒದ್ದಿದ್ದಾರಂತೆ. ಇದರಿಂದ ಆಕ್ರೋಶಗೊಂಡಿರುವ ನೂರಾರು ಡೆಲಿವರಿ ಬಾಯ್​ಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫ್ರೆಸ್ಟೀಜ್ ಸನ್ ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಚಪ್ಪಲಿಯಲ್ಲಿ ಹೊಡೆದ ಗಂಡ ಹೆಂಡತಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಪಾರ್ಟ್ಮೆಂಟ್ ಗೇಟ್ ಬಂದ್ ಮಾಡಿ ನೆಲದ ಮೇಲೆ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Wed, 1 February 23