
ಬೆಂಗಳೂರು, ನವೆಂಬರ್ 10: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ (Husband) ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ ಗಿರಿನಗರದಲ್ಲಿ ನಡೆದಿದೆ. ಗಗನ್ ರಾವ್ ನೇಣಿಗೆ ಶರಣಾದ ಪತಿ. ದಂಪತಿ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದ ನೊಂದ ಗಗನ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ರಾವ್, ಎಂಟು ತಿಂಗಳ ಹಿಂದೆ ಮೇಘನಾ ಜತೆ ಮದುವೆಯಾಗಿದ್ದರು. ಮನೆಯಲ್ಲಿ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಗನ್ ರಾವ್ ಸಹೋದರಿ ಮೇಘನಾ ವಿರುದ್ಧ ದೂರು ನೀಡಿದ್ದಾರೆ.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸಾರ್ ಹೇಳಿಕೆ ನೀಡಿದ್ದು, ನಿನ್ನೆ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಸಂಜೆ 7.30 ಸುಮಾರಿಗೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಹೆಂಡತಿ ಹಾಗೂ ಅಕ್ಕ ಪಕ್ಕದವರು ನೋಡಿ ಇನ್ನು ಬದುಕಿರುವುದಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು ಎಂದರು.
ಇದನ್ನೂ ಓದಿ: ಮೂವರು ಮಕ್ಕಳ ತಾಯಿಯ ಕಾಮದಾಹಕ್ಕೆ 5 ತಿಂಗಳ ಶಿಶು ಬಲಿ: ಸಲಿಂಗ ಕಾಮಕೇಳಿಗೆ ಅಡ್ಡಿಯೆಂದು ತಾನೇ ಹೆತ್ತ ಮಗುವನ್ನೇ ಕೊಂದ ಮಹಿಳೆ
ವ್ಯಕ್ತಿ ತಂದೆ ಲಕ್ಷ್ಮಣ ರಾವ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹೆಂಡತಿ ಮೇಘನಾಳ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಗನ್ ಹಾಗೂ ಮೇಘನಾ ಇಬ್ಬರಿಗೂ ವೈಮನಸ್ಸಿತ್ತು. ಆಗಾಗ ಜಗಳವಾಡುತ್ತಿದ್ದರು ಅನ್ನೋದು ತಿಳಿದು ಬಂದಿದೆ ಎಂದು ಹೇಳಿದರು.
ಇನ್ನು ಈ ಕುರಿತಾಗಿ ಪತ್ನಿ ಮೇಘನಾ ಜಾದವ್ ಮಾತನಾಡಿದ್ದು, ಆರೋಪ ನಿರಾಕರಿಸಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಪತಿಗೆ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿತ್ತು. ಬಲವಂತ ಮಾಡಿ ಅವರ ಕುಟುಂಬದವರು ನನ್ನ ಜೊತೆ ಮದುವೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಶೀಲದ ಮೇಲೆ ಶಂಕೆ: ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಂದ ಪಾಪಿ ಪತಿ
ಬೇರೆಯವರ ಸಹವಾಸ ಬಿಟ್ಟುಬಿಡಿ, ನಾವಿಬ್ಬರೂ ಚೆನ್ನಾಗಿರೋಣ ಅಂತಾ ಹೇಳಿದ್ದೆ. ನಿನ್ನೆ ಮನೆಗೆ ಬಂದವರೆ ನೀನು ಚೆನ್ನಾಗಿರು ಅಂತ ಹೇಳಿ ರೂಮ್ ಬಾಗಿಲು ಹಾಕಿಕೊಂಡರು. ಸ್ವಲ್ಪ ಹೊತ್ತಿಗೆ ನೇಣು ಹಾಕೊಂಡಿದ್ದಾರೆ. ಪತಿ ಬೇರೊಬ್ಬರ ಜೊತೆಗೆ ಸಲುಗೆಯಿಂದಿರುವ ಫೋಟೋಸ್ ತೋರಿಸಿದ ಪತ್ನಿ, ವಿಚಾರವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Mon, 10 November 25