ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ (D.Roopa) ಅವರ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ರೋಹಿಣಿ ವಿರುದ್ಧ ಸಮರ ಸಾರಿರುವ ರೂಪಾ ಅವರು ಆರೋಪಗಳ ಪಟ್ಟಿಯನ್ನೇ ತೆರೆದಿಡುತ್ತಿದ್ದಾರೆ. ಇಷ್ಟಾಗಿಯೂ ಮೌನವಾಗಿದ್ದ ರೋಹಿಣಿ ಸಿಂಧೂರಿ, ಇದೀಗ ಮೌನ ಮುರಿದ ರೂಪಾ ಅವರ ಆರೋಪಗಳಿಗೆ ತಿರುಗೇಟು ನೀಡಲು ಆರಂಭಿಸಿದ್ದಾರೆ. ಈ ನಡುವೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಅವರು ಎಂಟ್ರಿ ಕೊಟ್ಟಿದ್ದು, ಇವರು ಮಾಡಿದ ಒಂದು ಟ್ವೀಟ್ ಭಾರೀ ಕುತೂಹಲ ಮೂಡಿಸಿದೆ. ಇನ್ನು ಈ ಟ್ವೀಟ್ಗೆ ರೂಪಾ ಕೂಡ ರೀಟ್ವೀಟ್ ಮಾಡಿದ್ದು, ದೇವರು “ಅವಳಿಗೆ” ಅನುಭೂತಿಯನ್ನು ನೀಡಲಿ ಮತ್ತು ಸದ್ಬುದ್ಧಿಯನ್ನು ಪುನರಾವರ್ತಿಸಲಿ ಎಂದು ಹೇಳಿದ್ದಾರೆ.
ಐಎಎಸ್-ಐಪಿಎಸ್ ಮಹಿಳಾ ಅಧಿಕಾರಿಗಳ ನಡುವಿನ ವಾರ್ ನಡುವೆ ಟ್ವೀಟ್ ಮಾಡಿದ ಕುಸುಮಾ ಹನುಮಂತರಾಯಪ್ಪ, “ಯಾವುದೇ ಕಾರಣಕ್ಕೂ ತಾವು ಮಾಡಿದ ಕರ್ಮ ಬಿಡುವುದಿಲ್ಲ. ನಿಧಾನವಾಗಿ ಅಥವಾ ಬೇಗವಾದರೂ ಕರ್ಮ ನಿಮ್ಮನ್ನು ಬಿಡಲ್ಲ” ಎಂದು ರೋಹಿಣಿ ಸಿಂಧೂರಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕುಸುಮಾರ ಪತಿ ಡಿ.ಕೆ.ರವಿ ಅವರ ಸಾವಿನ ಹಿಂದೆ ರೋಹಿಣಿ ಸಿಂಧೂರಿ ಹೆಸರು ಕೇಳಿಬಂದಿತ್ತು. ಇಬ್ಬರ ನಡುವೆ ಸಂಬಂಧ ಇತ್ತು ಎಂಬ ಆರೋಪಗಳು ಕೇಳಿಬಂದಿದ್ದವು.
“ Karma will get back at you , sooner or later it surely will ”
— Kusuma Hanumantharayappa (@KusumaH_INC) February 19, 2023
ಇನ್ನು ಕುಸುಮಾ ಟ್ವೀಟ್ ನೋಡಿದ ರೂಪಾ ಅವರು ರೀಟ್ವೀಟ್ ಮಾಡಿದ್ದು, “ಕುಸುಮಾ, ಒಬ್ಬ ಮಹಿಳೆಯಾಗಿ ನಿಮ್ಮ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಇತರ ಅನೇಕ ಮಹಿಳೆಯರ ನೋವು (ಅವರಲ್ಲಿ ಕೆಲವರು ಐಎಎಸ್ನಲ್ಲಿದ್ದಾರೆ), ಆದರೂ ಅಸಹಾಯಕರಾಗಿದ್ದಾರೆ. ಆದರೆ ಅಂತಿಮವಾಗಿ, ಯಾರಾದರೂ ಅಪರಾಧಿಯ ವಿರುದ್ಧ ನಿಲ್ಲಬೇಕು (ಅವಳು ಮಹಿಳೆಯಾಗಿದ್ದರೂ ಸಹ). ದೇವರು “ಅವಳಿಗೆ” ಅನುಭೂತಿಯನ್ನು ನೀಡಲಿ ಮತ್ತು ಸದ್ಬುದ್ಧಿಯನ್ನು ಪುನರಾವರ್ತಿಸಲಿ” ಎಂದಿದ್ದಾರೆ.
Kusuma, I understand your pain as a woman. And the pain of many other women (some of them in ias), yet helpless. But finally, someone has to stand up against the perpetrator (even if she is a woman). With u on this matter. May God give “her” empathy n sadbuddhi not to repeat . https://t.co/7H7fjrBrTC
— D Roopa IPS (@D_Roopa_IPS) February 19, 2023
ಡಿಕೆ Ravi ias, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್ ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ limit cross ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ(ರೋಹಿಣಿ ಸಿಂಧೂರಿ). ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ ಎಂದು ರೂಪಾ ಅವರು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Sun, 19 February 23