Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಾಯಂಕಾಲದವರೆಗೆ ಪವರ್​ ಕಟ್​​

|

Updated on: Jun 27, 2024 | 8:57 AM

ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು (ಜೂ.27) ಬೆಳಗ್ಗೆ 10:30ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಾಯಂಕಾಲದವರೆಗೆ ಪವರ್​ ಕಟ್​​
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜೂನ್​ 27: ಕರ್ನಾಟಕ ವಿದ್ಯುತ್​ ಪ್ರಸರಣಾ ನಿಗಮ ನಿಯಮಿತ (KPTCL) ವಿದ್ಯುತ್​ ಲೈನ್​ ದುರಸ್ತಿ ಕಾರ್ಯ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು (ಜೂ.27) ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗು ಪವರ್​ ಕಟ್​​ ಆಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ (BSECOM) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬೆಂಗಳೂರಿನ ಹೆಬ್ಬಾಳ ಮತ್ತು ಶಿವಾಜಿನಗರ ವಿಭಾಗದಲ್ಲಿ ಬರುವ ಎಕೆ ಆಶ್ರಮ ರಸ್ತೆ, ದೇವೇಗೌಡ ರಸ್ತೆ, ಆರ್​ಟಿ ನಗರ ಮೊದಲನೇ ಬ್ಲಾಕ್​​, ತಿಮ್ಮಯ್ಯ ಗಾರ್ಡನ್​, ಮೋದಿ ಗಾರ್ಡನ್​​, ಮಿಲಟರಿ ನಗರ, ವೀರಣ್ಣಪಾಳ್ಯಾ, ಲುಂಬಾನಿ ಗಾರ್ಡನ್​​, ಬಿಡಬ್ಲೂಎಸ್​ಎಸ್​ಬಿ ಸ್ವೇಜ್​​ ಪ್ಲಾಂಟ್​​, ಮರಿಯಪ್ಪನಪಾಳ್ಯ, ಕಾಫಿ ಬೋರ್ಟ್​ ಲೇಔಟ್​, ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್​​, ಭುವನೇಶ್ವರಿ ನಗರ, ಬ್ಯಾರಪ್ಪಾ ಲೇಔಟ್​​ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10:30 ರಿಂದ ಸಾಯಂಕಾಲ 4 ಗಂಟೆವರೆಗು ಪವರ್​ ಕಟ್​ ಆಗಲಿದೆ.

ಜಯನಗರ ವಿಭಾಗದ ಮಾರುತಿ ಅಪಾರ್ಟ್ಮೆಂಟ್​, ತಲಗಟ್ಟಾಪುರ, ರಘುವನಹಳ್ಳಿ, ಗುಬಲಾಲ, ಕುವೆಂಪು ನಗರ, ವಿವಿ ನಗರ, ವಿವಿ ಲೇಔಟ್​, ಬಾಲಾಜಿ ಲೇಔಟ್​, ರಾಯಲ್​ ಫಾರಂ, ಎಲಿಟಾ ಪ್ರೊಮೆಂಡ್​ ಅಪಾರ್ಟ್ಮೆಂಟ್​, ಕೆಆರ್​ ಲೇಔಟ್​, ಶಾರದಾನಗರ, ಚುಂಚಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆವರೆಗು ವಿದ್ಯುತ್​ ವ್ಯತ್ಯಯ ​ಆಗಲಿದೆ.

ಇದನ್ನೂ ಓದಿ: ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; 8 ಜಿಲ್ಲೆಗಳಲ್ಲಿ 13 ಕೋಟಿಯಷ್ಟು ಹಾನಿ

ರಾಮನಗರ ಗ್ರಾಮಾಂತರ ವಿಭಾಗದ ಹುಣಸನಹಳ್ಳಿ, ಕೊಣಗಲ, ಯರಬಂಗಾರ ಗ್ರಾಮಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್​ ಕಡಿತಗೊಳ್ಳಲಿದೆ.

ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Thu, 27 June 24