ಬೆಂಗಳೂರಿನ ಎಂಟು ವಲಯಗಳಲ್ಲಿ ಉಚಿತ ದಂತ ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಸರ್ಕಾರ ಚಿಂತನೆ
ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಾಲಿಟ್ರೆ ಸಾಕು, ಕುಂತ್ರೆ ಹಣ, ನಿಂತ್ರೆ ಹಣ ಸುಲಿಗೆ ಎನ್ನುವಂತಾಗಿದೆ. ಅದರಲ್ಲೂ ಡೆಂಟಲ್ ಕ್ಲಿನಿಕ್ಗಳಿಗೆ ಕಾಲಿಟ್ರೆ, ಸಾವಿರಾರೂ ರೂಪಾಯಿ ಚಿಕಿತ್ಸೆಗೆ ನೀಡಬೇಕಾದ ಸ್ಥಿತಿ ಇದೆ. ಹೀಗಾಗಿ ಬಡ ಜನರ ಗೋಳಾಟ ತಪ್ಪಿಸಲು ಆರೋಗ್ಯ ಇಲಾಖೆ ರಾಜಧಾನಿಯಲ್ಲಿ ಡೆಂಟಲ್ ಕ್ಲಿನಿಕ್ ಶುರು ಮಾಡಲು ಮುಂದಾಗಿದೆ.
ಬೆಂಗಳೂರು, ಜೂನ್.27: ರಾಜಧಾನಿಯಲ್ಲಿ ಖಾಸಗಿ ಡೆಂಟಲ್ ಆಸ್ಪತ್ರೆಗಳಿಂದ ಬಡ ಜನರ ಸುಲಿಗೆ ಬಗ್ಗೆ ಸಾಕಷ್ಟು ದೂರುಗಳು ಸರ್ಕಾರಕ್ಕೆ ಕೇಳಿ ಬಂದಿವೆ. ಹೀಗಾಗಿ ರಾಜಧಾನಿಯಲ್ಲಿ ಸರ್ಕಾರಿ ಡೆಂಟಲ್ ಕ್ಲಿನಿಕ್ (Government Dental Clinic) ಶುರು ಮಾಡುವಂತೆ ಆರೋಗ್ಯ ಇಲಾಖೆ (Karnataka Health Department) ಹಾಗೂ ಸರ್ಕಾರಕ್ಕೆ (Karnataka Government) ಪತ್ರ ಬರೆದು ಜನರು ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಡೆಂಟಲ್ ಕ್ಲಿನಿಕ್ ಗಳ ಆರಂಭಕ್ಕೆ ಮನವಿ ಬೆನ್ನಲೆ ನಮ್ಮ ಕ್ಲಿನಿಕ್ ಗಳ ಮಾದರಿಯಲ್ಲೇ ಬೆಂಗಳೂರಿನ ಪ್ರತಿ ವಲಯದಲ್ಲಿ ಉಚಿತ ದಂತ ಚಿಕಿತ್ಸಾಲಯಗಳ ಆರಂಭಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಬೆಂಗಳೂರಿನ ಸರ್ಕಾರಿ ಡೆಂಟಲ್ ಕಾಲೇಜ್ ಗಳ ಸಹಯೋಗದೊಂದಿಗೆ ಡೆಂಟಲ್ ಕ್ಲಿನಿಕ್ ಆರಂಭಕ್ಕೆ ಚಿಂತನೆ ನಡೆದಿದೆ. ಸದ್ಯ ಬಡ ಹಾಗೂ ಮದ್ಯಮ ವರ್ಗದ ಜನರು ಬೆಂಗಳೂರಿನಲ್ಲಿ ಖಾಸಗಿ ದಂತ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಪಡೆಯುವುದು ದುಬಾರಿಯಾಗಿದೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಸಾವಿರಾರೂ ರೂಪಾಯಿ ಬಿಲ್ ಮಾಡಲಾಗ್ತಿದೆ. ಹೀಗಾಗಿ ಸರ್ಕಾರಿ ದಂತ ಚಿಕಿತ್ಸಾಲಯಗಳ ಪ್ರಾರಂಭಿಸುವಂತೆ ಸಾಕಷ್ಟು ಜನರು ಸರ್ಕಾರಕ್ಕೆ ಮನವಿ ಕೂಡಾ ಮಾಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಬೆಂಗಳೂರಿನ ಎಂಟು ವಲಯಗಳಲ್ಲಿ ಎಂಟು ದಂತ ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಮುಂದಾಗಿದೆ.
ಇದನ್ನೂ ಓದಿ: ರೋಗಿ ಸಾವು, ರೊಚ್ಚಿಗೆದ್ದ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ! ಆರು ಜನರ ವಿರುದ್ಧ ಎಫ್ಐಆರ್ ದಾಖಲು
ಡೆಂಟಲ್ ಕ್ಲಿನಿಕ್ಗಳಿಗೆ ವೈದ್ಯರ ನಿಯೋಜನೆ ಮಾಡಲು ಡೆಂಟಲ್ ಕಾಲೇಜುಗಳೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದು ವೈದ್ಯರನ್ನ ಪಡೆದು ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ. ಬಿಬಿಎಂಪಿ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಡೆಂಟಲ್ ಕಾಲೇಜ್ಗಳ ಸಹಯೋಗದೊಂದಿಗೆ ರಾಜಧಾನಿಯಲ್ಲಿ ಡೆಂಟಲ್ ಕ್ಲಿನಿಕ್ ಶುರು ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಸಾರ್ಕರ ಅನುಮತಿ ನೀಡಿದ್ರೆ ಮುಂದಿನ ಮೂರು ತಿಂಗಳಲ್ಲಿ ಎಂಟು ವಲಯಗಳಲ್ಲಿ ಡೆಂಟಲ್ ಕ್ಲಿನಿಕ್ ಆರಂಭವಾಗಲಿದೆ.
ಒಟ್ನಲ್ಲಿ ಸರ್ಕಾರ ಪ್ರಾರಂಭದ ಹಂತದಲ್ಲಿ ನಮ್ಮ ಕ್ಲಿನಿಕ್ ಮಾದರಿಯಲ್ಲಿ ಡೆಂಟಲ್ ಕ್ಲಿನಿಕ್ ಶುರು ಮಾಡಲು ಪ್ಲಾನ್ ಮಾಡಿದ್ದು ಬಡ ರೋಗಿಗಳ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಯೋಜನೆಯಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಅಂತಾ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ