ಟ್ರಾಫಿಕ್​​ನಿಂದಾಗಿ ಬೆಂಗಳೂರಿಗೆ ವರ್ಷಕ್ಕೆ 19 ಸಾವಿರ ಕೋಟಿ ನಷ್ಟ ! ಅಧ್ಯಯನ ವರದಿ

|

Updated on: Aug 07, 2023 | 2:56 PM

ಬೆಂಗಳೂರು ಜಗತ್ತಿಗೆ ಸಿಲಿಕಾನ್​ ಸಿಟಿ ಎಂದೇ ಪ್ರಕ್ಯಾತಿ ಪಡೆದಿದೆ. ಹಾಗೇ ಟ್ರಾಫಿಕ್​ನಿಂದಾಗಿ ಕುಖ್ಯಾತಿಯನ್ನೂ ಗಳಿಸಿದೆ. ಜನರು ಪ್ರತಿನಿತ್ಯ ಟ್ರಾಫಿಕ್​ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಟ್ರಾಫಿಕ್​ ಸಮಸ್ಯೆಯಿಂದ ​ಬೆಂಗಳೂರಿಗೆ ವರ್ಷಕ್ಕೆ 19,725 ಕೋಟಿ ರೂ. ನಷ್ಟವಾಗುತ್ತಿದೆ.

ಟ್ರಾಫಿಕ್​​ನಿಂದಾಗಿ ಬೆಂಗಳೂರಿಗೆ ವರ್ಷಕ್ಕೆ 19 ಸಾವಿರ ಕೋಟಿ ನಷ್ಟ ! ಅಧ್ಯಯನ ವರದಿ
ಬೆಂಗಳೂರು ಟ್ರಾಫಿಕ್​
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಜಗತ್ತಿಗೆ ಸಿಲಿಕಾನ್​ ಸಿಟಿ (Silicon City) ಎಂದೇ ಪ್ರಕ್ಯಾತಿ ಪಡೆದಿದೆ. ಹಾಗೇ ಟ್ರಾಫಿಕ್​ನಿಂದಾಗಿ (Traffic) ಕುಖ್ಯಾತಿಯನ್ನೂ ಗಳಿಸಿದೆ. ಜನರು ಪ್ರತಿನಿತ್ಯ ಟ್ರಾಫಿಕ್​ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ನಗರದಲ್ಲಿ ಟ್ರಾಫಿಕ್​​ ಸಮಸ್ಯೆಯನ್ನು ಕಡಿಮೆ ಮಾಡಲು ನಗರ ಸಂಚಾರ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಟ್ರಾಫಿಕ್​ ಸಮಸ್ಯೆಯಿಂದ ​ಬೆಂಗಳೂರಿಗೆ ವರ್ಷಕ್ಕೆ 19,725 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ತಿಳಿಸಿದೆ.

ಟ್ರಾಫಿಕ್​ ವಿಳಂಬ, ದಟ್ಟಣೆ, ಸಿಗ್ನಲ್​ಗಳಲ್ಲಿ ನಿಲುಗಡೆ, ಸಮಯ ವ್ಯರ್ಥ, ಇಂಧನ ವ್ಯರ್ಥ ಮತ್ತು ಟ್ರಾಫಿಕ್​ಗೆ ಸೇರಿದಂತೆ ಇತರ ಎಲ್ಲ ಅಂಶಗಳಿಂದಾಗಿ ಬೆಂಗಳೂರಿಗೆ ಭಾರಿ ನಷ್ಟವಾಗಿದೆ. ಸುಗಮ ಸಾರಿಗೆಗೆ ಸಂಬಂಧಿಸಿದಂತೆ ಹಲವಾರು ಸರ್ಕಾರಗಳು ಮತ್ತು ಸ್ಮಾರ್ಟ್​​ ಸಿಟಿಗಳ ಸಲಹೆಗಾರರೂ ಆಗಿರುವ ಶ್ರೀಹರಿ ಅವರು ಸಂಚಾರ ನಿರ್ವಹಣೆ, ರಸ್ತೆ ಯೋಜನೆ ಮೇಲ್ಸೇತುವೆಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಶಿಫಾರಸುಗಳ ವರದಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೆ ಸಲ್ಲಿಸಿದ್ದಾರೆ.

ನಗರದಲ್ಲಿ ಸಂಪೂರ್ಣ ಕಾರ್ಯನಿರ್ವಹಣೆಯ 60 ಫ್ಲೈಓವರಗಳಿವೆ. ಹೀಗದ್ದರೂ ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ಗಳಲ್ಲಿ ನಿಲುಗಡೆ, ವೇಗವಾಗಿ ಚಲಿಸುವ ವಾಹನಗಳ ಅಡಚಣೆ, ಇಂಧನ ವ್ಯರ್ಥದಿಂದಾಗಿ ಐಟಿ ಹಬ್ ಬೆಂಗಳೂರಿಗೆ 19,725 ಕೋಟಿ ರೂ. ನಷ್ಟವಾಗಿದೆ ಎಂದು ಶ್ರೀಹರಿ ಮತ್ತು ಅವರ ತಂಡ ಹೇಳಿದೆ.
2023 ರಲ್ಲಿ ಬೆಂಗಳೂರು 88 ಚದರ ಕಿಲೋಮೀಟರ್‌ನಿಂದ 985 ಚದರ ಕಿಲೋಮೀಟರ್‌ಗೆ ವಿಸ್ತರಿಸಿದೆ. ಇದನ್ನು 1,100 ಚದರ ಕಿಮೀಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳ ಗುಣಮಟ್ಟ ಮತ್ತು ಸಂಖ್ಯೆ ಹೆಚ್ಚಬೇಕಿದೆ ಎಂದರು.

ಇದನ್ನೂ ಓದಿ: ಪ್ರಯಾಣ ನಿರಾಕರಿಸಿದ್ದಕ್ಕೆ ಬಾಲಕನಿಗೆ 4.75 ಲಕ್ಷ ರೂ. ನೀಡಲು ಲುಫ್ತಾನ್ಸಾ ಏರ್‌ಲೈನ್ಸ್​​ಗೆ ಬೆಂಗಳೂರು ಗ್ರಾಹಕರ ನ್ಯಾಯಾಲಯ ಆದೇಶ

“ಜನಸಂಖ್ಯೆಯ ತೀರ್ವ ಬೆಳವಣಿಗೆ ಮತ್ತು ಅವರ ಉದ್ಯೋಗ ಸಾಮರ್ಥ್ಯದ ವೇಗವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಜನಸಂಖ್ಯೆ, ಉದ್ಯೋಗ ಸಾಮರ್ಥ ಹಾಗೂ ಮೂಲಸೌಕರ್ಯದ ನಡುವಿನ ಕೊರತೆಯು ವಿಳಂಬ, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಮತ್ತು ಪರೋಕ್ಷ ವೆಚ್ಚದ ವಿಷಯದಲ್ಲಿ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ತಂಡವು ತಿಳಿಸಿದೆ.

ದಟ್ಟಣೆಯನ್ನು ನಿವಾರಿಸಲು ರಸ್ತೆ ಬದಿಯ ಪಾರ್ಕಿಂಗ್ ನಿಷೇಧಿಸಬೇಕು. ಫುಟ್ಬಾತ್​ಗಳನ್ನು ಕಡ್ಡಾಯವಾಗಿ ಪಾದಚಾರಿಗಳಿಗೆ ಮೀಸಲಾಗಿಡಬೇಕು. ಸಾರಿಗೆ ತಜ್ಞನಾದ ನಾನು ಬೆಂಗಳೂರಿನಲ್ಲಿ ವಾಹನ ನಿಲುಗಡೆ ಇಲ್ಲದ ಒಂದು ರಸ್ತೆಯನ್ನು ತೋರಿಸಲು ವಿಫಲನಾಗಿದ್ದೇನೆ ಎಂದು ಶ್ರೀಹರಿ ಅವರು ಕಳವಳ ವ್ಯಕ್ತಪಡಿಸಿದರು.
ಮುಂದಿನ 25 ವರ್ಷಗಳಲ್ಲಿ ಬೆಂಗಳೂರಿಗೆ ಅಗತ್ಯವಿರುವ ಟ್ರಾಫಿಕ್ ಅನ್ನು ಸರಾಗಗೊಳಿಸುವ ಸಲುವಾಗಿ ಶ್ರೀಹರಿ ಮತ್ತು ಅವರ ತಂಡವು ಮೆಟ್ರೋ, ಮೊನೊರೈಲ್, ಅಧಿಕ ಸಾಮರ್ಥ್ಯದ ಬಸ್‌ಗಳಂತಹ ಸಮೂಹ ಸಾರಿಗೆಗಳ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ