ರೂಲ್ಸ್​​ ಬ್ರೆಕ್​ ಮಾಡಿದ್ದಕ್ಕೆ ಸಾಕ್ಷಿ ಕೇಳಿದ ಯುವಕ: ಫೋಟೋ ಸಹಿತ ಉತ್ತರ ನೀಡಿದ ಟ್ರಾಫಿಕ್‌ ಪೊಲೀಸ್‌!

ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ ಹಾಕಿದ್ದ ಪೊಲೀಸರಿಗೆ ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಉತ್ತರ ನೀಡಿದ ಬೆಂಗಳೂರು ಟ್ರಾಫೀಕ್​ ಪೊಲೀಸ್​​

ರೂಲ್ಸ್​​ ಬ್ರೆಕ್​ ಮಾಡಿದ್ದಕ್ಕೆ ಸಾಕ್ಷಿ ಕೇಳಿದ ಯುವಕ: ಫೋಟೋ ಸಹಿತ ಉತ್ತರ ನೀಡಿದ ಟ್ರಾಫಿಕ್‌ ಪೊಲೀಸ್‌!
ಟ್ರಾಫೀಕ್​​ ಪೊಲೀಸರಿಗೆ ಸಾಕ್ಷ್ಯ ಕೇಳಿದ್ದ ಯುವಕ
Updated By: ವಿವೇಕ ಬಿರಾದಾರ

Updated on: Oct 22, 2022 | 5:59 PM

ಬೆಂಗಳೂರು: ಬೆಂಗಳೂರು ಟ್ರಾಫೀಕ್​​ ಪೊಲೀಸರಿಗೆ (Bengaluru Traffic police) ಸವಾಲ್​ ಎಸೆದು ಯುವಕನೋರ್ವ ಪೇಚಿಗೆ ಸಿಲುಕಿದ್ದಾನೆ. ನಿಯಮ ಮೀರಿ ಸಂಚರಿಸಿದ್ದಕ್ಕೆ, ಟ್ರಾಫೀಕ್​ ಪೊಲೀಸರು ದಂಡ  (fine) ವಿಧಿಸಿದ್ದಾರೆ. ಇದಕ್ಕೆ ಯುವಕ ದಂಡ ಪಾವತಿಸದೆ ದಂಡದ ಪಾವತಿ ಸ್ಲಿಪ್​​ನ್ನು ಟ್ವೀಟ್​ ಮಾಡಿ ಸವಾಲ್​ ಎಸದಿದ್ದಾನೆ. ಬೆಂಗಳೂರಿನ ಫಿಲೆಕ್ಸ್​​ ರಾಜ್​ ಎಂಬ ಯುವಕ ಹೆಲ್ಮೆಟ್​ ಧರಿಸದೆ ಸ್ಕೂಟರ್​ನಲ್ಲಿ ಸಂಚರಿಸಿದ್ದಾನೆ. ಇದಕ್ಕೆ ಟ್ರಾಫೀಕ್​​ ಪೊಲೀಸರು ಫಿಲೆಕ್ಸ್​​ ರಾಜ್ ಸ್ಕೂಟರ್​ನ ನಂಬರ್​ ಪ್ಲೇಟ್ ಚಿತ್ರ ಸಹಿತ, ದಂಡ ಸ್ಲಿಫ್​​ನ್ನು ರಾಜ್​ಗೆ ಕಳುಹಿಸಿದ್ದಾರೆ. ಆದರೆ ರಾಜ್​ ದಂಡ ಕಟ್ಟದೆ  ಸ್ಕೂಟರ್​ನಲ್ಲಿ ಇದ್ದಿದ್ದು ನಾನೇ ಎಂಬುವುದಕ್ಕೆ ಏನು ಸಾಕ್ಷಿ, ನಾನು ದಂಡ ಕಟ್ಟಲ್ಲ  ಎಂದು ಟ್ವೀಟ್​ರ​ನಲ್ಲಿ ಟ್ವೀಟ್​ ಮಾಡಿದ್ದಾನೆ.

@blrcitytraffic @BlrCityPolice ನಾನು ಹೆಲ್ಮೇಟ್​​ ಧರಿಸಿಲ್ಲ ಎಂಬುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ದಯವಿಟ್ಟು ಸರಿಯಾದ ಸಾಕ್ಷಿ ನೀಡಿ. ಈ ಹಿಂದೆಯೂ ಇದೆ ರೀತಿಯಾಗಿತ್ತು, ಆಗ ನಾನು ದಂಡ ಕಟ್ಟಿದ್ದೆ ಆದರೆ ಈಗ ನಾನು ದಂಡ ಕಟ್ಟಲ್ಲ ಎಂದು ಫಿಲೆಕ್ಸ್​​ ರಾಜ್ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾನೆ.

ಕೆಲವು ನಿಮಿಷಗಳ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಟ್ರಾಫೀಕ್​ ಪೊಲೀಸರು, ರಾಜ್​​ ಹೆಲ್ಮೆಟ್​​ ಇಲ್ಲದೆ ಸಂಚರಿಸುತ್ತಿದ್ದ ಭಾವಚಿತ್ರವನ್ನು ರಾಜ್​​ಗೆ ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ. ನಂತರ ರಾಜ್​​ ಇದಕ್ಕೆ ಪ್ರತಿಕ್ರಿಯಿಸಿ ಬೆಂಗಳೂರು ಟ್ರಾಫೀಕ್​ ಪೊಲೀಸರಿಗೆ ಧನ್ಯವಾದಗಳು. ಈ ರೀತಿ ಪ್ರಶ್ನೆ ಮಾಡುವುದು ಇದು ಸಾರ್ವಜನಿಕರ ಕರ್ತವ್ಯ. ಬೆಂಗಳೂರು ಟ್ರಾಫೀಕ್​ ಪೊಲೀಸರಿಗೆ ನಾನು ಅಭಿನಂದಿಸುತ್ತೇನೆ. ಈಗ ನಾನು ದಂಡವನ್ನು ಕಟ್ಟುತ್ತೇನೆ ಎಂದು ಟ್ವೀಟ್​ ಮಾಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:57 pm, Sat, 22 October 22