ಬೆಂಗಳೂರು: ನಗರದಲ್ಲಿ ಶೀಘ್ರದಲ್ಲಿಯೇ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ (National Common Mobility Card – NCMC) ಪರಿಚಯಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ನಿಗಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರವು ಆರಂಭಿಸಿರುವ ‘ಒಂದು ದೇಶ ಒಂದು ಕಾರ್ಡ್’ ಯೋಜನೆಯ ಭಾಗವಾಗಿ ಹೊಸ ಕಾರ್ಡ್ಗಳನ್ನು ಪರಿಚಯಿಸಲಾಗುವುದು ಎಂದು ಮೆಟ್ರೋ ನಿಗಮ (BMRCL) ಹೇಳಿದೆ. ಈ ಸಾರಿಗೆ ಕಾರ್ಡ್ಗಳನ್ನು ವಿವಿಧ ರಾಜ್ಯಗಳ ಸಾರಿಗೆ ನಿಗಮಗಳಲ್ಲಿ ಹಾಗೂ ಮೆಟ್ರೋ ಮತ್ತಿತರ ಸಾರಿಗೆ ವ್ಯವಸ್ಥೆಗಳಲ್ಲಿ ಈ ಕಾರ್ಡ್ಗಳನ್ನು ಬಳಸಬಹುದು. ಬೆಂಗಳೂರಿನಲ್ಲಿ 2023ರಿಂದ ಈ ಕಾರ್ಡ್ಗಳನ್ನು ಜಾರಿಗೊಳಿಸಲಾಗುವುದು ಎಂದು ಬುಧವಾರ ನಿಗಮವು ಹೇಳಿದೆ.
ಕಳೆದ ಡಿಸೆಂಬರ್ 2022ರಲ್ಲಿ ಮೆಟ್ರೋ ರೈಲುಗಳಲ್ಲಿ 1.69 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ನಿಗಮವು ₹ 40.30 ಕೋಟಿ ಆದಾಯ ಪಡೆದಿತ್ತು. ಹೊಸ ವರ್ಷಾಚರಣೆಯ ದಿನ (ಡಿ 31-ಜ1) ಅತಿಹೆಚ್ಚು ಪ್ರಯಾಣಿಕರು (6.41 ಲಕ್ಷ) ಮೆಟ್ರೋ ರೈಲುಗಳಲ್ಲಿ ಸಂಚರಿಸಿದ್ದರು.
ಮುಂಬೈ ಮೆಟ್ರೋದಲ್ಲಿ ಆರಂಭ
ಮುಂಬೈ ಮೆಟ್ರೋ ನಿಗಮವು ಕಾಮನ್ ಮೊಬಿಲಿಟಿ ಕಾರ್ಡ್ಗಳನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಿತ್ತು. ಆದರೆ ಬೆಂಗಳೂರಿನಲ್ಲಿ ಈ ಯೋಜನೆ ಆರಂಭವಾಗಲಿದೆ ಎಂಬ ಮಾತುಗಳು ಬಹಳ ಹಿಂದಿನಿಂದ ಕೇಳಿಬರುತ್ತಿತ್ತು. ಈ ಯೋಜನೆ ಆರಂಭವಾದರೆ ಒಂದೇ ಕಾರ್ಡ್ ಅನ್ನು ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲಿಗೆ ಬಳಸಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2019ರಲ್ಲಿ ಈ ಕಾರ್ಡ್ಗೆ ಚಾಲನೆ ನೀಡಿದ್ದರು. ಯೋಜನೆಯ ಅನುಷ್ಠಾನಕ್ಕೆ ಖಾಸಗಿ ಬ್ಯಾಂಕ್ ಒಂದಕ್ಕೆ ಬೆಂಗಳೂರು ಮೆಟ್ರೋ ನಿಗಮವು ಹೊಣೆಗಾರಿಕೆ ನೀಡಿತ್ತು. ಜೂನ್ 2020ರಂದು ಈ ಯೋಜನೆ ಆರಂಭಕ್ಕೆ ಮೊದಲ ಗಡುವಾಗಿತ್ತು. ಆದರೆ ಗಡುವು ಮುಗಿದು ಎರಡೂವರೆ ವರ್ಷಗಳು ಉರುಳಿದರೂ ಸಾಮಾನ್ಯ ಸಾರಿಗೆ ಕಾರ್ಡ್ಗಳನ್ನು ಪರಿಚಯಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: Lalbagh Flower Show: ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಕೇವಲ 30 ರೂಗಳಲ್ಲಿ ಎಲ್ಲಿಗೆ ಬೇಕಾದ್ರು ಪ್ರಯಾಣಿಸಬಹುದು
ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 26 January 23