Lalbagh Flower Show: ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಕೇವಲ 30 ರೂಗಳಲ್ಲಿ ಎಲ್ಲಿಗೆ ಬೇಕಾದ್ರು ಪ್ರಯಾಣಿಸಬಹುದು
ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕಾಗಿ ಮೆಟ್ರೋ ಪ್ರಯಾಣಿಕರು ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ 30 ರೂಪಾಯಿ ದರದಲ್ಲಿ ಪ್ರಯಾಣಿಸಬಹುದು.
ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್(BMRCL) ಸಿಹಿ ಸುದ್ದಿ ನೀಡಿದೆ. ಜನವರಿ 26ರ ಗಣರಾಜ್ಯೋತ್ಸವ(Republic Day 2023) ವಿಶೇಷ ಹಿನ್ನೆಲೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ(Lalbagh Flower Show) ಏರ್ಪಡಿಸಲಾಗಿದ್ದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು 30ರೂ. ಮಾತ್ರ ಟಿಕೆಟ್ ದರ ನಿಗಧಿಪಡಿಸಲಾಗಿದೆ.
ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕಾಗಿ ಮೆಟ್ರೋ ಪ್ರಯಾಣಿಕರು ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ 30 ರೂಪಾಯಿ ದರದಲ್ಲಿ ಪ್ರಯಾಣಿಸಬಹುದು. ಜೊತೆಗೆ ಜನವರಿ 26ರ ಗುರುವಾರ ಫಲಪುಷ್ಟ ಪ್ರದರ್ಶನ ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದ್ದು, ಅಂದು ಶೋ ನೋಡಲು ಬರುವ ಜನರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಪೇಪರ್ ಟಿಕೆಟ್ ವ್ಯವಸ್ಥೆ ಕಲ್ಪಿಸುತ್ತಿದೆ.
ಇದನ್ನೂ ಓದಿ: ಮೆಟ್ರೋ ರೈಲಿನಲ್ಲಿ ಆಗ ‘ಮಂಜುಲಿಕಾ’, ಈಗ ‘ಮನಿ ಹೀಸ್ಟ್’ ಏನಿದೆಲ್ಲ?
ಗುರುವಾರ ಬೆಳಿಗ್ಗೆ 10 ರಿಂದ ರಾತ್ರಿ 8 ರ ನಡುವೆ ಲಾಲ್‌ಬಾಗ್‌ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಕೇವಲ 30 ರೂ ದರದ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು. ಹಾಗೂ ಗುರುವಾರ ಮಾತ್ರ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ಗಳನ್ನು ಯಾವುದೇ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಖರೀದಿಸಬಹುದು. ಲಾಲ್‌ಬಾಗ್‌ನಲ್ಲಿ, ಟಿಕೆಟ್‌ಗಳು ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:09 am, Wed, 25 January 23