ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆ, ಜನರಿಗೆ 4 ಕೋಟಿ ರೂ. ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್

|

Updated on: Apr 19, 2023 | 8:19 AM

ರೈಸ್ ಪುಲ್ಲಿಂಗ್ ಯಂತ್ರ ಖರೀದಿಗೆ ಯುಕೆ ಸರ್ಕಾರದೊಂದಿಗೆ ಒಪ್ಪಂದ ಆಗಿದೆ ಎಂದು ನಂಬಿಸಿ ಜನರಿಗೆ 4 ಕೋಟಿ ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್.

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆ, ಜನರಿಗೆ 4 ಕೋಟಿ ರೂ. ಪಂಗನಾಮ ಹಾಕಿದ ಮಾಜಿ ಪೊಲೀಸ್ ಅರೆಸ್ಟ್
ಬಂಧನ
Follow us on

ಬೆಂಗಳೂರು: ವೈಜ್ಞಾನಿಕ ತನಿಖೆಗಾಗಿ ಯುನೈಟೆಡ್ ಕಿಂಗ್‌ಡಮ್(UK) ಸರ್ಕಾರವು ತನ್ನಿಂದ ರೈಸ್ ಪುಲ್ಲಿಂಗ್ ಯಂತ್ರವನ್ನು ಖರೀದಿಸುತ್ತಿದೆ ಎಂದು ಹೇಳಿ ಸುಮಾರು 4 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಮಾಜಿ ಪೊಲೀಸ್ ಪೇದೆ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರದ ನಿವಾಸಿ ನಟೇಶ್ ವಿ ಆರ್ (44) ಪ್ರಮುಖ ಆರೋಪಿಯಾಗಿದ್ದು ರಾಮನಗರ ನಿವಾಸಿಗಳಾದ ವೆಂಕಟೇಶ್ ಮತ್ತು ಸೋಮಶೇಖರ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಯುಕೆ ಸರ್ಕಾರವು ನನ್ನ ಜೊತೆ ರೈಸ್ ಪುಲ್ಲಿಂಗ್ ಮಷೀನ್ ಖರೀದಿ ಒಪ್ಪಂದ ಮಾಡಿಕೊಂಡಿದ್ದು ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಲ್ಲಿ 60,000 ಕೋಟಿ ರೂಪಾಯಿಗಳನ್ನು ಹಾಕಿದೆ. ಇದನ್ನು ಪಡೆಯಲು ದಾಖಲೆ ಪ್ರಕ್ರಿಯೆ ಆರಂಭಿಸಬೇಕು. ಹೀಗಾಗಿ ನನಗೆ ಹಣ ಬೇಕು ಎಂದು ಸಂತ್ರಸ್ತರನ್ನು ನಂಬಿಸಿ ಅವರಿಂದ ಆರೋಪಿ ನಟೇಶ್ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಅಧಿಕಾರಿಗಳ ಪ್ರಕಾರ, ನಟೇಶ್ ಮತ್ತು ಅವರ ಸಹಚರರು ಯಂತ್ರವನ್ನು ಮಾರಾಟ ಮಾಡಿದ ನಂತರ ನಾಲ್ವರು ಸಂತ್ರಸ್ತರಿಗೆ, ಇಬ್ಬರು ಉದ್ಯಮಿಗಳು, ವೈದ್ಯರು ಮತ್ತು ಎಂಜಿನಿಯರ್‌ಗಳಿಗೆ ತಲಾ 5 ಕೋಟಿ ರೂಪಾಯಿ ಪಾವತಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಪುಲಿಕೇಶಿನಗರ ಪೊಲೀಸರಿಂದ ರೈಸ್ ಪುಲ್ಲಿಂಗ್ ದಂಧೆ ಡೀಲ್ ಪ್ರಕರಣ; ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್ತು

ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಆರೋಪಿ ನಟೇಶ್

ಸಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ನಟೇಶ್ ಕೆಲಸದ ನಡುವೆಯೂ ಹಣ ಮಾಡುವ ಆಸೆಗೆ ಬಿದ್ದಿದ್ದರು. ರೈಸ್ ಪುಲ್ಲಿಂಗ್ ದಂಧೆಯ ಆಮಿಷಕ್ಕೆ ಬಲಿಯಾಗಿದ್ದರು. ನಂತರ ಹಣಕಾಸು ಹೊಡೆತಕ್ಕೆ ಸಿಕ್ಕ ಈತ ಪೊಲೀಸ್ ಕೆಲಸ ಬಿಟ್ಟು ತಾನೇ ರೈಸ್ ಪುಲ್ಲಿಂಗ್ ದಂಧೆಗೆ ಇಳಿದು ಹಣ ಮಾಡಲು ಮುಂದಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಈ ಮೂವರು ಆರೋಪಿಗಳು ಅದೃಷ್ಟದ ವಸ್ತು ಕೊಡೊದಾಗಿ ಆಮಿಷವೊಡ್ಡಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ರು. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ಜನರಿಂದ ಲಕ್ಷಾಂತರ ಹಣ ಪಡೆಯುತ್ತಿದ್ರು. ನಂತರ ಒಂದು ಮೆಷಿನ್ ಮೂಲಕ ಡೆಮೊ ಕೊಟ್ಟು ಸುಲಭವಾಗಿ ಯಾಮಾರಿಸ್ತಿದ್ರು. ಅದಕ್ಕು ಹೆಚ್ಚಾಗಿ ಡೀಲ್ ನಡೆಸುವಾಗ ಇವರೇ ಆ ವಸ್ತುವನ್ನು ಸರ್ಟಿಫಿಕೇಟ್ ನೀಡುವಂತೆ ಬಿಂಬಿಸುತಿದ್ರು. ಅದಕ್ಕೆ ಸ್ಪೇಸ್ ಇಂಡಸ್ಟ್ರೀಸ್ ನಲ್ಲಿ ಕೋಟ್ಯಾಂತರ ರೂ ಮಾರ್ಕೆಟ್ ಇದೆ ಎಂದು ನಬಿಸುತಿದ್ರು. ಹೀಗೆ ಸುಮಾರು 28 ಲಕ್ಷ ಹಣ ವಂಚನೆ ಮಾಡಿದ್ದ ಈ ಮೂವರು ಹಲವರಿಂದ ಹಣ ಪಡೆದು ರೈಸ್ ಪುಲ್ಲಿಂಗ್ ಮೆಷಿನ್ ಕೊಡದೆ ವಂಚಿಸುತ್ತಿದ್ದರು.

ಇನ್ನೂ ಬಂಧಿತ ಆರೋಪಿಗಳ ಬಳಿ 28 ಲಕ್ಷ ನಗದು, ಒಂದೂವರೆ ಕೆಜಿ ಅಷ್ಟು ಚಿನ್ನಾಭರಣ ಹಾಗೂ ಮೂರು ಐಷಾರಾಮಿ ಕಾರುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:19 am, Wed, 19 April 23