
ಬೆಂಗಳೂರು, ಜ.5: ಬೆಂಗಳೂರಿಗರಿಗೆ ಮತ್ತೊಂದು ಶಾಕ್ (Bengaluru parking fees) ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ, ಸಿಕ್ಕ ಸಿಕ್ಕ ಕಡೆ ವಾಹನ ನಿಲುಗಡೆ ಮಾಡುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನರಿಗೆ ಶುಲ್ಕ ವಿಧಿಸುವ ಮೂಲಕ ಬೆಂಗಳೂರು ಜನರಿಗೆ ಪಾರ್ಕಿಂಗ್ ರೂಲ್ಸ್ ಮಾಡುವ ನಿಯಮವನ್ನು ಹೇಳಿಕೊಡುವ ಕೆಲಸವನ್ನು ಮಾಡುತ್ತಿದೆ. ಇನ್ಮುಂದೆ ಸಿಬಿಡಿ, ಹೆಬ್ಬಾಳ ಮತ್ತು ಯಲಹಂಕದಂತಹ ಪ್ರದೇಶಗಳಲ್ಲಿನ ಬೀದಿಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಲಿದೆ. ವಿವಿಧ ವಾಹನಗಳ ಪಾರ್ಕಿಂಗ್ ಶುಲ್ಕಗಳು ನಿಗದಿ ಮಾಡಿದೆ. ಅವುಗಳು ಈ ಕೆಳಂಗಿನಂತಿದೆ.
ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್‌ಗೆ ಗಂಟೆಗೆ 30 ರೂ. ಶುಲ್ಕ ವಿಧಿಸಲಾಗಿದೆ. ದ್ವಿಚಕ್ರ ವಾಹನ ಮಾಲೀಕರು ಗಂಟೆಗೆ 15 ರೂ. ಪಾವತಿಸಬೇಕಾಗುತ್ತದೆ. ದೈನಂದಿನ ಪಾಸ್‌ಗೂ ಅರ್ಜಿ ಸಲ್ಲಿಸಬಹುದು, ಇದು ನಾಲ್ಕು ಚಕ್ರದ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ 150 ಮತ್ತು 75 ರೂ. ಎಂದು ನಿಗದಿ ಮಾಡಿದೆ. ಮಾಸಿಕ ಪಾಸ್‌ಗಳಿಗೆ, ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ 3,000 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 1,500 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ 2,000 ಫಾಲೋವರ್ಸ್ ಗಳಿಸಿದ ಮಹಿಳೆ: ಕೇಕ್ ಕಟ್ ಮಾಡಿ ಸಂಭ್ರಮಿಸಿದ ಬಾಸ್
Bengaluru will soon start collecting parking fees on select streets in areas including CBD, Hebbal & Yelahanka.
Parking charges: ₹30 per hour for four-wheelers & ₹15 per hour for two-wheelers. Daily passes at ₹150 and ₹75 & monthly passes at ₹3,000 and ₹1,500, respectively… pic.twitter.com/bCnGa6ALWE
— ChristinMathewPhilip (@ChristinMP_) January 3, 2026
ಹೆಬ್ಬಾಳ ವಿಭಾಗದ ಟ್ಯಾಂಕ್ ಬಂಡ್ ರಸ್ತೆ, ತರಳಬಾಳು ರಸ್ತೆ ಮತ್ತು ಭೂಪಸಂದ್ರ ಮುಖ್ಯ ರಸ್ತೆ. ಯಲಹಂಕ ಹೊಸ ಪಟ್ಟಣದ ವಾರ್ಡ್ ಸಂಖ್ಯೆ 05 ರಲ್ಲಿ 1 ನೇ ಎ, 13 ನೇ ಎ ಮುಖ್ಯ ರಸ್ತೆಗಳು ಮತ್ತು 3 ನೇ ಬಿ, 16 ನೇ ಬಿ, 15 ನೇ ಎ ಅಡ್ಡ ರಸ್ತೆಗಳು ಮತ್ತು ಸಂದೀಪ್ ಉನ್ನಿಕೃಷ್ಣ ರಸ್ತೆ ಹಾಗೂ ಇತರ ಪ್ರದೇಶಗಳಿಗೂ ಇದನ್ನು ಮುಂದುವರಿಸಲಾಗುವುದು. ಈ ಮೂಲಕ ಸಿಕ್ಕ ಸಿಕ್ಕ ಕಡೆ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಈಗಾಗಲೇ ಜನರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಕಿರುವ ತೆರಿಗೆ ಹೈರಾಣಾಗಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ