ಬೆಂಗಳೂರು: ಪರಿಚಿತ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿದ್ದ ಪ್ರಕರಣ ಸಂಬಂಧ ಈಶಾನ್ಯ CEN ಠಾಣೆ ಪೊಲೀಸರು ಆರೋಪಿ ಸಮರ್ ಪರಿಮಣಿಕನ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಆರೋಪಿ ಸಮರ್ ಪರಿಮಣಿಕನನ್ನು ಬೆಂಗಳೂರಿನ ಹಲಸೂರಿನ ಬಾಡಿಗೆ ಮನೆಯಲ್ಲಿ ಬಂಧಿಸಲಾಗಿದೆ. ಆರೋಪಿಯು ಮಹಿಳೆಯ ಖಾಸಗಿ ವಿಡಿಯೋ ತೋರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಹಾಗೂ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ. ಪರಿಮಣಿಕನ ಒತ್ತಡಕ್ಕೆ ಮಹಿಳೆ ಮಣಿಯದಿದ್ದಾಗ ಆಕೆಯ ಖಾಸಗಿ ವಿಡಿಯೋ ವೈರಲ್ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Bengaluru: ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಧರ್ಮದರ್ಶಿ ಮುನಿಕೃಷ್ಣ ಅರೆಸ್ಟ್
ಕೊಡಿಗೇಹಳ್ಳಿಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೋರ್ಸ್ ಕಲಿಯಲು ಬಂದಿದ್ದ ಮಹಿಳೆಗೆ ಆರೋಪಿ ಸಮರ್ ಬ್ಯೂಟಿ ಪಾರ್ಲರ್ಗೆ ಗ್ರಾಹಕನಾಗಿ ಬಂದು ಪರಿಚಯಮಾಡಿಕೊಂಡಿದ್ದ. ಒಂದೂವರೆ ವರ್ಷದ ಪರಿಚಯ ಸ್ನೇಹವಾಗಿತ್ತು. ಇದಾದ ಬಳಿಕ ಮಹಿಳೆಯ ಖಾಸಗಿ ಫೋಟೋ, ವಿಡಿಯೋವನ್ನು ಸಂಗ್ರಹಿಸಿದ್ದ. ಹಾಗೂ ಹೆಚ್ಚು ಹಣ ಸಂಪಾದನೆ ಆಮಿಷವೊಡ್ಡಿ ಡ್ಯಾನ್ಸ್ ಬಾರ್ಗೂ ಸೇರಿಸಿದ್ದ. ಸಮರ್ ಕಿರುಕುಳ ಸಹಿಸಲಾಗದೆ ಪಶ್ಚಿಮ ಬಂಗಾಳಕ್ಕೆ ಮಹಿಳೆ ತೆರಳಿದ್ದಳು. ಪಶ್ಚಿಮ ಬಂಗಾಳಕ್ಕೆ ತೆರಳಿದ ನಂತರ ಯುವಕನ ಜತೆ ವಿವಾಹವಾಗಿದ್ದಳು. 6 ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದು ಪತಿ ಜತೆ ವಾಸವಾಗಿದ್ದಳು. ಮಹಿಳೆ ಹಿಂದಿರುಗಿದ ನಂತರ ಆರೋಪಿ ಸಮರ್ ಆಕೆಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಹಣ ನೀಡಲು, ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಖಾಸಗಿ ವಿಡಿಯೋ ವೈರಲ್ ಮಾಡಿದ್ದಾನೆ. ಇದಾದ ಬಳಿಕ ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಮಹಿಳೆ ದೂರು ನೀಡಿದ್ದು ಆರೋಪಿ ಸಮರ್ ಪರಿಮಣಿಕನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:53 am, Sun, 8 January 23