ಬೆಂಗಳೂರು: ದೇಶದಾದ್ಯಂತ ಕಾರುಗಳನ್ನ (Cars) ಕದಿಯುತ್ತಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್ (41) ರಾಜಸ್ಥಾನ್ (Rajasthan) ಮೂಲದವನಾಗಿದ್ದು, ಬಂಧಿತನಿಂದ ಕೋಟ್ಯಾಂತರ ಮೌಲ್ಯದ 21 ವಿವಿಧ ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ಎಂಬಿಎ ಪದವೀಧರನಾಗಿರುವ ಆರೋಪಿ ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮಿ ಇಫ್ ಯು ಕ್ಯಾನ್ ಎಂದು ಸವಾಲ್ ಹಾಕಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
2003ರಿಂದ ಈವರೆಗೆ 60ಕ್ಕೂ ಅಧಿಕ ಕಾರುಗಳನ್ನ ಕಳ್ಳತನ ಮಾಡಿದ್ದಾನೆ. 2019ರ ಬಳಿಕ ಬೆಂಗಳೂರಿನಲ್ಲೂ ಸಾಲು ಸಾಲು ಕಳ್ಳತನ ಮಾಡಿದ್ದಾನೆ. ವಿದೇಶದಿಂದ ಡಿವೈಸ್ಗಳನ್ನ ತರಿಸಿಕೊಂಡು ಕೃತ್ಯ ಎಸಗಿರುವುದು ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ. ಕಾರ್ ಸಾಫ್ಟ್ವೇರ್ಗಳನ್ನ ಹ್ಯಾಕ್ ಮಾಡಿ ಕಾರ್ ಅನ್ ಲಾಕ್ ಮಾಡುತ್ತಿದ್ದ. ಕೆಲವು ಕಾರ್ಗಳ ಮ್ಯಾನ್ಯುಲ್ ಲಾಕ್ಗಳ ದಾಖಲೆಯನ್ನು ಕದ್ದು ತಯಾರಿಸುತಿದ್ದ. ಕದ್ದ ಕಾರಿನಲ್ಲೇ ಆರೋಪಿ ರಾಜಸ್ಥಾನಕ್ಕೆ ತೆರಳುತಿದ್ದ.
ಕದ್ದ ಕಾರುಗಳನ್ನ ಬಂಧಿತ ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್ ಬಳಿಕ ಆ ಕಾರುಗಳನ್ನು ಮಾಫಿಯಾ ಜನರಿಗೆ ಮಾರಾಟ ಮಾಡುತಿದ್ದ. ಅಮೃತಹಳ್ಳಿ ಪೊಲೀಸರು ರಾಜಸ್ಥಾನದಲ್ಲಿ ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ನಕ್ಷತ್ರ ಆಮೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ:
ಬೆಂಗಳೂರು ಅರಣ್ಯ ಸಂಚಾರಿ ದಳದ ಕಾರ್ಯಾಚರಣೆಯಲ್ಲಿ ನಕ್ಷತ್ರ ಆಮೆಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದ ಬೆಂಗಳೂರು ಉತ್ತರ ತಾಲೂಕಿನ ಮತ್ತಿಕೆರೆ ಬಳಿ ಮೊಹಮ್ಮದ್ ಹಾರೂನ್(27)ನನ್ನು ವಶಕ್ಕೆ ಪಡೆಯಲಾಗಿದೆ. ಎರಡು ಜೀವಂತ ನಕ್ಷತ್ರ ಆಮೆ, ಆಕ್ಟಿವಾ ಹೊಂಡಾ ಜಪ್ತಿ ಮಾಡಿಲಾಗಿದ್ದು, ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಯಡಿ ಅರಣ್ಯ ಮೊಕದ್ದಮೆ ದಾಖಲಾಗಿದೆ.
ಇದನ್ನೂ ಓದಿ
ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್ನಲ್ಲಿ ಹೆಂಡತಿ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಗಂಡ
ಈ ರೀತಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್ನ ಅಪಾಯ ಹೆಚ್ಚು: ಇಲ್ಲಿದೆ ಮಾಹಿತಿ
Published On - 12:38 pm, Wed, 16 March 22