ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್ನಲ್ಲಿ ಹೆಂಡತಿ ಕಾಲು ಕತ್ತರಿಸಿ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಗಂಡ
ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಂಡತಿಯ ಕಾಲು ಕತ್ತರಿಸಿದ್ದೇನೆ, ಆಸ್ಪತ್ರೆಗೆ ಸೇರಿಸಬೇಕು ಅಂತ ಬಾಬು ಹೇಳಿಕೊಂಡಿದ್ದಾನೆ. ಸದ್ಯ ಆರೋಪಿ ತುಮಕೂರು ನಗರ ಪೊಲೀಸರ ವಶದಲ್ಲಿದ್ದು, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು: ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್ನಲ್ಲಿ ಹೆಂಡತಿಯ (Wife) ಕಾಲು (Leg) ಕತ್ತರಿಸಿದ ಗಂಡ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ಘಟನೆಯಲ್ಲಿ ಮಧುಗಿರಿ ಮೂಲದ ಅನಿತಾ ಎಂಬ ಮಹಿಳೆ ಗಾಯಗೊಂಡಿದ್ದು, ಪತಿ ಬಾಬುನನ್ನು (34) ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ವರ್ಷದ ಹಿಂದೆ ಬಾಬು ಅನಿತಾಳನ್ನು ಮದುವೆಯಾಗಿದ್ದ. ಬೆಳಗ್ಗೆ 6 ಗಂಟೆ ಹೊತ್ತಿಗೆ ಅಶೋಕ ಲಾಡ್ಜ್ಗೆ ದಂಪತಿ ಬಂದಿತ್ತು. ಬ್ಯಾಗ್ನಲ್ಲಿ ಬಾಬು ಮಚ್ಚು ತೆಗೆದುಕೊಂಡು ಬಂದಿದ್ದ. ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲ್ಲೇ ಹೆಂಡತಿಯನ್ನು ಲಾಡ್ಜ್ಗೆ ಕರೆದುಕೊಂಡು ಬಂದಿದ್ದ.
ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಂಡತಿಯ ಕಾಲು ಕತ್ತರಿಸಿದ್ದೇನೆ, ಆಸ್ಪತ್ರೆಗೆ ಸೇರಿಸಬೇಕು ಅಂತ ಬಾಬು ಹೇಳಿಕೊಂಡಿದ್ದಾನೆ. ಸದ್ಯ ಆರೋಪಿ ತುಮಕೂರು ನಗರ ಪೊಲೀಸರ ವಶದಲ್ಲಿದ್ದು, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗೆಳೆಯನನ್ನೇ ಕೊಂದು ಹೂತು ಹಾಕಿದ್ದ ಕೇಸ್ ಬಯಲು: ತಂಗಿಯನ್ನು ಪ್ರೀತಿಸಿದ್ದಕ್ಕೆ ಗೆಳೆಯನನ್ನೇ ಕೊಂದು ಹೂತು ಹಾಕಿದ್ದ ಪ್ರಕರಣ ಬಯಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಅನಿಲ್ ರಾಜ್(22) ಕೊಲೆಯಾದ ಯುವಕ. ಈತ ಗೆಳೆಯ ಪ್ರಸಾದ್ ತಂಗಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ವಿಚಾರವಾಗಿ ಗೆಳೆಯರ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಳಿಕವು ಗೆಳೆಯರು ಒಟ್ಟಿಗೇ ಓಡಾಡಿಕೊಂಡಿದ್ದರು. ಮಾ.14ರಂದು ಮತ್ತೊಬ್ಬ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆ ಬಳಿ ಬಂದಾಗ ಅನಿಲ್ ಕೊಲೆ ನಡೆದಿದೆ.
ಅನಿಲ್ ಕೊಲೆ ಮಾಡಿ ಪ್ರಸಾದ್ ಮನೆ ಸಮೀಪದ ಹೊಂಡದಲ್ಲಿ ಮೃತದೇಹವನ್ನು ಹೂತುಹಾಕಿದ್ದ. ಪ್ರಕರಣ ಸಂಬಂಧ ಗೆಳೆಯ ಪ್ರಸಾದ್, ಪ್ರಸಾದ್ನ ತಂಗಿ, ತಾಯಿ ಜಯಲಕ್ಷ್ಮಿ, ಸಹೋದರ ಮೋಹನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ಯುವಕನ ಶವ ಪತ್ತೆ: ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ನಗರ ಬಳಿ ರಕ್ತದ ಮಡುವಿನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಹರಿಹರದ ಮಹಾತ್ಮಾ ಗಾಂಧಿ ಕಾಂಪ್ಲೆಕ್ಸ್‌ನ ಮಳಿಗೆ ಎದುರು ಶವ ಪತ್ತೆಯಾಗಿದೆ. ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸಿಪಿಐ ಸತೀಶ್, ಪಿಎಸೈ ಸುನಿಲ್ ತೇಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
ಸೋತಿದ್ದು ದೇವರ ಇಚ್ಛೆ ಎಂದಿದ್ದ ನವಜೋತ್ ಸಿಂಗ್ ಸಿಧು; ಪಂಜಾಬ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ
Crime News: ಎರಡು ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು, ಒಂಬತ್ತು ಜನರಿಗೆ ಗಾಯ
Published On - 11:51 am, Wed, 16 March 22