ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡದಲ್ಲಿ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ಕ್ಯಾತ ಮೃತ ಕಾರ್ಮಿಕ. ಎಚ್.ಡಿ. ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡ ಇದಾಗಿದೆ. ನಿರ್ಲಕ್ಷ್ಯತನದಿಂದ ಕಾರ್ಮಿಕನ ಸಾವು ಹಿನ್ನೆಲೆ ಮೇಸ್ತ್ರಿಯ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡದಲ್ಲಿ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 15, 2022 | 5:57 PM

ಬೆಂಗಳೂರು: ಕಾಲು ಜಾರಿ ಬಿದ್ದು ಕಟ್ಟಡ ಕಾರ್ಮಿಕನೊಬ್ಬ ಅಸುನೀಗಿದ್ದಾನೆ. ತಲಘಟ್ಟಪುರ ಠಾಣಾ ವ್ಯಾಪ್ತಿಯ ರಘುವನಹಳ್ಳಿ ಗೇಟ್ ಬಳಿ ಈ ದುರ್ಘಟನೆ ನಡೆದಿದೆ. ಕ್ಯಾತ (35) ಮೃತ ಕಾರ್ಮಿಕ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡ ಇದಾಗಿದೆ. ನಿರ್ಲಕ್ಷ್ಯತನದಿಂದ ಕಾರ್ಮಿಕನ ಸಾವು ಹಿನ್ನೆಲೆ ಮೇಸ್ತ್ರಿಯ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ 304A ಅಡಿ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಸಕ್ಕರೆ ಬೆಂಕಿಗಾಹುತಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಉಗಾರ್ ಶುಗರ್ಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬಾಯ್ಲರ್ ಬಳಿ ಹೊತ್ತಿಕೊಂಡ ಬೆಂಕಿ ಕಾರ್ಖಾನೆಗೆ ಆವರಿಸಿ ಕೊಟ್ಯಾಂತರ ರೂಪಾಯಿ ಹಾನಿಯುಂಟಾಗಿದೆ. ಐದು ಆಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಚಿಕ್ಕೋಡಿ ರಾಯಬಾಗ ಅಥಣಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿದ್ದಾರೆ. 20 ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಸಕ್ಕರೆ ಬೆಂಕಿಗಾಹುತಿಯಾಗಿದೆ. ಕಾರ್ಖಾನೆಯ ಸಲಕರಣೆಗಳೂ ಸಹ ಬೆಂಕಿಯ ಕೆನ್ನಾಲಿಗೆಗೆ ಭಸ್ಮಗೊಂಡಿವೆ. ಅದೃಷ್ಠವಷಾತ್ ಯಾವುದೇ ಸಿಬ್ಬಂದಿಗೆ ಅಪಾಯವಾಗಿಲ್ಲ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಗ್ನಿ ಅವಘಡ, ಎರಡು ಎತ್ತು ಜೀವಂತ ದಹನ ಕಲಬುರಗಿ: ಸೇಡಂ ತಾಲೂಕಿನ ಮುಷ್ಟಹಳ್ಳಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಎತ್ತುಗಳು ಜೀವಂತ ದಹನಗೊಂಡಿವೆ. ಚಂದ್ರಣ್ಣ ನೂಲಿ ಎಂಬುವವರಿಗೆ ಸೇರಿದ ಎತ್ತುಗಳು ಇವಾಗಿವೆ. ಎರಡು ಎತ್ತು ಮತ್ತು ಮೇವಿನ ಬಣವಿ, ಗುಡಿಸಲು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಆಕಸ್ಮಿಕವಾಗಿ ಮೇವಿನ ಬಣವಿಗೆ ಹೊತ್ತಿಕೊಂಡ ಬೆಂಕಿಯಿಂದ ಈ ಅನಾಹುತ ನಡೆದಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋದ ವಿದ್ಯಾರ್ಥಿಗಳು

ಇದನ್ನೂ ಓದಿ: ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

Published On - 5:42 pm, Tue, 15 March 22